ಅಮೆರಿಕದ ಸುರಕ್ಷತೆಗೆ ರಷ್ಯಾ ‘ದೊಡ್ಡ ಬೆದರಿಕೆ’: ಬಿಡೆನ್‍

ಅಮೆರಿಕದ ಸುರಕ್ಷತೆಗೆ  ರಷ್ಯಾ ಅತಿದೊಡ್ಡ ಭದ್ರತಾ ಬೆದರಿಕೆಯಾಗಿದೆ ಎಂದು ತಾವು ಭಾವಿಸಿರುವುದಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡನ್ ಹೇಳಿದ್ದಾರೆ. 
ಜೋ ಬಿಡೆನ್
ಜೋ ಬಿಡೆನ್

ವಾಷಿಂಗ್ಟನ್: ಅಮೆರಿಕದ ಸುರಕ್ಷತೆಗೆ  ರಷ್ಯಾ ಅತಿದೊಡ್ಡ ಭದ್ರತಾ ಬೆದರಿಕೆಯಾಗಿದೆ ಎಂದು ತಾವು ಭಾವಿಸಿರುವುದಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡನ್ ಹೇಳಿದ್ದಾರೆ. 

‘ನಮ್ಮ ಭದ್ರತೆ ಮತ್ತು ನಮ್ಮ ಮೈತ್ರಿಗಳನ್ನು ಒಡೆಯುವಲ್ಲಿ ಇದೀಗ ಅಮೆರಿಕಕ್ಕೆ ದೊಡ್ಡ ಬೆದರಿಕೆ ಇದೆ ಎಂದು ಭಾವಿಸುತ್ತೇನೆ. ಎರಡನೆಯದಾಗಿ, ಅತಿದೊಡ್ಡ ಪ್ರತಿಸ್ಪರ್ಧಿ ಚೀನಾ ಎಂದು ಭಾವಿಸುತ್ತೇನೆ. ನಾವು ಇದನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರ ಆಧಾರದ ಮೇಲೆ ಸ್ಫರ್ಧೆ ನಿಂತಿದೆ.’ ಎಂದು ಸಿಬಿಎಸ್ ಗೆ ನೀಡಿದ ಸಂದರ್ಶನದಲ್ಲಿ ಬಿಡನ್ ಹೇಳಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೂಲಕ ಬಿಡೆನ್ ಆ ದೇಶದಿಂದ 3.5 ದಶಲಕ್ಷ ಡಾಲರ್ ಪಡೆದಿದ್ದಾರೆ ಎಂದು ಟ್ರಂಪ್ ಅಧ್ಯಕ್ಷೀಯ ಸಂವಾದ ಅಂತಿಮ ಸುತ್ತಿನ ಸಂದರ್ಭದಲ್ಲಿ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com