ಕೋವಿಡ್ ಲಸಿಕೆ ಸಚಿವರನ್ನು ನೇಮಕ ಮಾಡಿದ ಬ್ರಿಟನ್ ಸರ್ಕಾರ!

ಲಕ್ಷಾಂತರ ಜನರಿಗೆ ಕೊರೋನಾವೈರಸ್ ವಿರುದ್ಧ ಲಸಿಕೆ ಹಾಕುವ ಸಿದ್ಧತೆಯಲ್ಲಿರುವ ಬ್ರಿಟಿಷ್ ಸರ್ಕಾರ,  ಲಸಿಕಾ ಸಚಿವರೊಬ್ಬರನ್ನು ನೇಮಕ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಲಕ್ಷಾಂತರ ಜನರಿಗೆ ಕೊರೋನಾವೈರಸ್ ವಿರುದ್ಧ ಲಸಿಕೆ ಹಾಕುವ ಸಿದ್ಧತೆಯಲ್ಲಿರುವ ಬ್ರಿಟಿಷ್ ಸರ್ಕಾರ,  ಲಸಿಕಾ ಸಚಿವರೊಬ್ಬರನ್ನು ನೇಮಕ ಮಾಡಿದೆ.

ಕನ್ಸರ್ವೇಟಿವ್ ಶಾಸಕ ನಾಧಿಮ್ ಜಹಾವಿ ದಶಕಗಳಲ್ಲಿಯೇ  ದೇಶದ ಅತಿದೊಡ್ಡ ಲಸಿಕೆ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಯುಕೆ ಔಷಧೀಯ ನಿಯಂತ್ರಕ ಪ್ರಸ್ತುತ ಫಿಜರ್ ಮತ್ತು ಬಯೋ ಟೆಕ್ , ಆಕ್ಸ್ ಫರ್ಡ್ ಮತ್ತು ಅಸ್ತಾಜೆನೆಕಾ ಕಂಪನಿಗಳು  ಅಭಿವೃದ್ಧಿಪಡಿಸಿರುವ ಎರಡು ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಎದುರು ನೋಡುತ್ತಿದೆ.  ಅನುಮೋದನೆ ಸಿಕ್ಕರೆ  ಡಿಸೆಂಬರ್ 7 ರ ವಾರದಲ್ಲಿ ಫಿಜರ್ ಔಷಧಿಯ ಮೊದಲ ಡೋಸ್ ನ್ನು ಸ್ವೀಕರಿಸಲು ಆಸ್ಪತ್ರೆಗಳಿಗೆ ಹೇಳಲಾಗಿದೆ ಎಂದು ಗಾರ್ಡಿಯನ್ ನ್ಯೂಸ್ ಪೇಪರ್ ವರದಿ ಮಾಡಿದೆ.

ಮುಂಚೂಣಿ ಆರೋಗ್ಯ ಕಾರ್ಯಕರ್ತರು ಮತ್ತು ನರ್ಸಿಂಗ್ ಹೋಮ್ ನಿವಾಸಿಗಳಿಗೆ ಮೊದಲು ಲಸಿಕೆ ಹಾಕಲಾಗುವುದು, ನಂತರ 80 ವರ್ಷದವರಿಗೆ ಲಸಿಕೆ ನೀಡಲು ಆರಂಭಿಸಲಾಗುವುದು ಎಂದು ಯುಕೆ ಹೇಳಿದೆ. ಫಿಜರ್, ಬಯೋಟೆಕ್ ನ  40 ಮಿಲಿಯನ್ ಡೋಸ್ ಹಾಗೂ ಅಕ್ಸ್ ಫರ್ಡ್ ಮತ್ತು ಅಸ್ಟ್ರಾಜೆನೆಕಾದ 100 ಮಿಲಿಯನ್ ಡೋಸ್ ಗಳನ್ನು ಆದೇಶಿಸಿದೆ. 

ಒಟ್ಟಾರೆಯಾಗಿ, ದೇಶದ 67 ಮಿಲಿಯನ್ ಜನರಿಗೆ ಸಾಧ್ಯವಾದಷ್ಟು ಲಸಿಕೆ ನೀಡಲು ಸಿದ್ಧವಾಗಿರುವ ಯುಕೆ ಸರ್ಕಾರ,  ಏಳು ವಿಭಿನ್ನ ಉತ್ಪಾದಕರಿಂದ 355 ಮಿಲಿಯನ್ ಡೋಸ್ ಲಸಿಕೆಗಳನ್ನು ಖರೀದಿಸಲು ಒಪ್ಪಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com