ಪ್ರಮುಖ ಅಲ್‌ಖೈದಾ ನಾಯಕ ಮಸ್ರಿ ಹತ್ಯೆ: ಹೊಣೆ ಹೊತ್ತ ಅಫ್ಗಾನ್‌ ಗೂಢಚಾರಿಕೆ ಏಜೆನ್ಸಿ

ಅಫ್ಗಾನಿಸ್ತಾನದ ಘಜನಿ ಪ್ರಾಂತ್ಯದಲ್ಲಿ ಪ್ರಮುಖ ಅಲ್‌ ಖೈದಾ ಕಮಾಂಡರ್‌ ಅಬು ಮುಹ್ಸೆನ್‌ ಮಸ್ರಿ ಅನ್ನು ಹತ್ಯೆ ಮಾಡಿರುವುದಾಗಿ ಗೂಢಚಾರ ಏಜೆನ್ಸಿ ರಾಷ್ಟ್ರೀಯ ಭದ್ರತೆ ನಿರ್ದೇಶನಾಲಯ (ಎನ್‌ಡಿಎಸ್‌) ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಬುಲ್‌:  ಅಫ್ಗಾನಿಸ್ತಾನದ ಘಜನಿ ಪ್ರಾಂತ್ಯದಲ್ಲಿ ಪ್ರಮುಖ ಅಲ್‌ ಖೈದಾ ಕಮಾಂಡರ್‌ ಅಬು ಮುಹ್ಸೆನ್‌ ಮಸ್ರಿ ಅನ್ನು ಹತ್ಯೆ ಮಾಡಿರುವುದಾಗಿ ಗೂಢಚಾರ ಏಜೆನ್ಸಿ ರಾಷ್ಟ್ರೀಯ ಭದ್ರತೆ ನಿರ್ದೇಶನಾಲಯ (ಎನ್‌ಡಿಎಸ್‌) ತಿಳಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ನಿರ್ದೇಶನಾಲಯ, ಘಜನಿ ಪ್ರಾಂತ್ಯದಲ್ಲಿ ಎನ್‌ಡಿಎಸ್‌ ವಿಶೇಷ ಪಡೆಯ ಕಾರ್ಯಾಚರಣೆಯ ಪರಿಣಾಮವಾಗಿ ಭಾರತೀಯ ಉಪಖಂಡದ ಆಲ್ ಖೈದಾ ಸಂಘಟನೆಯ ಪ್ರಮುಖ ಸದಸ್ಯ ಅಬು ಮುಹ್ಸೆನ್‌ ಮಸ್ರಿ ಹತ್ಯೆಗೀಡಾಗಿದ್ದಾನೆ ಎಂದು ಮಾಹಿತಿ ನೀಡಿದೆ. 

ಈಜಿಪ್ಟ್‌ ಮೂಲದ ಮಸ್ರಿ ಭಾರತದಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದನು ಮತ್ತು ಎಫ್‌ಬಿಐನ ವಾಂಟೆಡ್‌ ಲಿಸ್ಟ್‌ನಲ್ಲಿದ್ದರು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com