ನ್ಯೂಜಿಲ್ಯಾಂಡ್ ಚುನಾವಣೆಯಲ್ಲಿ ಭರ್ಜರಿ ಗೆಲುವು: ಜಸಿಂದಾ ಅರ್ಡೆರ್ನ್ ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆ

ಕೊರೋನಾವೈರಸ್ ಸಾಂಕ್ರಾಮಿಕದ ನಿಭಾಯಿಸುವಿಕೆಯಲ್ಲಿ  ಯಶಸ್ವಿಯಾದ ನಂತರ ಜಸಿಂದಾ ಅರ್ಡೆರ್ನ್ ಎರಡನೇ ಬಾರಿಗೆ ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಎಂದು  ಸಿಎನ್ಎನ್ ವರದಿ ಮಾಡಿದೆ.
ಜಸಿಂದಾ ಅರ್ಡೆರ್ನ್
ಜಸಿಂದಾ ಅರ್ಡೆರ್ನ್

ಕೊರೋನಾವೈರಸ್ ಸಾಂಕ್ರಾಮಿಕದ ನಿಭಾಯಿಸುವಿಕೆಯಲ್ಲಿ  ಯಶಸ್ವಿಯಾದ ನಂತರ ಜಸಿಂದಾ ಅರ್ಡೆರ್ನ್ ಎರಡನೇ ಬಾರಿಗೆ ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಎಂದು  ಸಿಎನ್ಎನ್ ವರದಿ ಮಾಡಿದೆ.

ಶೇಕಡಾ 87 ರಷ್ಟು ಮತಗಳ ಎಣಿಕೆಯಲ್ಲಿಅರ್ಡೆರ್ನ್ ಅವರ ಸೆಂಟ್ರಲ್ ಲೆಫ್ಟ್ ಲೇಬರ್ ಪಾರ್ಟಿ 48.9 ಶೇಕಡಾ ಮತಗಳನ್ನು ಗಳಿಸಿದೆ, ಅಂದರೆ 1996 ರಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆ ಜಾರಿಗೆ ಬಂದಾಗಿನಿಂದ  ಯಾವುದೇ ಪಕ್ಷವು ಸಾಧಿಸಿರುವ ಅತ್ಯಂತ ಹೆಚ್ಚಿನ ಮಟ್ಟದ  ಫಲಿತಾಂಶವನ್ನು ಅವರ ಪಕ್ಷವು ಗಳಿಸುವ ಸಾಧ್ಯತೆಯಿದೆ.

"ಟುನೈಟ್, ನ್ಯೂಜಿಲ್ಯಾಂಡ್ ಕನಿಷ್ಠ 50 ವರ್ಷಗಳಲ್ಲಿ ಲೇಬರ್ ಪಾರ್ಟಿಗೆ ತನ್ನ ದೊಡ್ಡ ಬೆಂಬಲವನ್ನು ತೋರಿಸಿದೆ" ಎಂದು ಅರ್ಡೆರ್ನ್  ತಮ್ಮ ವಿಜಯದ ಭಾಷಣದಲ್ಲಿ ಹೇಳಿದ್ದಾರೆ. 

ಲೇಬರ್ ಪಕ್ಷದ ಪ್ರಮುಖ ವಿರೋಧ ಪಕ್ಷವಾದ ಸೆಂಟ್ರಲ್ ರೈಟ್ ನ್ಯಾಷನಲ್ ಪಾರ್ಟಿ ಶೇಕಡಾ 27 ರಷ್ಟು ಮತಗಳನ್ನು ಗಳಿಸಿದೆ. ಈ ಹಿಂದಿನ ಚುನಾವಣೆಯಲ್ಲಿ ಈ ಪಕ್ಷ ಶೇ.44  ಮತ ಗಳಿಸಿತ್ತು. ಪಕ್ಷದ ರಾಷ್ಟ್ರೀಯ ಮುಖ್ಯಸ್ಥ ಜುದಿತ್ ಕಾಲಿನ್ಸ್ ಅವರು ಸೋಲನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಲೇಬರ್ ಪಕ್ಷದ ಅತ್ಯುತ್ತಮ ಸಾಧನೆಗಾಗಿ ಅರ್ಡೆರ್ನ್ ಅವರನ್ನು ಅಭಿನಂದಿಸಿದರು.

ಮತ ಎಣಿಕೆ ಇನ್ನೂ ಪ್ರಗತಿಯಲ್ಲಿದೆ. ವಿದೇಶಗಳಲ್ಲಿ ವಾಸಿಸುವ ನ್ಯೂಜಿಲ್ಯಾಂಡ್ ಮತದಾರರು ಸೇರಿದಂತೆ ವಿಶೇಷ ಮತಗಳನ್ನು ಎಣಿಸಿದ ನಂತರ ಮೂರು ವಾರಗಳಲ್ಲಿ ಅಂತಿಮ ಫಲಿತಾಂಶಗಳನ್ನು ಘೋಷಣೆ ಮಾಡಲಾಗುತ್ತದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com