ಜೇಮ್ಸ್ ಬಾಂಡ್ ಸರಣಿಯ ಮೊದಲ ಬಾಂಡ್ 'ಸೀನ್ ಕಾನರಿ' ನಿಧನ
ಚಿತ್ರರಂಗದಲ್ಲಿ ಬಾಂಡ್ ಚಿತ್ರಗಳಿಗೆ ಪ್ರತ್ಯೇಕ ಸ್ಥಾನವಿದೆ. ಇಲ್ಲಿಯವರೆಗೂ ಹಾಲಿವುಡ್ ನಲ್ಲಿ ಬಾಂಡ್ ಹೆಸರಿನಲ್ಲಿ 25 ಸಿನಿಮಾಗಳು ಬಂದಿವೆ. ಅದರಲ್ಲೂ ಮೊದಲ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಸೀನ್ ಕಾನರಿ ಅವರು ನಿಧನ ಹೊಂದಿದ್ದಾರೆ.
Published: 31st October 2020 06:41 PM | Last Updated: 31st October 2020 06:41 PM | A+A A-

ಸೀನ್ ಕಾನರಿ
ವಾಷ್ಟಿಂಗನ್: ಚಿತ್ರರಂಗದಲ್ಲಿ ಬಾಂಡ್ ಚಿತ್ರಗಳಿಗೆ ಪ್ರತ್ಯೇಕ ಸ್ಥಾನವಿದೆ. ಇಲ್ಲಿಯವರೆಗೂ ಹಾಲಿವುಡ್ ನಲ್ಲಿ ಬಾಂಡ್ ಹೆಸರಿನಲ್ಲಿ 25 ಸಿನಿಮಾಗಳು ಬಂದಿವೆ. ಅದರಲ್ಲೂ ಮೊದಲ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಸೀನ್ ಕಾನರಿ ಅವರು ನಿಧನ ಹೊಂದಿದ್ದಾರೆ.
90 ವರ್ಷದ ಸೀನ್ ಕಾನರಿ ಅವರು ಬಾಂಡ್ ಸರಣಿಯ 7 ಚಿತ್ರಗಳಲ್ಲಿ ಬಾಂಡ್ ಪಾತ್ರದಲ್ಲಿ ನಟಿಸಿದ್ದಾರೆ. ಬಾಂಡ್ ಸರಣಿ ಮೊದಲ ಐದು ಚಿತ್ರಗಳಲ್ಲಿ ಸೀನ್ ಕನರಿ ನಟಿಸಿದ್ದರು.
ಸರ್ ಥಾಮಸ್ ಸೀನ್ ಕಾನರಿ ಅವರು 1930ರ ಆಗಸ್ಟ್ 25ರಂದು ಫೌಂಟೇನ್ ಬ್ರಿಡ್ಜ್ ನಲ್ಲಿ ಜನಿಸಿದ್ದರು.
ಸೀನ್ ಕಾನರಿ ಡಾ. ನಂ., ಫ್ರಮ್ ರಷ್ಯಾ ವಿತ್ ಲವ್, ಗೋಲ್ಡ್ ಫಿಂಗರ್, ಥಂಡರ್ ಬಾಲ್, ಯು ಓನ್ಲಿ ಲಿವ್ ಟ್ವೈಸ್, ಡೈಮಂಡ್ ಫೇವರ್ ಮತ್ತು ನೇವರ್ ಸೇ ನೇವರ್ ಅಗೇನ್ ಚಿತ್ರಗಳಲ್ಲಿ ನಟಿಸಿದ್ದಾರೆ.