ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್‌ ವಿರುದ್ಧ ಹೊಸ ಪ್ರಕರಣ: ಭ್ರಷ್ಟಾಚಾರ ನಿಗ್ರಹ ದಳದಿಂದ ಅನುಮೋದನೆ

ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ವಿರುದ್ಧ ಮತ್ತೊಂದು ಪ್ರಕರಣ ಸೇರಿಸಲು ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹದಳ ಸಮಿತಿ ಶುಕ್ರವಾರ ಅನುಮೋದನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್‌: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ವಿರುದ್ಧ ಮತ್ತೊಂದು ಪ್ರಕರಣ ಸೇರಿಸಲು ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹದಳ ಸಮಿತಿ ಶುಕ್ರವಾರ ಅನುಮೋದನೆ ನೀಡಿದೆ.

ನವಾಜ್ ಷರೀಫ್‌ ವಿರುದ್ಧದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಹಾಲಿ ಪ್ರಧಾನಿ ಇಮ್ರಾನ್‌ ಖಾನ್‌ ಒತ್ತಾಯಿಸಿರುವ ಬೆನ್ನಲ್ಲೇ ನವಾಜ್‌ ಷರೀಫ್‌ ವಿರುದ್ಧ ಹೊಸ ಪ್ರಕರಣಕ್ಕೆ ಪಾಕಿಸ್ತಾನ ಭ್ರಷ್ಟಾಚಾರ ನಿಗ್ರಹ ದಳ ಅನುಮೋದನೆ ನೀಡಿದೆ.

ಮೂಲಗಳ ಪ್ರಕಾರ ವಿದೇಶಿ ಗಣ್ಯರ ಸುರಕ್ಷತೆಗಾಗಿ 73 ಭದ್ರತಾ ವಾಹನಗಳ ಅಕ್ರಮ ಖರೀದಿ ಮತ್ತು ಬೊಕ್ಕಸಕ್ಕೆ 195.2 ಕೋಟಿ ರೂ ನಷ್ಟ ಉಂಟು ಮಾಡಿದ ಆರೋಪದಡಿ ನವಾಜ್ ಷರೀಫ್‌, ಮಾಜಿ ಸಚಿವ ಅಹ್ಸಾನ್ ಇಕ್ಬಾಲ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಐಜಾಜ್ ಚೌಧರಿ ಮತ್ತು ಮಾಜಿ ಗುಪ್ತಚರ  ಬ್ಯೂರೋ (ಐಬಿ) ಮುಖ್ಯಸ್ಥ ಅಫ್ತಾಬ್ ಸುಲ್ತಾನ್ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಹಸನ್ ಫವಾದ್ ಸೇರಿದಂತೆ ಹಲವರ ವಿರುದ್ಧ ಹೊಸ ಪ್ರಕರಣಕ್ಕೆ ಅನುಮೋದನೆ ನೀಡಲಾಗಿದೆ.

ಗುರುವಾರ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಜಾವೇದ್ ಇಕ್ಬಾಲ್ ಅವರ ಅಧ್ಯಕ್ಷತೆಯಲ್ಲಿ ನ್ಯಾಬ್ (ಎನ್ಎಬಿ) ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ (ಇಬಿಎಂ) ಒಟ್ಟು 11 ಪ್ರಕರಣಗಳನ್ನು ಅನುಮೋದಿಸಲಾಗಿದೆ.

2017ರಲ್ಲಿ ಪಾಕಿಸ್ತಾನ ಸುಪ್ರೀಂಕೋರ್ಟ್‌ ಭ್ರಷ್ಟಾಚಾರ ಪ್ರಕರಣದಡಿ ಪಿಎಂಎಲ್‌ಎನ್‌ ಮುಖ್ಯಸ್ಥ ನವಾಜ್‌ ಷರೀಫ್ ಅವರನ್ನು ಪ್ರಧಾನಿ ಸ್ಥಾನದಿಂದ ಪದಚ್ಯುತಗೊಳಿಸಿತ್ತು. ಬಂಧನ ಭೀತಿ ಹಿನ್ನಲೆಯಲ್ಲಿ ಒಂದು ವರ್ಷದಿಂದ ಅಂದರೆ ಕಳೆದ ನವೆಂಬರ್‌ನಿಂದ ಷರೀಫ್‌, ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ವೈದ್ಯಕೀಯ  ಚಿಕಿತ್ಸೆಗಾಗಿ ಎಂಟು ವಾರಗಳ ಕಾಲ ಲಂಡನ್‌ ಗೆ ತೆರಳಲು ನ್ಯಾಯಾಲಯ ಮತ್ತು ಸರ್ಕಾರ ಅನುಮತಿ ನೀಡಿತ್ತು. ಆದರೆ, ಒಂದು ವರ್ಷವೇ ಕಳೆದರೂ ಷರೀಫ್ ಇನ್ನೂ ದೇಶಕ್ಕೆ ಹಿಂತಿರುಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com