ವಿಶ್ವದ ಮೊದಲ ತೇಲುವ ಆಪಲ್ ಸ್ಟೋರ್: ಎಲ್ಲಿದೆ? ಹೇಗಿದೆ ಗೊತ್ತೇ?

ಕ್ಯುಪರ್ಟಿನೋ ಮೂಲದ ಐಫೋನ್ ತಯಾರಕ ಸಂಸ್ಥೆ ಸೆ.10 ರಂದು ಸಿಂಗಪೂರ್ ನಲ್ಲಿ ವಿಶ್ವದ ಮೊದಲ ತೇಲುವ ಆಪಲ್ ಸ್ಟೋರ್ ನ್ನು ಉದ್ಘಾಟಿಸಿದೆ. 
ವಿಶ್ವದ ಮೊದಲ ತೇಲುವ ಆಪಲ್ ಸ್ಟೋರ್: ಎಲ್ಲಿದೆ? ಹೇಗಿದೆ ಗೊತ್ತೇ?
ವಿಶ್ವದ ಮೊದಲ ತೇಲುವ ಆಪಲ್ ಸ್ಟೋರ್: ಎಲ್ಲಿದೆ? ಹೇಗಿದೆ ಗೊತ್ತೇ?

ಸಿಂಗಪೂರ್: ಕ್ಯುಪರ್ಟಿನೋ ಮೂಲದ ಐಫೋನ್ ತಯಾರಕ ಸಂಸ್ಥೆ ಸೆ.10 ರಂದು ಸಿಂಗಪೂರ್ ನಲ್ಲಿ ವಿಶ್ವದ ಮೊದಲ ತೇಲುವ ಆಪಲ್ ಸ್ಟೋರ್ ನ್ನು ಉದ್ಘಾಟಿಸಿದೆ. 

ಸಂಪೂರ್ಣ ಗಾಜಿನ ಡೋಮ್ ನ್ನು ಹೊಂದಿದ್ದು, ನೀರಿನ ಮೇಲೆಯೇ ನಿರ್ಮಿಸಲಾಗಿದ್ದು, ನೀರಿನಲ್ಲಿ ತೇಲುತ್ತಿರುವ ಗೋಳದ ಆಕೃತಿಯ ವಿನ್ಯಾಸದಲ್ಲಿದೆ. 

"ನಮ್ಮ ರೀಟೇಲ್ ಸ್ಟೋರ್ ಗಳು ಆಪಲ್ ನ ಅತ್ಯುತ್ತಮವಾದದ್ದನ್ನೇ ನೀಡುತ್ತದೆ ಹಾಗೂ ಸಿಂಗಪೂರ್ ನಲ್ಲಿ ಹೊಸ ರೀಟೇಲ್ ಸ್ಟೋರ್ ಗೆ ಸ್ವಾಗತ, ಆಪಲ್ ಮರೀನಾ ಬೇ ಸ್ಯಾಂಡ್ಸ್ ನ್ನು ಆನಂದಿಸಿ ಎಂದು ಆಪಲ್ ನ ಸಿಇಒ ಟಿಮ್ ಕುಕ್ ಟ್ವೀಟ್ ಮಾಡಿದ್ದಾರೆ. 

ತೇಲುವ ಆಪಲ್ ಸ್ಟೋರ್ ನಲ್ಲಿ 114 ಗಾಜಿನ ಪೀಸ್ ನ್ನು ಅಳವಡಿಸಲಾಗಿದೆ. 2017 ರಲ್ಲಿ ಸಿಂಗಪೂರ್ ನ ಆರ್ಚರ್ಡ್ ರಸ್ತೆಯಲ್ಲಿ ಆಪಲ್ ನ ಮೊದಲ ಸ್ಟೋರ್ ಪ್ರಾರಂಭವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com