ಅಮೆರಿಕ ಅಧ್ಯಕ್ಷೀಯ ಚುನಾವಣೆ 2020: ಮತ ಚಲಾಯಿಸುವ ಉತ್ಸಾಹದಲ್ಲಿ ಯುವ ಮತದಾರರು, ಜೊ ಬಿಡನ್ ಪರ ಒಲವು

ಅಮೆರಿಕ ಅಧ್ಯಕ್ಷೀಯ ಚುನಾವಣೆ 2020ಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಕಳೆದ ಕೆಲ ಸಮಯಗಳಿಂದ ಡೆಮಾಕ್ರಟಿಕ್ ಅಭ್ಯರ್ಥಿ ಜೊ ಬಿಡನ್ ಜನಪ್ರಿಯತೆ ಹೆಚ್ಚಾಗಿದೆ. ಹಾರ್ವರ್ಡ್ ಯೂನಿವರ್ಸಿಟಿಯ ರಾಜಕೀಯ ವಿಭಾಗ ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಡೆಮಾಕ್ರಟಿಕ್ ಅಭ್ಯರ್ಥಿ ಜೊ ಬಿಡನ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಡೆಮಾಕ್ರಟಿಕ್ ಅಭ್ಯರ್ಥಿ ಜೊ ಬಿಡನ್

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆ 2020ಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಕಳೆದ ಕೆಲ ಸಮಯಗಳಿಂದ ಡೆಮಾಕ್ರಟಿಕ್ ಅಭ್ಯರ್ಥಿ ಜೊ ಬಿಡನ್ ಜನಪ್ರಿಯತೆ ಹೆಚ್ಚಾಗಿದೆ. ಹಾರ್ವರ್ಡ್ ಯೂನಿವರ್ಸಿಟಿಯ ರಾಜಕೀಯ ವಿಭಾಗ ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ.

18ರಿಂದ 29 ವರ್ಷದೊಳಗಿನ ಗುಂಪಿನವರಲ್ಲಿ ನಡೆಸಿರುವ ಸಮೀಕ್ಷೆ ಪ್ರಕಾರ, ಈ ಬಾರಿಯ ಸಾರ್ವತ್ರಿಕ ಅಧ್ಯಕ್ಷೀಯ ಚುನಾವಣೆ ಐತಿಹಾಸಿಕ ಆಸಕ್ತಿದಾಯಕವಾಗಿದ್ದು ತಾವು ಖಂಡಿತವಾಗಿಯೂ ಮತ ಹಾಕುವುದಾಗಿ ಹೇಳಿದ್ದಾರೆ. ಕಳೆದ ಕೆಲ ದಶಕಗಳಲ್ಲಿ ಈ ಬಾರಿ ಮತದಾರರು ಹೆಚ್ಚು ಮತ ಹಾಕಲು ಒಲವು ತೋರಿಸಿದ್ದಾರೆ.

ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಯುವ ಮತದಾರರು ಹೆಚ್ಚು ಒಲವು ತೋರಿದ್ದಾರೆ. 2016ರಲ್ಲಿ ಶೇಕಡಾ 47ರಷ್ಟು ಮಂದಿ ಯುವ ಮತದಾರರು ಮತ ಚಲಾಯಿಸಿದ್ದರೆ ಶೇಕಡಾ 63 ಮಂದಿ ಈ ಬಾರಿ ಖಂಡಿತವಾಗಿಯೂ ಮತ ಚಲಾಯಿಸುವುದಾಗಿ ಹೇಳಿದ್ದಾರೆ.

ಅಮೆರಿಕದಲ್ಲಿ 2008ರ ಚುನಾವಣೆಯಲ್ಲಿ 1984ರ ನಂತರ ಅತಿ ಹೆಚ್ಚು ಯುವ ಮತದಾರರು 18ರಿಂದ 29 ವರ್ಷದೊಳಗಿನವರು ಶೇಕಡಾ 48.4ರಷ್ಟು ಮತ ಚಲಾಯಿಸಿದ್ದರು ಎಂದು ಅಮೆರಿಕ ಚುನಾವಣಾ ಪ್ರಾಜೆಕ್ಟ್ ತಿಳಿಸಿದೆ. ಈ ವರ್ಷ ಅದು ಹೆಚ್ಚಾಗಬಹುದು ಎಂದು ತಿಳಿದುಬಂದಿದೆ. ಇನ್ನು ಸಮೀಕ್ಷೆ ಪ್ರಕಾರ, ಯುವ ಮತದಾರರ ಪೈಕಿ ಜೊ ಬಿಡನ್ ಡೊನಾಲ್ಡ್ ಟ್ರಂಪ್ ಅವರಿಗಿಂತ 24 ಪಾಯಿಂಟ್ ಗಳಷ್ಟು ಮುಂದಿದ್ದಾರೆ. ಕಳೆದ ಏಪ್ರಿಲ್ ನಂತರ ಜೊ ಬಿಡನ್ ಪರ ಯುವ ಮತದಾರರ ಒಲವು ಶೇಕಡಾ 13ರಷ್ಟು ಹೆಚ್ಚಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com