ಚೀನಾಗೆ ತಿರುಗೇಟು ನೀಡಲು ಭಾರತ, ಆಸ್ಟ್ರೇಲಿಯಾ, ಜಪಾನ್ ಜೊತೆ ನ್ಯಾಟೋ ತರಹದ ಮೈತ್ರಿಗೆ ಅಮೆರಿಕಾ ಸ್ಕೆಚ್!

ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ನಂತಹ ಇಂಡಿಯಾ ಫೆಸಿಪಿಕ್ ವಲಯದ ರಾಷ್ಟ್ರಗಳೊಂದಿಗೆ ನ್ಯಾಟೋ ತರಹದ ರಕ್ಷಣಾ ಒಪ್ಪಂದ ಮಾಡಿಕೊಳ್ಳುವ ಮೂಲಕ ಚೀನಾ ಪ್ರಾಬಲ್ಯಕ್ಕೆ ಅಂಕುಶ ಹಾಕುವ ನಿಟ್ಟಿನಲ್ಲಿ ಅಮೆರಿಕಾ ಗುರಿ ಹೊಂದಿರುವುದಾಗಿ ಅಮೆರಿಕಾ ರಾಜ್ಯ  ಉಪ ಕಾರ್ಯದರ್ಶಿ ಸ್ಟೀಫನ್ ಬೀಗನ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತ,ಆಸ್ಟ್ರೇಲಿಯಾ ಮತ್ತು ಜಪಾನ್ ನಂತಹ ಇಂಡಿಯಾ ಫೆಸಿಪಿಕ್ ವಲಯದ ರಾಷ್ಟ್ರಗಳೊಂದಿಗೆ ನ್ಯಾಟೋ ತರಹದ ರಕ್ಷಣಾ ಒಪ್ಪಂದ ಮಾಡಿಕೊಳ್ಳುವ ಮೂಲಕ ಚೀನಾ ಪ್ರಾಬಲ್ಯಕ್ಕೆ ಅಂಕುಶ ಹಾಕುವ ನಿಟ್ಟಿನಲ್ಲಿ ಅಮೆರಿಕಾ ಗುರಿ ಹೊಂದಿರುವುದಾಗಿ ಅಮೆರಿಕಾ ರಾಜ್ಯ  ಉಪ ಕಾರ್ಯದರ್ಶಿ ಸ್ಟೀಫನ್ ಬೀಗನ್ ಹೇಳಿದ್ದಾರೆ.

ಇಂಡೋ ಫೆಸಿಪಿಕ್ ಮತ್ತು ಇಡೀ ವಿಶ್ವದಾದ್ಯಂತ ಚೀನಾದಿಂದ ಎದುರಾಗುವ ಸವಾಲನ್ನು ಎದುರಿಸಲು ಹಾಗೂ ಮೌಲ್ಯಗಳು,ಪರಸ್ಪರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟನಲ್ಲಿ ಈ ವಲಯದ ರಾಷ್ಟ್ರಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ಅಮೆರಿಕಾ ಗುರಿ ಹೊಂದಿದೆ ಎಂದು ಸ್ಟೀಪನ್ ಬೀಗನ್ ಹೇಳಿರುವುದಾಗಿ ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಅಮೆರಿಕಾ- ಭಾರತ ಕಾರ್ಯತಂತ್ರ ಪಾಲುದಾರಿಕೆ ಪೋರಂ ಆಯೋಜಿಸಿದ್ದ ಭಾರತದಲ್ಲಿನ ಮಾಜಿ ಅಮೆರಿಕಾ ರಾಯಭಾರಿ ರಿಚಾರ್ಡ್ ವರ್ಮಾ ಅವರೊಂದಿಗಿನ ಆನ್ ಲೈನ್ ಚರ್ಚೆಯಲ್ಲಿ ಬೀಗನ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಇಂಡೋ-ಪೆಸಿಫಿಕ್ ಪ್ರದೇಶ ವಾಸ್ತವವಾಗಿ ಬಹುಪಕ್ಷೀಯ ರಚನೆಗಳ ಕೊರತೆಯನ್ನು ಹೊಂದಿದೆ.ಅವುಗಳು ನ್ಯಾಟೋ ಅಥವಾ ಯುರೋಪಿಯನ್ ಒಕ್ಕೂಟದಂತಹ ಮೈತ್ರಿಯನ್ನು ಹೊಂದಿಲ್ಲ, ಕೆಲವೊಂದು ಅಂಶಗಳ ಹಿನ್ನೆಲೆಯಲ್ಲಿ ಇಂತಹ ಮೈತ್ರಿಕೂಟ ರಚನೆಗೆ ಆ ರಾಷ್ಟ್ರಗಳಿಗೆ ಆಹ್ವಾನ ನೀಡುವುದಾಗಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com