ಕೊರೋನಾ ಕೊನೆಯ ಸಾಕ್ರಾಮಿಕವಲ್ಲ, ಭವಿಷ್ಯದಲ್ಲಿ ಮತ್ತಷ್ಟು ಸವಾಲುಗಳಿಗೆ ಜಗತ್ತು ಸಿದ್ಧವಾಗಬೇಕು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಜಗತ್ತಿನ 213 ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕು ಕೊನೆಯ ಸಾಂಕ್ರಾಮಿಕವಲ್ಲ. ಇಂತಹ ಹಲವು ಸಾಂಕ್ರಾಮಿಕಗಳಿಗೆ ಜಗತ್ತು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಸಿದ್ಧವಾಗಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆ-ಟೆಡ್ರೊಸ್ ಅಧಾನೊಮ್
ವಿಶ್ವ ಆರೋಗ್ಯ ಸಂಸ್ಥೆ-ಟೆಡ್ರೊಸ್ ಅಧಾನೊಮ್

ಜಿನೀವಾ: ಜಗತ್ತಿನ 213 ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕು ಕೊನೆಯ ಸಾಂಕ್ರಾಮಿಕವಲ್ಲ. ಇಂತಹ ಹಲವು ಸಾಂಕ್ರಾಮಿಕಗಳಿಗೆ ಜಗತ್ತು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಸಿದ್ಧವಾಗಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೇಯೆಸಸ್ ಅವರು, ಕೊರೋನಾ ವೈರಸ್ ಸೋಂಕು ಕೊನೆಯ ಸಾಂಕ್ರಾಮಿಕವಲ್ಲ. ಇಂತಹ ಹಲವು ಸಾಂಕ್ರಾಮಿಕಗಳು ಭವಿಷ್ಯದಲ್ಲಿ ಜಗತ್ತನ್ನು ಪೀಡಿಸಬಹುದು. ಹೀಗಾಗಿ ಭವಿಷ್ಯದ ಬಿಕ್ಕಟ್ಟುಗಳಿಗೆ ವಿಶ್ವದಾದ್ಯಂತ  ದೇಶಗಳು ಸಿದ್ಧರಾಗಿರಬೇಕು. ಇದು ಮಾತ್ರವಲ್ಲ, ನಾವು ಯಾವುದೇ ಸಮಸ್ಯೆಯನ್ನು ನಿಭಾಯಿಸಬಹುದು, ಇದಕ್ಕಾಗಿ ಎಲ್ಲಾ ದೇಶಗಳು ಆರೋಗ್ಯ ರಕ್ಷಣೆಲ್ಲಿ ಹೂಡಿಕೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

'ಕೊರೋನಾ ವೈರಸ್ ಕೊನೆಯ ಸಾಂಕ್ರಾಮಿಕವಲ್ಲ. ಸಾಂಕ್ರಾಮಿಕ ರೋಗಗಳು ಜೀವನದ ಒಂದು ಭಾಗ ಎಂದು ಇತಿಹಾಸ ನಮಗೆ ಕಲಿಸಿದೆ. ಆದರೆ ಮುಂದಿನ ಬಾರಿ ಸಾಂಕ್ರಾಮಿಕ ರೋಗ ಬಂದಾಗ, ನಾವೆಲ್ಲರೂ ಅದಕ್ಕೆ ಸಿದ್ಧರಾಗಿರಬೇಕು. ತಂತ್ರಜ್ಞಾನಗಳಲ್ಲಿ ಹೆಚ್ಚಿನ ಪ್ರಗತಿಯ ಹೊರತಾಗಿಯೂ, ಅನೇಕ ದೇಶಗಳು  ಇನ್ನೂ ತಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ಬಗ್ಗೆ ಸರಿಯಾದ ದಿಕ್ಕಿನಲ್ಲಿ ಗಮನಹರಿಸಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಎಲ್ಲಾ ದೇಶಗಳು ಸಾರ್ವಜನಿಕ ಆರೋಗ್ಯ ಸೇವೆಗಾಗಿ ಹೆಚ್ಚು ಹೂಡಿಕೆ ಮಾಡಬೇಕಾಗುತ್ತದೆ ಎಂದು ಟೆಡ್ರೊಸ್ ಅಧಾನೊಮ್ ಹೇಳಿದ್ದಾರೆ.

ಇನ್ನು ಕಳೆದ 2019ರ ಡಿಸೆಂಬರ್ ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ಕ್ರಮೇಣ ಜಗತ್ತಿನಾದ್ಯಂತ ಪ್ರಸರಿಸಿದ್ದು, ಸಾಂಕ್ರಾಮಿಕವಾಗಿ ಪರಿಣಮಿಸಿದೆ. ಕಳೆದ ಮಾರ್ಚ್ ನಲ್ಲಿಯೇ ವಿಶ್ವಸಂಸ್ಥೆ ಕೋವಿಡ್-19 ಅನ್ನು ಮಾರ್ಚ್ 11 ರಂದು ಸಾಂಕ್ರಾಮಿಕ ರೋಗವನ್ನು ಘೋಷಿಸಲಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com