ಅಮೆರಿಕ ಅಧ್ಯಕ್ಷೀಯ ಚುನಾವಣೆ: ಅಭ್ಯರ್ಥಿಗಳ ನಡುವಿನ ಎರಡನೇ ಚರ್ಚೆ ರದ್ದು 

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ದಿನಗಳಷ್ಟೇ ಉಳಿದಿದ್ದು, ಅಭ್ಯರ್ಥಿಗಳ ನಡುವಿನ ಎರಡನೇ ಚರ್ಚೆ ರದ್ದುಗೊಂಡಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ: ಅಭ್ಯರ್ಥಿಗಳ ನಡುವಿನ ಎರಡನೇ ಚರ್ಚೆ ರದ್ದು
ಅಮೆರಿಕ ಅಧ್ಯಕ್ಷೀಯ ಚುನಾವಣೆ: ಅಭ್ಯರ್ಥಿಗಳ ನಡುವಿನ ಎರಡನೇ ಚರ್ಚೆ ರದ್ದು

ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ದಿನಗಳಷ್ಟೇ ಉಳಿದಿದ್ದು, ಅಭ್ಯರ್ಥಿಗಳ ನಡುವಿನ ಎರಡನೇ ಚರ್ಚೆ ರದ್ದುಗೊಂಡಿದೆ.

ಡೊನಾಲ್ಡ್ ಟ್ರಂಪ್- ಜೋ ಬಿಡೇನ್ ನಡುವಿನ ಚರ್ಚೆಯನ್ನು ವರ್ಚ್ಯುಯಲ್ ಫಾರ್ಮಾಟ್ ನ ಮೂಲಕ ನಡೆಸಲು ಉದ್ದೇಶಿಸಲಾಗಿತ್ತು.

ಆದರೆ ಇದಕ್ಕೆ ಡೊನಾಲ್ಡ್ ಟ್ರಂಪ್ ಒಪ್ಪದ ಕಾರಣ ಚರ್ಚೆಯನ್ನು ರದ್ದುಗೊಳಿಸಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಕಡೆ ಗಮನ ನೀಡುತ್ತಿದ್ದ ವೈದ್ಯರ ತಂಡ ಅ.15 ರಂದು ನಡೆಯಬೇಕಿದ್ದ ಅಧ್ಯಕ್ಷೀಯ ಚರ್ಚೆಯನ್ನು ಅಧ್ಯಕ್ಷೀಯ ಚರ್ಚೆಗಳ ಮೇಲಿನ ಆಯೋಗ ರದ್ದುಗೊಳಿಸಿದೆ.

ಅ.22 ರಂದು ನಡೆಯಬೇಕಿರುವ ಅಂತಿಮ ಚರ್ಚೆಯತ್ತ ಆಯೋಗ ಗಮನ ಹರಿಸಲಿದೆ ಎಂದು ಸಿಪಿಡಿ ತಿಳಿಸಿದೆ.

ಬಿಡೆನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಧ್ಯಕ್ಷರು ಏನು ಮಾಡುತ್ತಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಪ್ರತಿ ಕ್ಷಣಕ್ಕೂ ಅವರು ಮನಸ್ಸು ಬದಲಾವಣೆ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆಯೋಗದ ಶಿಫಾರಸ್ಸುಗಳನ್ನು ಮಾತ್ರವೇ ಪಾಲಿಸುತ್ತೇನೆ ಎಂದು ಬಿಡೇನ್ ಹೇಳಿದ್ದಾರೆ. ಸೆ.29 ರಂದು ಟ್ರಂಪ್-ಬಿಡೇನ್ ಮೊದಲ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com