ಟರ್ಕಿ, ಗ್ರೀಸ್ ನಲ್ಲಿ ಪ್ರಬಲ ಭೂಕಂಪ: ನಾಲ್ವರು ಸಾವು, ಹಲವು ಕಟ್ಟಡಗಳು ನೆಲಸಮ
ಎಜಿಯನ್ ಸಮುದ್ರದಲ್ಲಿ ಸುನಾಮಿ ಎದ್ದ ಪರಿಣಾಮ ಗ್ರೀಸ್ ಮತ್ತು ಟರ್ಕಿರಾಷ್ಟ್ರಗಳಲಿ ಶುಕ್ರವಾರ ಪ್ರಬಲ ಭೂಕಂಪನ ಸಂಭವಿಸಿದೆ. ಘಟನೆಯಲ್ಲಿ ಕಟ್ಟಡಗಳು ಕುಸಿದು ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದರು ಮತ್ತು ಅನೇಕರು ಅವಶೇಷಗಳಲ್ಲಿ ಸಿಲುಕಿದ್ದಾರೆ.
Published: 30th October 2020 08:41 PM | Last Updated: 30th October 2020 08:41 PM | A+A A-

ಎಜಿಯನ್ ಸಮುದ್ರದಲ್ಲಿ ಸುನಾಮಿ ಎದ್ದ ಪರಿಣಾಮ ಗ್ರೀಸ್ ಮತ್ತು ಟರ್ಕಿರಾಷ್ಟ್ರಗಳಲಿ ಶುಕ್ರವಾರ ಪ್ರಬಲ ಭೂಕಂಪನ ಸಂಭವಿಸಿದೆ. ಘಟನೆಯಲ್ಲಿ ಕಟ್ಟಡಗಳು ಕುಸಿದು ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದರು ಮತ್ತು ಅನೇಕರು ಅವಶೇಷಗಳಲ್ಲಿ ಸಿಲುಕಿದ್ದಾರೆ.
ರಿಕ್ಟರ್ ಮಾಪಕದಲ್ಲಿ 7 ರ ತೀವ್ರತೆ ದಾಖಲಾಗಿದೆ.
ಟರ್ಕಿಯ ಕರಾವಳಿ ಪ್ರಾಂತ್ಯದ ಇಜ್ಮೀರ್ ನಲ್ಲಿ ಕನಿಷ್ಠ 120 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಆರೋಗ್ಯ ಸಚಿವ ಫಹ್ರೆತಿನ್ ಕೋಕಾ ಹೇಳಿದ್ದಾರೆ.
Another tsunami footage from the earthquake in Izmir province of Turkey.
— Ragıp Soylu (@ragipsoylu) October 30, 2020
This one is really dangerous pic.twitter.com/62zfddWSi8
20 ಕಟ್ಟಡಗಳು ಕುಸಿದಿರುವ ಬಗ್ಗೆ ಇಜ್ಮಿರ್ ಮೇಯರ್ ಟಂಕ್ ಸೋಯರ್ ಸಿಎನ್ಎನ್ ಟರ್ಕಿಗೆ ತಿಳಿಸಿದ್ದು ಸುಮಾರು 4,5 ಮಿಲಿಯನ್ ನಿವಾಸಿಗಳಿರುವ ಟರ್ಕಿಯಲ್ಲಿ ಈ ನಗರವು ಮೂರನೇ ದೊಡ್ಡ ನಗರವಾಗಿದೆ.ಟರ್ಕಿಯ ಆಂತರಿಕ ಸಚಿವರು ಇಜ್ಮೀರ್‌ನಲ್ಲಿ ಆರು ಕಟ್ಟಡಗಳು ನಾಶವಾಗಿವೆ ಎಂದು ಟ್ವೀಟ್ ಮಾಡಿದ್ದಾರೆ.