ಪಾಕ್: ಅಳಿಯನಿಗೆ ಯಾರೂ ನೀಡದಂತಾ ಗಿಫ್ಟ್ ಕೊಟ್ಟ ಅತ್ತೆ, ವಿಡಿಯೋ ವೈರಲ್!

ಅಳಿಯನಿಗೆ ಕಾರು, ಚಿನ್ನಾಭರಣ, ಫ್ಲಾಟ್ ಗಳನ್ನು ಗಿಫ್ಟ್ ನೀಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಅತ್ತೆ ಯಾರೂ ನೀಡದಂತಾ ಉಡುಗೊರೆಯನ್ನು ನೀಡಿದ್ದು ನೆಟಿಗರು ನಿಬ್ಬೇರುವಂತೆ ಮಾಡಿದೆ.
ಪ್ರತ್ಯಕ್ಷ ಚಿತ್ರ
ಪ್ರತ್ಯಕ್ಷ ಚಿತ್ರ

ಇಸ್ಲಾಮಾಬಾದ್: ಅಳಿಯನಿಗೆ ಕಾರು, ಚಿನ್ನಾಭರಣ, ಫ್ಲಾಟ್ ಗಳನ್ನು ಗಿಫ್ಟ್ ನೀಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಅತ್ತೆ ಯಾರೂ ನೀಡದಂತಾ ಉಡುಗೊರೆಯನ್ನು ನೀಡಿದ್ದು ನೆಟಿಗರು ನಿಬ್ಬೇರುವಂತೆ ಮಾಡಿದೆ. 

ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದೆ. ಮದುವೆ ಬಳಿಕ ಅತ್ತೆ ಎಕೆ-47 ರೈಫಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಆರತಕ್ಷತೆ ವೇಳೆ ವಧು-ವರ ವೇದಿಕೆ ಮೇಲೆ ಕುಳಿತಿದ್ದರು. ಈ ವೇಳೆ ಸಂಬಂಧಿಕರು ಉಡುಗೊರೆ ನೀಡಿ, ಆಶೀರ್ವದಿಸಿ ತೆರಳುತ್ತಿದ್ದರು. ಈ ವೇಳೆ ವರನ ಅತ್ತೆ ವೇದಿಕೆ ಮೇಲೆ ಬಂದು ಆತನ ಹಣೆಗೆ ಮುತ್ತಿಟ್ಟು ನಂತರ ಎಕೆ-47 ರೈಫಲ್ ನೀಡುತ್ತಾರೆ. ಇದನ್ನು ಆಶ್ಚರ್ಯ ಕಣ್ಣುಗಳನ್ನು ನೋಡಿದ ವರ ನಂತರ ಅದನ್ನು ಖುಷಿಯಿಂದಲೇ ಸ್ವೀಕರಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com