ಕೊವಿಡ್-19 ಲಸಿಕೆ ಪ್ರಯೋಗ ಸ್ಥಗಿತಗೊಳಿಸಿದ 'ಜಾನ್ಸನ್ ಮತ್ತು ಜಾನ್ಸನ್' ಕಂಪನಿ

ಅಮೆರಿಕಾ ಮೂಲದ ಜಾನ್ಸನ್ ಮತ್ತು ಜಾನ್ಸನ್ ಕಂಪನಿಯು ತಾನು ಸಿದ್ಧಪಡಿಸಿರುವ ಕೊರೋನಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಅಮೆರಿಕಾ ಮೂಲದ ಜಾನ್ಸನ್ ಮತ್ತು ಜಾನ್ಸನ್ ಕಂಪನಿಯು ತಾನು ಸಿದ್ಧಪಡಿಸಿರುವ ಕೊರೋನಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 

ಕೊರೊನಾವೈರಸ್ ಲಸಿಕೆ ಪ್ರಯೋಗಗಳಲ್ಲಿ ಎಲ್ಲಾ ಡೋಸಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದು ಜಾನ್ಸನ್ ಮತ್ತು ಜಾನ್ಸನ್ ಕಂಪನಿ ಹೇಳಿದೆ.  

ಜಾನ್ಸನ್ ಕಂಪೆನಿ ತಯಾರಿಸಿರುವ ಲಸಿಕೆಯ 3ನೇ ಹಾಗೂ ಅಂತಿಮ ಹಂತದಲ್ಲಿ 60 ಸಾವಿರ ಜನರ ಮೇಲೆ ಕ್ಲಿನಿಕಲ್‌ ಪರೀಕ್ಷೆ ನಡೆಸುತ್ತಿತ್ತು. ಪ್ರಾಯೋಗಿಕ ಪರೀಕ್ಷೆಗೆ ಒಳಪಟ್ಟವರಿಗೆ ವಿವರಿಸಲಾಗದ ಕಾಯಿಲೆಗಳು ಗೋಚರಿಸಿರುವುದರಿಂದ ಮಾನವನ ಮೇಲಿನ ಪ್ರಯೋಗವನ್ನು ತಾತ್ಕಾಲಿಕವಾಗಿ ಎಂದು ಕಂಪೆನಿ ತಿಳಿಸಿದೆ.

‘ವ್ಯಕ್ತಿಗೆ ಒಮ್ಮೆ ನೀಡಿದರೆ ಸೋಂಕು ಬಾರದಂತೆ ತಡೆಯುವ ಲಸಿಕೆಯನ್ನು(ಸಿಂಗಲ್‌ ಶಾಟ್‌ ವ್ಯಾಕ್ಸಿನ್‌) ಕಂಪನಿ ಅಭಿವೃದ್ಧಿಪಡಿಸಿತ್ತು. ಲಸಿಕೆಯ ಪ್ರಯೋಗಕ್ಕೆ ಒಳಗಾದವರಿಗೆ ವಿವರಿಸಲಾಗದ ಕಾಯಿಲೆಗಳು ಗೋಚರಿಸಿರುವುದರಿಂದ ಅ.12ರಿಂದ ಪ್ರಾಯೋಗಿಕ ಪರೀಕ್ಷೆಯನ್ನು ಸ್ಥಗಿತಗೊಳಿಸಿದೆ. ಈ ಲಸಿಕೆಯ ಪ್ರಯೋಗ ಮೂರನೇ ಹಂತದಲ್ಲಿ ಇತ್ತು. ಡಿಸೆಂಬರ್‌ ಅಂತ್ಯದವರೆಗೂ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಬೇಕಿತ್ತು ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com