ಇಸ್ಲಾಮೋಫೋಬಿಕ್ ಅಂಶಗಳ ನಿಷೇಧಕ್ಕೆ ಆಗ್ರಹಿಸಿ ಫೇಸ್ ಬುಕ್ ಸಿಇಒಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪತ್ರ!

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೇಸ್ ಬುಕ್ ಸಿಇಒಗೆ ಪತ್ರ ಬರೆದಿದ್ದು, ಇಸ್ಲಾಮೋಫೋಬಿಕ್ ಅಂಶಗಳ ನಿಷೇಧಕ್ಕೆ ಆಗ್ರಹಿಸಿದ್ದಾರೆ. 
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೇಸ್ ಬುಕ್ ಸಿಇಒಗೆ ಪತ್ರ ಬರೆದಿದ್ದು, ಇಸ್ಲಾಮೋಫೋಬಿಕ್ ಅಂಶಗಳ ನಿಷೇಧಕ್ಕೆ ಆಗ್ರಹಿಸಿದ್ದಾರೆ. 

ಪಾಕಿಸ್ತಾನದ ಸರ್ಕಾರ ಈ ಬಗ್ಗೆ ಮಾಹಿತಿ ನೀಡಿದ್ದು, ಇಸ್ಲಾಮೋಫೋಬಿಯಾ ಹೆಚ್ಚುವುದು ವಿಶ್ವಾದ್ಯಂತ ತೀವ್ರಗಾಮಿ ಹಾಗೂ ಹಿಂಸಾಚಾರ ಮನಸ್ಥಿತಿಯನ್ನು ಹೆಚ್ಚಿಸುವಂತಾಗುತ್ತದೆ. ವಿಶೇಷವಾಗಿ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಇಸ್ಲಾಮೋಫೋಬಿಯಾವನ್ನು ನಿಯಂತ್ರಿಸಬೇಕು ಎಂದು ಇಮ್ರಾನ್ ಖಾನ್ ಆಗ್ರಹಿಸಿದ್ದಾರೆ.

ಇಸ್ಲಾಮ್ ಕುರಿತ ದ್ವೇಷದ ಅಂಶಗಳನ್ನು ಫೇಸ್ ಬುಕ್ ನಲ್ಲಿ ನಿಷೇಧಿಸಬೇಕೆಂದು ಇಮ್ರಾನ್ ಖಾನ್ ಫೇಸ್ ಬುಕ್ ಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com