ಕೊರೋನಾ ವೈರಸ್: ಮಾಸ್ಕ್ ಬದಲಿಗೆ ಫೇಸ್ ಶೀಲ್ಡ್ ಬಳಸಬಹುದೇ..? ಮಾಸ್ಕ್ ಗಿಂತ ಫೇಸ್ ಶೀಲ್ಡ್ ಎಷ್ಟು ಸುರಕ್ಷಿತ?

ಮಾರಕ ಕೊರೋನಾ ವೈರಸ್ ಸೋಂಕಿನಿಂದ ರಕ್ಷಣೆಗಾಗಿ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಕೆಲವರು ಮಾಸ್ಕ್ ಬದಲಿಗೆ ಫೇಸ್ ಶೀಲ್ಡ್ ಬಳಸಬಹುದೇ..? ಮಾಸ್ಕ್ ಗಿಂತ ಫೇಸ್ ಶೀಲ್ಡ್ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಈ ಪ್ರಶ್ನೆಗೆ ತಜ್ಞರು ಉತ್ತರ  ನೀಡಿದ್ದಾರೆ.
ಮಾಸ್ಕ್-ಫೇಸ್ ಶೀಲ್ಡ್
ಮಾಸ್ಕ್-ಫೇಸ್ ಶೀಲ್ಡ್

ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ಸೋಂಕಿನಿಂದ ರಕ್ಷಣೆಗಾಗಿ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಕೆಲವರು ಮಾಸ್ಕ್ ಬದಲಿಗೆ ಫೇಸ್ ಶೀಲ್ಡ್ ಬಳಸಬಹುದೇ..? ಮಾಸ್ಕ್ ಗಿಂತ ಫೇಸ್ ಶೀಲ್ಡ್ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಈ ಪ್ರಶ್ನೆಗೆ ತಜ್ಞರು ಉತ್ತರ  ನೀಡಿದ್ದಾರೆ.

ಮಾಸ್ಕ್ ಬದಲಿಗೆ ಫೇಸ್ ಶೀಲ್ಡ್ ಬಳಸಬಹುದೇ..? ಮಾಸ್ಕ್ ಗಿಂತ ಫೇಸ್ ಶೀಲ್ಡ್ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆಗೆ ತಜ್ಞರು ಉತ್ತರ ನೀಡಿದ್ದು, ಮಾಸ್ಕ್ ಗೆ ಫೇಸ್ ಶೀಲ್ಡ್ ಯಾವುದೇ ರೀತಿಯಿಂದಲೂ ಪರ್ಯಾಯವಲ್ಲ. ಫೇಸ್ ಶೀಲ್ಜ್ ಕೇವಲ ಎದುರಿಗಿನ ವ್ಯಕ್ತಿಯ ಬಾಯಿಂದ ಬರುವ ಡ್ರಾಪ್ ಲೆಟ್ಸ್ ಗಳನ್ನು  ತಡೆಯುತ್ತದೆಯೇ ಹೊರತು.. ಕೊರೋನಾ ವೈರಸ್ ಅನ್ನು ಅಲ್ಲ. ಹೀಗಾಗಿ ವೈದ್ಯಕೀಯ ತಜ್ಞರು ಯಾವುದೇ ಕಾರಣಕ್ಕೂ ಮಾಸ್ಕ್ ಗೆ ಬದಲಾಗಿ ಫೇಸ್ ಶೀಲ್ಡ್ ಅನ್ನು ಸೂಚಿಸುವುದಿಲ್ಲ ಎಂದು ಹೇಳಿದ್ದಾರೆ.

ವೈರಸ್ ತಡೆಗೆ ಮಾಸ್ಕ್ ಧರಿಸುವುದು ಕಡ್ಡಾಯ. ಆದರೆ ಯಾರು ಹೆಚ್ಚುವರಿ ಸುರಕ್ಷತೆಯನ್ನು ಅಪೇಕ್ಷಿಸುತ್ತಾರೆಯೋ ಅಂತಹವರು ಮಾಸ್ಕ್ ನೊಂದಿಗೆ ಫೇಸ್ ಶೀಲ್ಡ್ ಧರಿಸಬಹುದು ಎಂದೂ ಹೇಳಲಾಗಿದೆ.

ಫೇಸ್ ಶೀಲ್ಡ್ ಡ್ರಾಪ್ ಲೆಟ್ಸ್ ಗಳನ್ನು ತಡೆಯುವುದರಿಂದ ಫೇಸ್ ಶೀಲ್ಡ್ ಗಳನ್ನು ಸಾಕಷ್ಟು ನೆರವಾಗುತ್ತದೆ. ಇದರಿಂದ ಡ್ರಾಪ್ ಲೆಟ್ಸ್ ಗಳು ಕಣ್ಣನ್ನು ಸೇರುವದನ್ನು ತಡೆಬಹುದು. ಅಲ್ಲದೆ ನೀವು ನಿಮ್ಮ ಕೈಗಳನ್ನು ಪದೇ ಪದೇ ಮುಖ, ಕಣ್ಣು, ಮೂಗು ಮುಟ್ಟಿಕೊಳ್ಳುವುದರಿಂದ ತಡೆಯುತ್ತದೆ. ಇದರಿಂದ ಸೋಂಕು ನಿಮ್ಮ  ದೇಹ ಸೇರುವುದನ್ನು ಒಂದು ಹಂತದವರೆಗೂ ತಡೆಯಬಹುದು ಎಂದು ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ಜೈವಿಕ ವಿಭಾಗದ ಮುಖ್ಯಸ್ಥ ಕ್ರಿಸ್ಟೋಫರ್ ಸುಲ್ಮಾಂಟೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com