ಕಾಬುಲ್ ಶಿಕ್ಷಣ ಸಂಸ್ಥೆಯ ಬಳಿ ಆತ್ಮಾಹುತಿ ದಾಳಿ: ಮಕ್ಕಳು ಸೇರಿ 30 ಮಂದಿ ಸಾವು, 70ಕ್ಕೂ ಹೆಚ್ಚು ಜನರಿಗೆ ಗಾಯ

ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನಲ್ಲಿರುವ ಶಿಕ್ಷಣ ಕೇಂದ್ರವೊಂದರ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ ಮಕ್ಕಳು ಸೇರಿದಂತೆ 30 ಮಂದಿ ಸಾವನ್ನಪ್ಪಿದ್ದು, ದುರಂತದಲ್ಲಿ 70ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬುಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನಲ್ಲಿರುವ ಶಿಕ್ಷಣ ಕೇಂದ್ರವೊಂದರ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ ಮಕ್ಕಳು ಸೇರಿದಂತೆ 30 ಮಂದಿ ಸಾವನ್ನಪ್ಪಿದ್ದು, ದುರಂತದಲ್ಲಿ 70ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. 

ಈ ನಡುವೆ ಅಫಘಾನ್ ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ ಸ್ಫೋಟದಿಂದ ಸಾವನ್ನಪ್ಪಿದವರ ಸಂಖ್ಯೆ 30ಕ್ಕೆ ಏರಿಕೆ ಆಗಿದ್ದು, ಇನ್ನೂ 70 ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ,

ಸ್ಫೋಟ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಭದ್ರತಾ ಪಡೆಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಗಾಯಾಳುಗಳನ್ನು ಕಾಬೂಲ್‌ನ ಜಿನ್ನಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. 

ಶನಿವಾರ, ಆತ್ಮಾಹುತಿ ದಾಳಿಕೋರರು ಕಾಬೂಲ್‌ನ ಪಶ್ಚಿಮ ದಶ್-ಎ-ಬಾರ್ಚಿ ನೆರೆಹೊರೆಯ ಪುಲ್-ಎ-ಖೋಷ್ಕ್ ಪ್ರದೇಶದ ಶಿಕ್ಷಣ ಕೇಂದ್ರದ ಬಳಿ ಬಾಂಬ್ ಸ್ಫೋಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com