ಕೋವಿಡ್ ಲಸಿಕೆ: ಹೊಸ ವರ್ಷಕ್ಕೆ ಗುಡ್ ನ್ಯೂಸ್ ನೀಡುವ ಭರವಸೆಯಲ್ಲಿ ಇಂಗ್ಲೆಂಡ್

ಕೋವಿಡ್-19 ವಿರುದ್ಧದ ಲಸಿಕೆ ಹೊಸ ವರ್ಷದ ಆರಂಭದ ವೇಳೆಗೆ  ಸಿದ್ಧವಾಗಬಹುದು ಎಂದು ಇಂಗ್ಲೆಂಡ್ ನ ಹಿರಿಯ-ವೈದ್ಯಕೀಯ ಮುಖ್ಯಸ್ಥರೊಬ್ಬರು ಹೇಳಿದ್ದಾರೆ ಎಂದು ಭಾನುವಾರ ಮಾಧ್ಯಮ ವರದಿಯೊಂದು ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಕೋವಿಡ್-19 ವಿರುದ್ಧದ ಲಸಿಕೆ ಹೊಸ ವರ್ಷದ ಆರಂಭದ ವೇಳೆಗೆ  ಸಿದ್ಧವಾಗಬಹುದು ಎಂದು ಇಂಗ್ಲೆಂಡ್ ನ ಹಿರಿಯ-ವೈದ್ಯಕೀಯ ಮುಖ್ಯಸ್ಥರೊಬ್ಬರು ಹೇಳಿದ್ದಾರೆ  ಎಂದು ಭಾನುವಾರ ಮಾಧ್ಯಮ ವರದಿಯೊಂದು ತಿಳಿಸಿದೆ.

ಅಕ್ಸ್ ಫರ್ಡ್ ಯೂನಿವರ್ಸಿಟಿ ಸೃಷ್ಟಿಸಿರುವ ಲಸಿಕೆಯನ್ನು ಅಸ್ಟ್ರಾಜಿನೆಕಾ  ಕಂಪನಿ ತಯಾರಿಸುತ್ತಿದ್ದು, ಡಿಸೆಂಬರ್ ನಲ್ಲಿ ಕ್ರಿಸ್ ಮಸ್ ನಂತರ ಸಿದ್ಧಗೊಳ್ಳಬಹುದೆಂದು ಇಂಗ್ಲೆಂಡ್ ಉಪ ಮುಖ್ಯ ಆರೋಗ್ಯಾಧಿಕಾರಿ ಜೊನಾಥನ್ ವ್ಯಾನ್-ಟಾಮ್ ಸಂಸತ್ ಸದಸ್ಯರಿಗೆ ಹೇಳಿರುವುದಾಗಿ ವರದಿಯಾಗಿದೆ.ಕೊರೋನಾ ವೈರಸ್ ಸಾಂಕ್ರಾಮಿಕ ಕುರಿತ ಸರ್ಕಾರದ ಸಲಹೆಗಾರರಲ್ಲಿ ಜೊನಾಥನ್ ವ್ಯಾನ್-ಟಾಮ್  ಕೂಡಾ ಒಬ್ಬರಾಗಿದ್ದಾರೆ.

ಭಾರತದಲ್ಲಿ ಸೆರಮ್ ಇನ್ಸಿಟಿಟ್ಯೂಟ್ ಆಪ್ ಇಂಡಿಯಾ ಈ ಲಸಿಕೆಯ ಪಾಲುದಾರರಾಗಿದ್ದು, ಪ್ರಯೋಗಗಳು ನಡೆಯುತ್ತಿವೆ.ಕ್ರಿಸ್ ಮಸ್ ನಂತರ ಕೋವಿಡ್-19 ಲಸಿಕೆಯನ್ನು ರೋಗಿಗಳಿಗೆ ನೀಡಲಾಗುವುದು, ಇದು ಆಸ್ಪತ್ರೆಗೆ ದಾಖಲಾಗುವ ಸೋಂಕಿತರು ಹಾಗೂ ಸಾವಿನ ಪ್ರಮಾಣದ ಮೇಲೆ ಮಹತ್ವದ ಪರಿಣಾಮ ಬೀರಲಿದೆ ಎಂದು ಟಾಮ್ ಸಂಸದರಿಗೆ ಹೇಳಿರುವುದಾಗಿ ದಿ ಸಂಡೇ ಟೈಮ್ಸ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com