ಪ್ರಣವ್ ಮುಖರ್ಜಿ ನಿಧನದಿಂದ ಇಂಡಿಯಾ- ಚೀನಾ ಸ್ನೇಹಕ್ಕೆ ಅಪಾರ ನಷ್ಟ- ಚೀನಾ

ದಕ್ಷ ರಾಜಕೀಯ ಮುತ್ಸದ್ದಿಯಾಗಿದ್ದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ನಿಧನದಿಂದ  ಇಂಡಿಯಾ- ಚೀನಾ ಸ್ನೇಹತ್ವಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಚೀನಾ ಹೇಳಿದೆ.
ಪ್ರಣವ್ ಮುಖರ್ಜಿ
ಪ್ರಣವ್ ಮುಖರ್ಜಿ

ಬೀಜಿಂಗ್: ದಕ್ಷ ರಾಜಕೀಯ ಮುತ್ಸದ್ದಿಯಾಗಿದ್ದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ನಿಧನದಿಂದ  ಇಂಡಿಯಾ- ಚೀನಾ
ಸ್ನೇಹತ್ವಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಚೀನಾ ಹೇಳಿದೆ.

ಪ್ರಣವ್ ಮುಖರ್ಜಿ ಅವರ 50 ವರ್ಷಗಳ ರಾಜಕೀಯ ಜೀವನದಲ್ಲಿ ಚೀನಾ- ಭಾರತ ಸಂಬಂಧದಲ್ಲಿ ಸಕಾರಾತ್ಮಕ ಕೊಡುಗೆಗಳನ್ನು ನೀಡಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನೈಂಗ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.

2014ರಲ್ಲಿ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಭಾರತ ಭೇಟಿ ಹಾಗೂ ಮುಖರ್ಜಿ ಅವರೊಂದಿಗಿನ ಸಭೆಯನ್ನು ಉಲ್ಲೇಖಿಸಿದ ಹುವಾ, ಅಭಿವೃದ್ಧಿ ಪಾಲುದಾರಿಕೆ ಬಲವರ್ದನೆ ನಿಟ್ಟಿನಲ್ಲಿ ಉಭಯ ನಾಯಕರು ಜಂಟಿ ಹೇಳಿಕೆ ನೀಡಿದ್ದರು ಎಂದು ತಿಳಿಸಿದ್ದಾರೆ.

ಪ್ರಣವ್ ಮುಖರ್ಜಿ ನಿಧನದಿಂದ ಚೀನಾ, ಭಾರತದೊಂದಿಗಿನ ಸ್ನೇಹತ್ವ ಹಾಗೂ ಭಾರತಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುವುದಾಗಿ ಹುವಾ ಚುನೈಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com