ಸಿಪಿಇಸಿ ಯೋಜನೆ ಪೂರ್ಣಗೊಳಿಸಲು ಗಿಲ್ಗಿಟ್-ಬಾಲ್ಟೀಸ್ಥಾನ್ ವಿಲೀನಕ್ಕೆ ಪಾಕ್ ಯೋಜನೆ

ಕೋವಿಡ್-19 ನಿಂದಾಗಿ ಉಂಟಾಗಿರುವ ಅಸ್ಥಿರತೆಯನ್ನೇ ಬಳಕೆ ಮಾಡಿಕೊಂಡು ಪಾಕಿಸ್ತಾನ ಹಲವು ಅಕ್ರಮಗಳನ್ನೆಸಗುತ್ತಿದ್ದು, ಈಗ ಚೀನಾ ಒತ್ತಡಕ್ಕೆ ಮಣಿದು ಗಿಲ್ಗಿಟ್-ಬಾಲ್ಟೀಸ್ಥಾನ್ ನ್ನೂ ತನ್ನೊಂದಿಗೆ ವಿಲೀನಗೊಳಿಸಿಕೊಳ್ಳುವುದಕ್ಕೆ ಯತ್ನಿಸುತ್ತಿದೆ. 
ಪಾಕಿಸ್ತಾನ
ಪಾಕಿಸ್ತಾನ

ಇಸ್ಲಾಮಾಬಾದ್: ಕೋವಿಡ್-19 ನಿಂದಾಗಿ ಉಂಟಾಗಿರುವ ಅಸ್ಥಿರತೆಯನ್ನೇ ಬಳಕೆ ಮಾಡಿಕೊಂಡು ಪಾಕಿಸ್ತಾನ ಹಲವು ಅಕ್ರಮಗಳನ್ನೆಸಗುತ್ತಿದ್ದು, ಈಗ ಚೀನಾ ಒತ್ತಡಕ್ಕೆ ಮಣಿದು ಗಿಲ್ಗಿಟ್-ಬಾಲ್ಟೀಸ್ಥಾನ್ ನ್ನೂ ತನ್ನೊಂದಿಗೆ ವಿಲೀನಗೊಳಿಸಿಕೊಳ್ಳುವುದಕ್ಕೆ ಯತ್ನಿಸುತ್ತಿದೆ. 

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ (ಸಿಪಿಇಸಿ) ಯೋಜನೆ ಗಿಲ್ಗಿಟ್-ಬಾಲ್ಟಿಸ್ಥಾನ್ ಮೂಲಕ ಹಾದುಹೋಗಲಿದ್ದು ಈ ವರೆಗೂ ಸ್ವಾಯತ್ತತೆಯನ್ನು ಹೊಂದಿರುವ ಗಿಲ್ಗಿಟ್ ನಲ್ಲಿ ಸಿಪಿಇಸಿ ವಿರುದ್ಧ ಜನಾಭಿಪ್ರಾಯ ಮೂಡಿದೆ. 

ಚೀನಾ ತನ್ನ ವಸಾಹತನ್ನು ವಿಸ್ತರಿಸಿಕೊಳ್ಳುವ ಹವಣಿಕೆಯಲ್ಲಿದ್ದು, ಪಾಕಿಸ್ತಾನದೊಂದಿಗಿನ ಆರ್ಥಿಕ ಕಾರಿಡಾರ್ ಯೋಜನೆ ಅಂದುಕೊಂಡಂತೆ ಪೂರ್ಣಗೊಳಿಸುವುದಕ್ಕೆ ಗಿಲ್ಗಿಟ್-ಬಾಲ್ಟಿಸ್ತಾನ್ ನ್ನು ವಿಲೀನಗೊಳಿಸಿಕೊಳ್ಳುವಂತೆ ಪಾಕಿಸ್ತಾನಕ್ಕೆ ಒತ್ತಡ ಹಾಕುತ್ತಿದೆ. 

ಇದಕ್ಕೆ ಪೂರಕವೆಂಬಂತೆ, ಝೀ ನ್ಯೂಸ್ ಪ್ರಕಟಿಸಿರುವ ವರದಿಯ ಪ್ರಕಾರ,  ಪ್ರತಿಕ್ರಿಯೆ ನೀಡಿರುವ ಕಾಶ್ಮೀರ ವ್ಯವಹಾರಗಳ ಪಾಕಿಸ್ತಾನದ ಕೇಂದ್ರ ಸಚಿವ ಅಲಿ ಅಮಿನ್ ಗಿಲ್ಗಿಟ್-ಬಾಲ್ಟಿಸ್ಥಾನ್ ನ ಸ್ಟೇಟಸ್ ನ್ನು ಬದಲಾವಣೆ ಮಾಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದ್ದು ಅದನ್ನು ಪೂರ್ಣಪ್ರಮಾಣದ ಪಾಕಿಸ್ತಾನದ ಪ್ರಾಂತ್ಯವನ್ನಾಗಿಸಲಿದ್ದೇವೆ ಎಂದು ಹೇಳಿದ್ದಾರೆ. 
 
ಶೀಘ್ರವೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗಿಲ್ಗಿಟ್ ಗೆ ಭೇಟಿ ನೀಡಿ ಈ ಕುರಿತು ಔಪಚಾರಿಕ ಘೋಷಣೆಯನ್ನೂ ಮಾಡಲಿದ್ದಾರೆ ಎಂದು ಪಾಕ್ ಸಚಿವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com