ದುರಂತ: ಫ್ರೀಜರ್‌ನಲ್ಲಿಟ್ಟಿದ್ದ ನೂಡಲ್ಸ್ ಸೂಪ್ ಸೇವಿಸಿ ಒಂದೇ ಕುಟುಂಬದ 9 ಮಂದಿ ಸಾವು!

ಫ್ರೀಜರ್‌ನಲ್ಲಿಟ್ಟಿದ್ದ ನೂಡಲ್ಸ್ ತಿಂದು ಒಂದೇ ಕುಟುಂಬದ ಒಂಬತ್ತು ಮಂದಿ ದಾರುಣ ಸಾವನ್ನಪ್ಪಿದ್ದು ತಮಗೆ ಬೇಡ ಎಂದು ಹೇಳಿ ಮೂವರು ಮಕ್ಕಳು ಅದೃಷ್ಟವಶಾತ್ ಬದುಕುಳಿದಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಫ್ರೀಜರ್‌ನಲ್ಲಿಟ್ಟಿದ್ದ ನೂಡಲ್ಸ್ ತಿಂದು ಒಂದೇ ಕುಟುಂಬದ ಒಂಬತ್ತು ಮಂದಿ ದಾರುಣ ಸಾವನ್ನಪ್ಪಿದ್ದು ತಮಗೆ ಬೇಡ ಎಂದು ಹೇಳಿ ಮೂವರು ಮಕ್ಕಳು ಅದೃಷ್ಟವಶಾತ್ ಬದುಕುಳಿದಿದ್ದಾರೆ. 

ಬೀಜಿಂಗ್ ನ ಜಿಕ್ಸಿ ನಗರದಲ್ಲಿ ಈ ಘಟನೆ ನಡೆದಿದ್ದು ಕಳೆದ ಒಂದು ವರ್ಷದಿಂದ ಫ್ರೀಜರ್‌ನಲ್ಲಿ ಇಟ್ಟಿದ್ದ ನೂಡಲ್ಸ್ ಸೂಪ್ ಅನ್ನು ಸೇವಿಸಿದ್ದಾರೆ. ಫುಡ್ ಪಾಯ್ಸನ್ ಆಗಿ ಇಬ್ಬರು ಮಕ್ಕಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ. 

ಒಂದು ವರ್ಷದಿಂದ ಶೇಖರಿಸಿದ್ದರಿಂದ ಸೂಪ್ ಬಾಂಗ್ ಕ್ರೆಕ್ ಆ್ಯಸಿಡ್ ಪಾಯ್ಸನಿಂಗ್ ಆಗಿದೆ. ಇದನ್ನು ತಿಳಿಯದ ಕುಟುಂಬ ಸೂಪ್ ಸೇವಿಸಿದ್ದಾರೆ. ಹೀಗಾಗಿ ಅವರ ಸಾವಿಗೆ ಕಾರಣವಾಗಿದೆ ಎಂದು ಹೀಲೋಂಗ್ ಜಾಂಗ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ನ ಆಹಾರ ಸುರಕ್ಷತೆ ನಿರ್ದೇಶಕ ಗಾವೋ ಫೀ ತಿಳಿಸಿದ್ದಾರೆ. 

ಈ ನೂಡಲ್ಸ್ ಕಳಿತ ಜೋಳದ ಹಿಟ್ಟಿನಿಂದ ತಯಾರಿಸಲಾಗಿದೆ. ಇದು ಚೀನಾದ ಸ್ಥಳೀಯ ಅಡುಗೆಯಾಗಿದೆ. ಇದನ್ನು ಸೌನ್ ಟಂಗ್ಜಿ ಅಂತ ಕರೆಯಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com