ಕೋವಿಡ್-19 ಚಿಕಿತ್ಸೆ ನಡುವೆ ಆಸ್ಪತ್ರೆಯಿಂದ ಹೊರಬಂದ ಡೊನಾಲ್ಡ್ ಟ್ರಂಪ್: ವ್ಯಾಪಕ ಟೀಕೆ

ಕೋವಿಡ್-19 ಸೋಂಕಿಗೆ ಒಳಗಾಗಿದ್ದರೂ ಶಿಷ್ಟಾಚಾರ ಉಲ್ಲಂಘಿಸಿ ತನ್ನ ಬೆಂಬಲಿಗರನ್ನು ಭೇಟಿ ಮಾಡಲು ಮಿಲಿಟರಿ ಆಸ್ಪತ್ರೆಯಿಂದ ಕಾರಿನಲ್ಲಿ ಹೊರಬಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವೈದ್ಯಕೀಯ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.
ಆಸ್ಪತ್ರೆಯಿಂದ ಕಾರಿನಲ್ಲಿ ಹೊರಬಂದು ಬೆಂಬಲಿಗರತ್ತ ಕೈಬೀಸಿದ ಡೊನಾಲ್ಡ್ ಟ್ರಂಪ್
ಆಸ್ಪತ್ರೆಯಿಂದ ಕಾರಿನಲ್ಲಿ ಹೊರಬಂದು ಬೆಂಬಲಿಗರತ್ತ ಕೈಬೀಸಿದ ಡೊನಾಲ್ಡ್ ಟ್ರಂಪ್

ಬೆತೆಸ್ಡ: ಕೋವಿಡ್-19 ಸೋಂಕಿಗೆ ಒಳಗಾಗಿದ್ದರೂ ಶಿಷ್ಟಾಚಾರ ಉಲ್ಲಂಘಿಸಿ ತನ್ನ ಬೆಂಬಲಿಗರನ್ನು ಭೇಟಿ ಮಾಡಲು ಮಿಲಿಟರಿ ಆಸ್ಪತ್ರೆಯಿಂದ ಕಾರಿನಲ್ಲಿ ಹೊರಬಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವೈದ್ಯಕೀಯ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.

ಬುಲ್ಲೆಟ್ ಪ್ರೂಫ್ ವಾಹನದಲ್ಲಿ ಮಾಸ್ಕ್ ಧರಿಸಿಕೊಂಡು ಕುಳಿತ ಡೊನಾಲ್ಡ್ ಟ್ರಂಪ್ ಹೊರಗೆ ಮಾಧ್ಯಮದವರು, ಬೆಂಬಲಿಗರಿಗೆ ಕೈ ಬೀಸುತ್ತಿರುವ ವಿಡಿಯೊ ವೈರಲ್ ಆಗಿದೆ.ವಾಷಿಂಗ್ಟನ್ ನ ವಾಲ್ಟರ್ ರೀಡ್ ಮಿಲಿಟರಿ ಮೆಡಿಕಲ್ ಸೆಂಟರ್ ಹತ್ತಿರ ಡೊನಾಲ್ಡ್ ಟ್ರಂಪ್ ತಮ್ಮ ಕಾರಿನಲ್ಲಿ ಹೋಗಿದ್ದಾರೆ.

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಟ್ರಂಪ್ ಇನ್ನೂ ನೆಗೆಟಿವ್ ವರದಿ ಬಾರದೇ ಇರುವಾಗ ಆಸ್ಪತ್ರೆಯಿಂದ ಹೊರಬಂದು ತಮ್ಮ ಗುಪ್ತ ಸೇವೆ ರಕ್ಷಣೆಯನ್ನು ಉಲ್ಲಂಘಿಸಿದ್ದು ಎಷ್ಟು ಸರಿ ಎಂದು ತಜ್ಞರು ಪ್ರಶ್ನಿಸುತ್ತಿದ್ದಾರೆ.ದೇಶದ ಅಧ್ಯಕ್ಷರೇ ಈ ರೀತಿ ಕೊರೋನಾ ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ಪ್ರಜೆಗಳ ಪಾಡೇನು ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಕೋವಿಡ್-19 ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ, ಸಾರ್ವಜನಿಕ ಆರೋಗ್ಯ ಮಾರ್ಗಸೂಚಿ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಈ ಹಿಂದೆಯೇ ಟ್ರಂಪ್ ಬಗ್ಗೆ ಆರೋಪ ಕೇಳಿಬರುತ್ತಿತ್ತು. ನಿನ್ನೆ ಟ್ವಿಟ್ಟರ್ ನಲ್ಲಿ ಟ್ರಂಪ್ ಅವರು ಕೋವಿಡ್ ಬಗ್ಗೆ ಸಾಕಷ್ಟು ಕಲಿತುಕೊಂಡಿದ್ದೇನೆ, ಈಗ ನಿಜವಾಗಿಯೂ ಶಾಲೆಗೆ ಹೋದಂತೆ ಅನುಭವವಾಗುತ್ತಿದೆ ಎಂದು ಬರೆದುಕೊಂಡಿದ್ದರು.

ಆದರೆ ಆರೋಗ್ಯ ತಜ್ಞರು, ಟ್ರಂಪ್ ಏನೂ ಕಲಿತಲ್ಲ, ಅವರಿಗೆ ಕೊರೋನಾ ಬಗ್ಗೆ ಗಂಭೀರತೆ ಇನ್ನೂ ಬಂದಿಲ್ಲ ಎಂದು ಆರೋಪಿಸುತ್ತಾರೆ. ಕೊರೋನಾ ಸೋಂಕು ಕಡಿಮೆಯಾಗಿದ್ದರೂ ಅವರು 14 ದಿವಸ ಕ್ವಾರಂಟೈನ್ ಗೆ ಒಳಪಡಬೇಕು, ಬೇರೆ ಯಾರ ಸಂಪರ್ಕಕ್ಕೂ ಬರುವಂತಿಲ್ಲ, ಅಂತಹುದರಲ್ಲಿ ಅವರು ಆರಾಮಾಗಿ ಕಾರಿನಲ್ಲಿ ಓಡಾಡುವುದೆಂದರೆ ಏನರ್ಥ ಎಂದು ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿಯ ಮುಖ್ಯ ವಿಪತ್ತು ವೈದ್ಯಾಧಿಕಾರಿ ಜೇಮ್ಸ್ ಫಿಲಿಪ್ಸ್ ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com