ದೇಶದ ಆರ್ಥಿಕತೆ ಬಲಪಡಿಸಲು ಹೆಚ್-1ಬಿ ವೀಸಾ 'ವಿಶೇಷ ಪ್ರತಿಭಾವಂತ'ರಿಗೆ ಮಾತ್ರ ಮೀಸಲು: ಶ್ವೇತಭವನ

ದೇಶದ ಆರ್ಥಿಕತೆಯನ್ನು ಬಲಪಡಿಸಲು ಹೆಚ್-1ಬಿ ವೀಸಾವನ್ನು ವಿಶೇಷ ಪ್ರತಿಭಾವಂತರಿಗೆ ಮಾತ್ರ ಮೀಸಲಿಡಬೇಕೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಯಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ದೇಶದ ಆರ್ಥಿಕತೆಯನ್ನು ಬಲಪಡಿಸಲು ಹೆಚ್-1ಬಿ ವೀಸಾವನ್ನು ವಿಶೇಷ ಪ್ರತಿಭಾವಂತರಿಗೆ ಮಾತ್ರ ಮೀಸಲಿಡಬೇಕೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಯಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಈ ಕುರಿತು ನಿನ್ನೆ ತಡರಾತ್ರಿ ಪ್ರಕಟಣೆ ಹೊರಡಿಸಿರುವ ಶ್ವೇತಭವನ, ಅಮೆರಿಕಾದ ಕೆಲಸ ವೀಸಾ ನಿಯಮಗಳನ್ನು ಹೆಚ್ಚು ಜನಸ್ನೇಹಿಗೊಳಿಸುವ ಕಾರ್ಯದಲ್ಲಿ ಅಧ್ಯಕ್ಷ ಟ್ರಂಪ್ ಅವರು ನಿರತರಾಗಿದ್ದು, ಅತಿ ಹೆಚ್ಚು ಕೌಶಲ್ಯ ಹೊಂದಿರುವ ವಿದೇಶಿ ನೌಕರರಿಗೆ ಹೆಚ್-1ಬಿ ವೀಸಾ ನೀಡಲು ಮತ್ತು ಅದರೊಟ್ಟಿಗೆ ಅಮೆರಿಕನ್ನರ ಉದ್ಯೋಗ ಮತ್ತು ವೇತನವನ್ನು ಕಾಪಾಡಿ ದೇಶದ ಆರ್ಥಿಕತೆಯನ್ನು ಕೊರೋನಾ ಮಧ್ಯೆ ಹೆಚ್ಚಿಸಲು ಇದರಿಂದ ಸಹಕಾರಿಯಾಗಲಿದೆ ಎಂದು ಹೇಳಿದೆ.

ಹೆಚ್-1ಬಿ ವಲಸೆರಹಿತ ವೀಸಾ ಕಾರ್ಯಕ್ರಮದ ಬಗ್ಗೆ ಹೊಸ ನಿರ್ಬಂಧ ಹೇರಿಕೆ ಬಗ್ಗೆ ಅಮೆರಿಕಾದ ಟ್ರಂಪ್ ಸರ್ಕಾರ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಶ್ವೇತಭವನ ಈ ಪ್ರಕಟಣೆ ಹೊರಡಿಸಿದೆ. ಹೆಚ್-1ಬಿ ವಲಸೆರಹಿತ ವೀಸಾ ಅಮೆರಿಕಾದ ಕೆಲಸಗಾರರನ್ನು ರಕ್ಷಿಸಲು, ಸಮಗ್ರತೆ ಮರುಸ್ಥಾಪಿಸಲು ಮತ್ತು ಹೆಚ್-1ಬಿ ವೀಸಾ ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ಸಿಗುವಂತೆ ಮಾಡಲು ಸಹಕಾರಿಯಾಗುತ್ತದೆ. ಈ ವೀಸಾದ ಮೇಲೆ ಸಾವಿರಾರು ಭಾರತೀಯ ವೃತ್ತಿಪರರು ಅವಲಂಬಿಸಿಕೊಂಡಿದ್ದಾರೆ.

ಇನ್ನು ಕೇವಲ ಒಂದು ತಿಂಗಳಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಹೋಂಲ್ಯಾಂಡ್ ಸೆಕ್ಯುರಿಟಿ ಇಲಾಖೆ ಮಧ್ಯಂತರ ಅಂತಿಮ ಆದೇಶವನ್ನು ಹೊರಡಿಸಿದೆ. ವಿದೇಶಗಳ ನೌಕರರನ್ನು ತೆಗೆದುಕೊಳ್ಳುವುದರಿಂದ ಅಮೆರಿಕದ ಕೆಲಸಗಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಟ್ರಂಪ್ ಆಡಳಿತ ಬದ್ಧವಾಗಿದೆ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com