ಪುಲ್ವಾಮ ದಾಳಿ ನಾವು ಮಾಡಿದ್ದು ಎಂದು ಹೇಳಿಯೇ ಇಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಪಾಕ್ ಸಚಿವ ಚೌಧರಿ ಯು ಟರ್ನ್!

ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದಿಲ್ಲ, ಪುಲ್ವಾಮಾ ದಾಳಿ ಕುರಿತು ತಾವು ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಪಾಕಿಸ್ತಾನ ಸಚಿವ ಫವಾದ್ ಚೌಧರಿ ಯು ಟರ್ನ್ ಹೊಡೆದಿದ್ದಾರೆ.
ಫವಾದ್ ಚೌಧರಿ
ಫವಾದ್ ಚೌಧರಿ

ನವದೆಹಲಿ: ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದಿಲ್ಲ, ಪುಲ್ವಾಮಾ ದಾಳಿ ಕುರಿತು ತಾವು ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಪಾಕಿಸ್ತಾನ ಸಚಿವ ಫವಾದ್ ಚೌಧರಿ ಯು ಟರ್ನ್ ಹೊಡೆದಿದ್ದಾರೆ.

ಪುಲ್ವಾಮಾ ದಾಳಿ, ಬಾಲಾಕೋಟ್ ವಾಯುದಾಳಿ, ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಬಿಡುಗಡೆ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಪುಲ್ವಾಮಾ ದಾಳಿಯನ್ನು ನಾವೇ ಮಾಡಿಸಿದ್ದು ಎಂದು ಪಾಕಿಸ್ತಾನ ಒಪ್ಪಿಕೊಂಡಿತ್ತು ಕೂಡ.

ಆದರೆ ನಿನ್ನೆ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ ಫವಾದ್ ಚೌಧರಿ, ನನ್ನ ಹೇಳಿಕೆ ಸ್ಪಷ್ಟವಾಗಿದೆ, ನಾನು ಮಾತನಾಡಿದ್ದು ಆಪರೇಷನ್ ಸ್ವಿಫ್ಟ್ ರೆಸಾರ್ಟ್ ಬಗ್ಗೆ ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನ ನಡೆಸಿದ ಕಾರ್ಯಾಚರಣೆ ಬಗ್ಗೆ. ಬಾಲಾಕೋಟ್ ನಲ್ಲಿ ಪಾಕಿಸ್ತಾನ ಪ್ರಾಂತ್ಯದೊಳಗೆ ಭಾರತ ನುಗ್ಗಲು ಪ್ರವೇಶಿಸಿದಾಗ ನಾವು ಆಪರೇಷನ್ ಸ್ವಿಫ್ಟ್ ರೆಸಾರ್ಟ್ ಗೆ ಪ್ರಯತ್ನಿಸಿದೆವು. ಮೇಲ್ನೋಟದಿಂದ ಆ ಬಗ್ಗೆ ಮಾತನಾಡುವಾಗ ಪುಲ್ವಾಮಾ ಹೆಸರು ಬಳಸಿಕೊಂಡೆ ಅಷ್ಟೆ ಎಂದಿದ್ದಾರೆ.

ಚೌಧರಿಯವರ ಹೇಳಿಕೆ ನಿನ್ನೆ ಪಾಕಿಸ್ತಾನ ನ್ಯಾಶನಲ್ ಅಸೆಂಬ್ಲಿಯಲ್ಲಿ ತೀವ್ರ ಕೋಲಾಹಲವೆಬ್ಬಿಸಿತ್ತು. ಇದಾದ ಬಳಿಕ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಚೌಧರಿ, ನಮ್ಮ ಯುದ್ಧ ವಿಮಾನ ಭಾರತದ ಯುದ್ಧ ವಿಮಾನದ ಗುರಿಯನ್ನು ಕೆಡವಿ ಹಾಕಲು ಯತ್ನಿಸಿತಷ್ಟೆ, ನಾವು ಮುಗ್ಧ ನಾಗರಿಕರನ್ನು ಕೊಲ್ಲುವ ಮನಸ್ಥಿತಿ ಹೊಂದಿಲ್ಲ, ಭಯೋತ್ಪಾದನೆಗೆ ನಮ್ಮ ಬೆಂಬಲವಿಲ್ಲ ಎಂದಿದ್ದಾರೆ.

ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಅಯಾಜ್ ಸಾದಿಕ್ ಅವರು ಶಾ ಮೊಹಮ್ಮದ್ ಖುರೇಷಿ ಮತ್ತು ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಅವರ ನಡುವೆ ಕ್ಯಾಪ್ಟನ್ ಅಭಿನಂದನ್ ವರ್ತಮಾನ್ ಬಿಡುಗಡೆ ಕುರಿತು ನಡೆದ ಮಾತುಕತೆಯನ್ನು ಬಹಿರಂಗಗೊಳಿಸಿದ ನಂತರ ಫವಾದ್ ಚೌಧರಿ ಈ ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com