'ಎಲ್ಲರನ್ನೂ ಚುಂಬಿಸಬೇಕೆನಿಸುತ್ತಿದೆ': ಕೋವಿಡ್-19 ನಿಂದ ಚೇತರಿಸಿಕೊಂಡ ಟ್ರಂಪ್ ಫ್ಲೋರಿಡಾ ಸಮಾವೇಶದಲ್ಲಿ ಹೇಳಿಕೆ

ಕೋವಿಡ್-19 ನಿಂದ ಚೇತರಿಸಿಕೊಂಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಚಾರ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ. 
ಡೊನಾಲ್ಡ್ ಟ್ರಂಪ್‍
ಡೊನಾಲ್ಡ್ ಟ್ರಂಪ್‍

ಫ್ಲೋರಿಡಾ: ಕೋವಿಡ್-19 ನಿಂದ ಚೇತರಿಸಿಕೊಂಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಚಾರ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ. 

ಫ್ಲೋರಿಡಾದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಅಮೆರಿಕ ಅಧ್ಯಕ್ಷರು; "ಇನ್ನು 22 ದಿನಗಳಲ್ಲಿ ನಾವು ಮತ್ತೆ ಗೆಲ್ಲಲಿದ್ದೇವೆ, ಮತ್ತೆ ಶ್ವೇತಭವನವನ್ನು ಗೆಲ್ಲಲಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಕೋವಿಡ್-19 ನಿಂದ ಚೇತರಿಸಿಕೊಂಡ ಬಳಿಕ ತಾವು ಮತ್ತಷ್ಟು ಶಕ್ತಿಯುತವಾಗಿದ್ದು, ವೀಕ್ಷಕರಲ್ಲಿ ಎಲ್ಲರನ್ನೂ ಚುಂಬಿಸಬೇಕೆನಿಸುತ್ತಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಮಾಸ್ಕ್ ತೆಗೆದು ಜನಸಮೂಹದತ್ತ ಎಸೆದ ಟ್ರಂಪ್, ತಾವು ಜನರಿರುವೆಡೆಗೆ ನಡೆದು ಸುಂದರ ಯುವತಿಯರು, ತರುಣರಿಗೆ ಚುಂಬಿಸುತ್ತೇನೆ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕದ ಶ್ವೇತ ಭವನ ಟ್ರಂಪ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿ, ಅಮೆರಿಕ ಅಧ್ಯಕ್ಷರಿಗೆ ಕೋವಿಡ್-19 ನೆಗೆಟೀವ್ ಬಂದಿದೆ ಎಂದು ಸ್ಪಷ್ಟನೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com