ಭಾರತ, ರಷ್ಯಾ, ಚೀನಾ ರಾಷ್ಟ್ರಗಳ ಗಾಳಿ ಕಲುಷಿತವಾಗಿದೆ: ಡೊನಾಲ್ಡ್ ಟ್ರಂಪ್

ಭಾರತ, ಚೀನಾ, ರಷ್ಯಾ ರಾಷ್ಟ್ರಗಳ ಗಾಳಿ ಕಲುಷಿತಗೊಂಡಿವೆ. ಆ ದೇಶಗಳ ವಾಯುಮಾಲಿನ್ಯಕ್ಕೆ ಹೋಲಿಕೆ ಮಾಡಿದರೆ ಅಮೆರಿಕಾದಲ್ಲಿ ಗಾಳಿ ಶುದ್ಧವಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. 
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತ, ಚೀನಾ, ರಷ್ಯಾ ರಾಷ್ಟ್ರಗಳ ಗಾಳಿ ಕಲುಷಿತಗೊಂಡಿವೆ. ಆ ದೇಶಗಳ ವಾಯುಮಾಲಿನ್ಯಕ್ಕೆ ಹೋಲಿಕೆ ಮಾಡಿದರೆ ಅಮೆರಿಕಾದಲ್ಲಿ ಗಾಳಿ ಶುದ್ಧವಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. 

ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಟ್ರಂಪ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯೆಂದರೆ ಮೊದಲು ನೆನಪಿಗೆ ಬರುವುದು ಅಭ್ಯರ್ಥಿಗಳ ನಡುವಿನ ಸಾರ್ವಜನಿಕ ಮುಖಾಮುಖಿ ಚರ್ಚೆ, ಅಮೆರಿಕಾ ಅಧ್ಯಕ್ಷ ರೇಸ್ ನಲ್ಲಿರುವ ಟ್ರಂಪ್ ಹಾಗೂ ಜೋ ಬಿಡನ್ ಅವರು ಈ ಹಿಂದೆ ಮುಖಾಮುಖಿ ಚರ್ಚೆ ನಡೆಸಿದ್ದರು. ಈ ವೇಳೆ ಇಬ್ಬರೂ ನಾಯಕರು ವೈಯಕ್ತಿಕ ನಿಂದನೆ ಮಾಡಿದ್ದರು. 

ಈ ಮುಖಾಮುಖಿ ಚರ್ಚೆ ನಡೆದ ಮೂರು ವಾರಗಳ ಬಳಿಕ ಮತ್ತೆ ಟ್ರಂಪ್ ಹಾಗೂ ಜೋ ಬಿಡೆನ್ ಅವರು ಮುಖಾಮುಖಿಯಾಗಿದ್ದು, ಎಂದಿನಂತೆ ಕೊರೋನಾ ಸಂಬಂಧ ಉಭಯ ನಾಯಕರು ಕಚ್ಚಾಡಿಕೊಂಡಿದ್ದಾರೆ. 

ಚರ್ಚೆ ವೇಳೆ ಹವಾಮಾನ ವೈಪರೀತ್ಯದ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದು, ಈ ವೇಳೆ ಇತರೆ ದೇಶಗಳನ್ನು ದೂರಿ, ತನ್ನ ದೇಶವೇ ಮಹಾನ್ ರಾಷ್ಟ್ರವೆಂದು ಹೇಳಿಕೊಂಡಿವೆ. 

ಚರ್ಚೆ ವೇಳೆ ಇಂಗಾಲ ಹೊರಸೂಸುವಿಕೆಯಲ್ಲಿ ನಮ್ಮ ದೇಶದಲ್ಲಿ ಕಡಿಮೆಯಾಗಿದೆ. ನಾವೇ ಅತೀ ಕಡಿಮೆ ಪ್ರಮಾಣ ಹೊಂದಿದ್ದೇವೆ. ಚೀನಾ, ರಷ್ಯಾ ಮತ್ತು ಭಾರತವನ್ನು ನೋಡಿ ಅಲ್ಲಿನ ಗಾಳಿ ಎಷ್ಟು ಕಲುಷಿತವಾಗಿದೆ ಎಂದ ಟ್ರಂಪ್ ಹೇಳಿದ್ದಾರೆ. ಇದಕ್ಕೆ ಜೋ ಬಿಡೆನ್ ಅವರು ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com