ಯಾವಾಗಲೂ ಮಾಸ್ಕ್ ಧರಿಸುವವರಿಗೆ ಬಹಳ ಬೇಗನೆ ಕೊರೋನಾ ಸೋಂಕು ತಗಲುತ್ತದೆ: ಡೊನಾಲ್ಡ್ ಟ್ರಂಪ್

ಸರಿಯಾಗಿ ತಿಳಿದಿಲ್ಲದೆ ಯಾವಾಗಲೂ ಮಾಸ್ಕ್ ಧರಿಸುವವರಿಗೆ ಕೋವಿಡ್-19 ಸೋಂಕು ತಗಲುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಸರಿಯಾಗಿ ತಿಳಿದಿಲ್ಲದೆ ಯಾವಾಗಲೂ ಮಾಸ್ಕ್ ಧರಿಸುವವರಿಗೆ ಕೋವಿಡ್-19 ಸೋಂಕು ತಗಲುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ನಿನ್ನೆ ಮಿಯಾಮಿಯಲ್ಲಿ ಎನ್ ಬಿಸಿ ನ್ಯೂಸ್ ಟೌನ್ ಹಾಲ್ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಹೀಗೆ ಹೇಳಿದ್ದಾರೆ.
ಕಳೆದ ಸೆಪ್ಟೆಂಬರ್ 26ರಂದು ಶ್ವೇತಭವನದಲ್ಲಿ ನಡೆದಿದ್ದ ಬೃಹತ್ ಕಾರ್ಯಕ್ರಮದಲ್ಲಿ ಬಹುತೇಕ ಮಂದಿ ಫೇಸ್ ಮಾಸ್ಕ್ ಧರಿಸಿರಲಿಲ್ಲ. ಇದರಿಂದ ಅಧ್ಯಕ್ಷ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ಗೆ ಕೊರೋನಾ ಸೋಂಕು ತಗಲಿರಬೇಕು ಎಂದು ಬಹುತೇಕ ಮಂದಿ ಮಾತನಾಡಿಕೊಳ್ಳುತ್ತಿದ್ದರು.

ಈ ಬಗ್ಗೆ ನಿನ್ನೆಯ ಕಾರ್ಯಕ್ರಮದಲ್ಲಿ ಪ್ರಶ್ನಿಸಿದಾಗ, ಮಾಸ್ಕ್ ಯಾವಾಗಲೂ ಹಾಕಿಕೊಂಡವರಿಗೇ ಕೊರೋನಾ ಸೋಂಕು ತಗಲುವುದು ಬೇಗ ಎಂದು ಹೇಳಿದರು. ಟ್ರಂಪ್ ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಮಾಸ್ಕ್ ಧರಿಸುವುದು ಬಹಳ ಅಪರೂಪ.

ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ನಿರ್ದೇಶಕರು ಹೇಳುವ ಪ್ರಕಾರ, ಸೋಂಕು ತಡೆಗಟ್ಟಲು ಮಾಸ್ಕ್ ಧರಿಸುವುದು ಉತ್ತಮ ಮಾರ್ಗ, ಲಸಿಕೆ ಇನ್ನೂ ಕಂಡುಹಿಡಿಯದಿರುವ ಸಂದರ್ಭದಲ್ಲಿ ವೈಯಕ್ತಿಕ ಸುರಕ್ಷತೆಗೆ ಆದ್ಯತೆ ನೀಡಬೇಕು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com