ಆಫ್ಘಾನಿಸ್ತಾನದ ಘಜ್ನಿಯಲ್ಲಿ ಕಾರ್ ಬಾಂಬ್ ದಾಳಿ: 27 ಭದ್ರತಾ ಸಿಬ್ಬಂದಿ ಬಲಿ

ಪೂರ್ವ ಆಫ್ಘಾನಿಸ್ತಾನ ನಗರವಾದ ಘಜ್ನಿಯ ಸೇನಾ ನೆಲೆಯಲ್ಲಿ ಕಾರ್ ಬಾಂಬ್ ಸ್ಫೋಟ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 27 ಕ್ಕೆ ಏರಿಕೆಯಾಗಿದ್ದು, 17ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲವನ್ನು ಉಲ್ಲೇಖಿಸಿ ಪಜ್ವೋಕ್ ಆಫ್ಘನ್‍ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಫ್ಘಾನಿಸ್ತಾನದ ಘಜ್ನಿಯಲ್ಲಿ ಕಾರ್ ಬಾಂಬ್ ದಾಳಿ: 27 ಭದ್ರತಾ ಸಿಬ್ಬಂದಿ ಬಲಿ

ಮಾಸ್ಕೋ / ಕಾಬೂಲ್:  ಪೂರ್ವ ಆಫ್ಘಾನಿಸ್ತಾನ ನಗರವಾದ ಘಜ್ನಿಯ ಸೇನಾ ನೆಲೆಯಲ್ಲಿ ಕಾರ್ ಬಾಂಬ್ ಸ್ಫೋಟ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 27 ಕ್ಕೆ ಏರಿಕೆಯಾಗಿದ್ದು, 17ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲವನ್ನು ಉಲ್ಲೇಖಿಸಿ ಪಜ್ವೋಕ್ ಆಫ್ಘನ್‍ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದಾಳಿಯಲ್ಲಿ ಮೃತಪಟ್ಟವರಲ್ಲಿ 21 ಸೈನಿಕರು ಸೇರಿದ್ದಾರೆ ಎಂದು ಘಜ್ನಿಯ ಆಸ್ಪತ್ರೆಯ ಮುಖ್ಯಸ್ಥ ಬಾಜ್ ಮೊಹಮ್ಮದ್ ಹೆಮ್ಮತ್ ಹೇಳಿದ್ದಾರೆ.

ಆತ್ಮಾಹುತಿ ಬಾಂಬರ್ ಕಾರಿನ ಮೂಲಕ ಸ್ಫೋಟಕಗಳನ್ನು ಸ್ಫೋಟಿಸಿದ್ದಾರೆ ಎಂದು ಪ್ರಾಂತೀಯ ಗವರ್ನರ್ ವಾಹಿದುಲ್ಲಾ ಜುಮಾಜಾದಾ ವಕ್ತಾರರನ್ನು ಉಲ್ಲೇಖಿಸಿ ಟೋಲೋನ್ಯೂಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಸುಮಾರು ಎರಡು ದಶಕಗಳಲ್ಲಿ ಹತ್ತಾರು ಸಾವಿರ ಮಂದಿಯನ್ನು ಹತ್ಯೆ ಮಾಡಿದ ಯುದ್ಧವನ್ನು ಕೊನೆಗೊಳಿಸಲು ಸರ್ಕಾರ ಮತ್ತು ತಾಲಿಬಾನ್ ಶಾಂತಿ ಮಾತುಕತೆಗಳಲ್ಲಿ ತೊಡಗಿರುವ ಅಡುವೆಯೇ ಈ ಘಟನೆ ನಡೆದಿದೆ. ಆದರೆ ಇದುವರೆಗೆ ದಾಳಿಯ ಹೊಣೆಯನ್ನು ಯಾವೊಂದು ಉಗ್ರ ಸಂಘಟನೆ ಸಹ ಹೊತ್ತುಕೊಂಡಿಲ್ಲ.

ಈ ಕೆಲ ದಿನಗಳ ಹಿಂದೆ ಐತಿಹಾಸಿಕ ನಗರಿ ಬಾಮಿಯಾನ್‌ನಲ್ಲಿ ಎರಡು ಬಾಂಬ್‌ ಸ್ಫೋಟಕ್ಕೆ 14 ಮಂದಿ ಬಲಿಯಾಗಿದ್ದರು. ಭಾನುವಾರ ನಡೆದ ಬಾಂಬ್ ಸ್ಫೋಟವು ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಬಹುದೊಡ್ಡ ಆತ್ಮಾಹುತಿ ದಾಳಿಯಾಗಿದೆ.  ಸೆಪ್ಟೆಂಬರ್ 12 ರಂದು ಕತಾರಿ ರಾಜಧಾನಿ ದೋಹಾದಲ್ಲಿ ಶಾಂತಿ ಮಾತುಕತೆ ಪ್ರಾರಂಭವಾದಾಗಿನಿಂದ ಹಿಂಸಾಚಾರ ಹೆಚ್ಚಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com