ಕೋವಿಡ್-19 ಲಸಿಕೆ ವರ್ಷಾಂತ್ಯಕ್ಕೆ ಸಿದ್ಧವಾಗಬಹುದು: ಡಬ್ಲ್ಯುಎಚ್‌ಒ ಮುಖ್ಯಸ್ಥ

ಕೋವಿಡ್-19 ಲಸಿಕೆ ವರ್ಷಾಂತ್ಯಕ್ಕೆ ಸಿದ್ಧವಾಗುವ ಸಾಧ್ಯತೆಯಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೂಸ್ ಅಧಾನೊಮ್ ಘೆಬ್ರೆಯಸಸ್ ಹೇಳಿದ್ದಾರೆ.
ಟೆಡ್ರೂಸ್ ಅಧಾನೊಮ್ ಘೆಬ್ರೆಯಸಸ್
ಟೆಡ್ರೂಸ್ ಅಧಾನೊಮ್ ಘೆಬ್ರೆಯಸಸ್

ನ್ಯೂಯಾರ್ಕ್: ಕೋವಿಡ್-19 ಲಸಿಕೆ ವರ್ಷಾಂತ್ಯಕ್ಕೆ ಸಿದ್ಧವಾಗುವ ಸಾಧ್ಯತೆಯಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೂಸ್ ಅಧಾನೊಮ್ ಘೆಬ್ರೆಯಸಸ್ ಹೇಳಿದ್ದಾರೆ.

ಸಾಂಕ್ರಾಮಿಕ ರೋಗದ ಕಾರ್ಯಾಕಾರಿ ಮಂಡಳಿಯ ಎರಡು ದಿನಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಡಬ್ಲ್ಯೂಎಚ್ ಒ ನಿರ್ದೇಶಕ ಟೆಡ್ರೂಸ್ ಅಧಾನೊಮ್ ಘೆಬ್ರೆಯೆಸಸ್, ಮಾರಕ ಸಾಂಕ್ರಾಮಿಕ ರೋಗದ ವಿರುದ್ಧದ ಲಸಿಕೆ ನಮಗೆ ಅಗತ್ಯವಿದೆ.  ಈ ವರ್ಷಾಂತ್ಯಕ್ಕೆ ಅದು ಸಿದ್ಧವಾಗುವ ಭರವಸೆ ಇರುವುದಾಗಿ ತಿಳಿಸಿದರು.

9 ಪ್ರಯೋಗಿಕ ಲಸಿಕೆಗಳು ಮುಂಚೂಣಿಯಲ್ಲಿದ್ದು,ಡಬ್ಲೂ ಎಚ್ ಒ ನೇತೃತ್ವದಲ್ಲಿ  ಈ ವರ್ಷದೊಳಗೆ 2 ಮಿಲಿಯನ್ ಡೋಸ್ ನಷ್ಟು   ಕೋವಾಕ್ಸಿನ್ ಔಷಧಿಯನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com