ಭಾರತೀಯ ಮೂಲದ ನಿಕ್ಕಿ ಹ್ಯಾಲೆಗೆ ಮಹತ್ವದ ಆಫರ್ ನೀಡಿದ್ದ ಡೊನಾಲ್ಡ್ ಟ್ರಂಪ್

2016ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ಕೂಡಲೇ ರಾಜ್ಯ ಕಾರ್ಯದರ್ಶಿ ಹುದ್ದೆಯ ಆಫರ್ ನೀಡಿದ್ದರು, ಆದರೆ, ಅದನ್ನು ನಿರಾಕರಿಸಿದ್ದಾಗಿ ಜನಪ್ರಿಯ ಭಾರತೀಯ- ಅಮೆರಿಕನ್ ರಿಪಬ್ಲಿಕನ್ ಪಕ್ಷದ ರಾಜಕಾರಣಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.
ನಿಕ್ಕಿ ಹ್ಯಾಲೆ, ಡೊನಾಲ್ಡ್ ಟ್ರಂಪ್
ನಿಕ್ಕಿ ಹ್ಯಾಲೆ, ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: 2016ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ಕೂಡಲೇ ರಾಜ್ಯ ಕಾರ್ಯದರ್ಶಿ ಹುದ್ದೆಯ ಆಫರ್ ನೀಡಿದ್ದರು, ಆದರೆ, ಅದನ್ನು ನಿರಾಕರಿಸಿದ್ದಾಗಿ ಜನಪ್ರಿಯ ಭಾರತೀಯ- ಅಮೆರಿಕನ್ ರಿಪಬ್ಲಿಕನ್ ಪಕ್ಷದ ರಾಜಕಾರಣಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.

ಆದಾಗ್ಯೂ, ಆ ಸಮಯದಲ್ಲಿ ದಕ್ಷಿಣ ಕೆರೊಲಿನಾ ರಾಜ್ಯಪಾಲರಾಗಿದ್ದ 48 ವರ್ಷದ ಹ್ಯಾಲೆ, ವಿಶ್ವಸಂಸ್ಥೆಯ ಯುಎಸ್ ರಾಯಭಾರಿ ಹುದ್ದೆಯ ಎರಡನೇ ಪ್ರಸ್ತಾಪವನ್ನು ನಿರಾಕರಿಸಲು ಸಾಧ್ಯವಾಗಲಿಲ್ಲ. ಎಲ್ಲಾ ಷರತ್ತುಗಳಿಗೆ ಟ್ರಂಪ್ ಒಪ್ಪಿದ ನಂತರ ಆ ಸ್ಥಾನವನ್ನು ಅಲಂಕರಿಸಿದ್ದಾಗಿ ನಿಕ್ಕಿ ಹ್ಯಾಲೆ ತಿಳಿಸಿದ್ದಾರೆ.
    
ವಿಶ್ವಸಂಸ್ಥೆಯ ಅತ್ಯಂತ ಯಶಸ್ವಿ ಅಮೆರಿಕದ ರಾಯಭಾರಿಯಾಗಲು ಹೋದ ಹ್ಯಾಲಿ, ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುತ್ತಿದ್ದಾರೆ.

ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ನಡುವೆ ನೇರಾ ಪೈಪೋಟಿ ಇರುವಂತೆ ಪಿಲೆಡೆಲ್ಫಿಯಾದಲ್ಲಿ ಟ್ರಂಪ್ ಗಾಗಿ ಇಂಡಿಯನ್ ಧ್ವನಿ ಸಂಘಟಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಚುನಾವಣೆಯೊಂದಿಗೆ ಸಾಕಷ್ಟು ಅಪಾಯವಿದೆ ಎಂದರು.

ನಿಕ್ಕಿ ಹ್ಯಾಲೆ, ವಿಶ್ವಸಂಸ್ಥೆಯ ಅಮೆರಿಕಾದ ಯಶಸ್ವಿ ರಾಯಭಾರಿಯಾಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com