ಅಮೆರಿಕ ಅಧ್ಯಕ್ಷೀಯ ಚುನಾವಣೆ: ಜೋ ಬಿಡೆನ್, ಕಮಲಾ ಹ್ಯಾರಿಸ್ ಪರ ಅನಿವಾಸಿ ಭಾರತೀಯರ ಒಲವು

ನವೆಂಬರ್ ಮೂರರಂದು ನಡೆಯಲಿರುವ  ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳಾದ ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಪರವಾಗಿ ಅನಿವಾಸಿ ಭಾರತೀಯ ಮುಖಂಡರು ಒಲವು ವ್ಯಕ್ತಪಡಿಸಿದ್ದಾರೆ.
ಜೋ, ಬಿಡೆನ್, ಕಮಲಾ ಹ್ಯಾರಿಸ್
ಜೋ, ಬಿಡೆನ್, ಕಮಲಾ ಹ್ಯಾರಿಸ್

ವಾಷಿಂಗ್ಟನ್:  ನವೆಂಬರ್ ಮೂರರಂದು ನಡೆಯಲಿರುವ  ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳಾದ ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಪರವಾಗಿ ಅನಿವಾಸಿ ಭಾರತೀಯ ಮುಖಂಡರು ಒಲವು ವ್ಯಕ್ತಪಡಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ವಿಶ್ವ ವೇದಿಕೆಗಳಲ್ಲಿ ಭಾರತೀಯ ಟೀಕಿಸುವ ವೈರಿ ಎಂದು ಅನಿವಾಸಿ ಭಾರತೀಯ ಮುಖಂಡರು ಬಣ್ಣಿಸಿದ್ದು, ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಭಾರತೀಯ-ಅಮೆರಿಕದ ಸಮುದಾಯವನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಚುನಾವಣೆಗೆ ಹದಿನೈದು ದಿನಕ್ಕಿಂತಲೂ ಕಡಿಮೆ ಇರುವಂತೆಯೇ, ಜೋ, ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಭಾರತೀಯ ಸಮುದಾಯಕ್ಕೆ ಸಹಾಯ ಮಾಡುವ ಪ್ರಬಲ ದಾಖಲೆಯನ್ನು ಹೊಂದಿದ್ದಾರೆ ಎಂದು ಅನಿವಾಸಿ ಭಾರತೀಯರು ಹೇಳಿದ್ದಾರೆ. 

ನಾಲ್ಕು ವರ್ಷಗಳ ಟ್ರಂಪ್ ಆಡಳಿತಾವಧಿಯಲ್ಲಿ ನಮ್ಮ ಮಕ್ಕಳು, ಮೊಮ್ಮಕಳು ಸಮಾನ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ನಮ್ಮ ಸಮುದಾಯ, ಮೌಲ್ಯಗಳು ಮತ್ತು ಹೆಮ್ಮೆಯನ್ನು ಅರ್ಥಮಾಡಿಕೊಳ್ಳಬಲ್ಲಾ ಮತ್ತು ದಕ್ಷತೆಯಲ್ಲಿ ಪ್ರಶಂಸಿ ಸಮಾನ ಅವಕಾಶ ಕಲ್ಪಿವಂತಹ ಆಡಳಿತ ಬೇಕಾಗಿದೆ ಎಂದು ಸಿಲಿಕಾನ್ ವ್ಯಾಲಿ ಮೂಲದ ಉದ್ಯಮಿ ಅಜಯ್ ಜೈನ್ ಬದೌರಿಯಾ ಹೇಳಿದ್ದಾರೆ.

 ಜೋ, ಬಿಡನ್ ಹಾಗೂ ಕಮಲಾ ಹ್ಯಾರಿಸ್ ವಿಶ್ವ ವೇದಿಕೆಯಲ್ಲಿ ಅಮೆರಿಕದ ನಾಯಕತ್ವವನ್ನು ಪುನರ್  ಸ್ಥಾಪಿಸುವ ಮತ್ತು ಭಾರತದೊಂದಿಗಿನ ಉತ್ತಮ ಸಂಬಂಧವನ್ನು ಹೊಂದುವ ಅತ್ಯುತ್ತಮ ನಾಯಕರಾಗಿದ್ದಾರೆ ಎಂದು ಬದೌರಿಯಾ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com