ಟಿಕ್ ಟಾಕ್ ಬ್ಯಾನ್ ಮಾಡಿ ಮಿತ್ರರಾಷ್ಟ್ರ ಚೀನಾಗೆ ಶಾಕ್ ನೀಡಿದ ಪಾಕಿಸ್ತಾನ!

ಚೀನಾದ ಟಿಕ್ ಟಾಕ್ ಆ್ಯಪ್ ಅನ್ನು ಭಾರತ ಬ್ಯಾನ್ ಮಾಡಿ ದಿಟ್ಟತನ ಪ್ರದರ್ಶಿಸಿದ ನಂತರ ಜಗತ್ತಿನ ಹಲವು ರಾಷ್ಟ್ರಗಳು ಈ ಆ್ಯಪ್ ಅನ್ನು ಬ್ಯಾನ್ ಮಾಡಿದ್ದವು. ಇದೀಗ ಚೀನಾ ಮಿತ್ರರಾಷ್ಟ್ರ ಪಾಕಿಸ್ತಾನ ಸಹ ಚೀನಾಗೆ ಶಾಕ್ ನೀಡಿದೆ. 

Published: 09th October 2020 08:16 PM  |   Last Updated: 09th October 2020 08:31 PM   |  A+A-


Xi-Tiktok-Imran

ಕ್ಸಿ-ಟಿಕ್ ಟಾಕ್-ಇಮ್ರಾನ್

Posted By : Vishwanath S
Source : Online Desk

ಇಸ್ಲಾಮಾಬಾದ್: ಚೀನಾದ ಟಿಕ್ ಟಾಕ್ ಆ್ಯಪ್ ಅನ್ನು ಭಾರತ ಬ್ಯಾನ್ ಮಾಡಿ ದಿಟ್ಟತನ ಪ್ರದರ್ಶಿಸಿದ ನಂತರ ಜಗತ್ತಿನ ಹಲವು ರಾಷ್ಟ್ರಗಳು ಈ ಆ್ಯಪ್ ಅನ್ನು ಬ್ಯಾನ್ ಮಾಡಿದ್ದವು. ಇದೀಗ ಚೀನಾ ಮಿತ್ರರಾಷ್ಟ್ರ ಪಾಕಿಸ್ತಾನ ಸಹ ಚೀನಾಗೆ ಶಾಕ್ ನೀಡಿದೆ. 

ಪಾಕಿಸ್ತಾನ ಸರ್ಕಾರದ ಸೂಚನೆಗಳನ್ನು ಪಾಲಿಸುವಲ್ಲಿ ಚೀನಾ ಆ್ಯಪ್ ವಿಫಲವಾಗಿದೆ. ಹೀಗಾಗಿ ಬ್ಯಾನ್ ಮಾಡುತ್ತಿದ್ದೇವೆ ಎಂದು ಪಾಕಿಸ್ತಾನ ಟೆಲಿಕಾಂ ಪ್ರಾಧಿಕಾರ ಆದೇಶ ಹೊರಡಿಸಿದೆ. 

ಪಾಕಿಸ್ತಾನ ಸರ್ಕಾರ ಈ ಹಿಂದೆ ಜುಲೈನಲ್ಲೇ ಚೀನಾಗೆ ಎಚ್ಚರಿಕೆ ನೀಡಿತ್ತು. ಟಿಕ್ ಟಾಕ್ ನಲ್ಲಿ ಅಶ್ಲೀಲ, ಅನೈತಿಕ, ಕಾನೂನು ಬಾಹಿರ ವಿಡಿಯೋಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆ್ಯಪ್ ಅನ್ನು ಬ್ಲಾಕ್ ಮಾಡುವುದಾಗಿ ಎಚ್ಚರಿಸಿತ್ತು. 

ಆದರೆ ಇಂತಹ ವಿಡಿಯೋಗಳು ಹೆಚ್ಚಾಗುತ್ತಿದ್ದರಿಂದ ಯುವಜನತೆ, ಮಕ್ಕಳ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಇದೀಗ ಆ್ಯಪ್ ಅನ್ನು ಬ್ಲಾಕ್ ಮಾಡಿದೆ. 

ಇದೇ ವೇಳೆ ಟಿಕ್ ಟಾಕ್ ಅಶ್ಲೀಲ ವಿಡಿಯೋಗಳನ್ನು ನಿಯಂತ್ರಣ ಮಾಡಿ. ತೃಪ್ತಿದಾಯಕ ಕಾರ್ಯವಿಧಾನವ್ನು ಅಳವಡಿಸಿಕೊಂಡರೆ ತಮ್ಮ ನಿರ್ಧಾರವನ್ನು ಪರಿಶೀಲಿಸುವುದಾಗಿ ಪಾಕ್ ಟೆಲಿಕಾಂ ಸಂಸ್ಧೆ ತಿಳಿಸಿದೆ. 

Stay up to date on all the latest ಅಂತಾರಾಷ್ಟ್ರೀಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp