ನಂಗರ್‌ಹಾರ್‌ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರಿಂದ 16 ಆಫ್ಘನ್‍ ಸೈನಿಕರ ಹತ್ಯೆ

ಆಫ್ಘಾನಿಸ್ತಾನದ ನಂಗರ್‌ಹಾರ್‌ ಪ್ರಾಂತ್ಯದಲ್ಲಿ ಆಫ್ಘನ್‍ ಭದ್ರತಾ ಪಡೆಗಳ ನೆಲೆಗಳನ್ನು ಗುರಿಯಾಗಿಸಿಕೊಂಡು ತಾಲಿಬಾನ್ ಉಗ್ರರು ನಡೆಸಿದ ದಾಳಿಯಲ್ಲಿ 16 ಸೈನಿಕರು ಸಾವನ್ನಪ್ಪಿದ್ದು, ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮೂಲಗಳನ್ನುಲ್ಲೇಖಿಸಿ ಸ್ಪುಟ್ನಿಕ್‍ ಸುದ್ದಿಸಂಸ್ಥೆ ವರದಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬೂಲ್: ಆಫ್ಘಾನಿಸ್ತಾನದ ನಂಗರ್‌ಹಾರ್‌ ಪ್ರಾಂತ್ಯದಲ್ಲಿ ಆಫ್ಘನ್‍ ಭದ್ರತಾ ಪಡೆಗಳ ನೆಲೆಗಳನ್ನು ಗುರಿಯಾಗಿಸಿಕೊಂಡು ತಾಲಿಬಾನ್ ಉಗ್ರರು ನಡೆಸಿದ ದಾಳಿಯಲ್ಲಿ 16 ಸೈನಿಕರು ಸಾವನ್ನಪ್ಪಿದ್ದು, ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮೂಲಗಳನ್ನುಲ್ಲೇಖಿಸಿ ಸ್ಪುಟ್ನಿಕ್‍ ಸುದ್ದಿಸಂಸ್ಥೆ ವರದಿ ಮಾಡಿದೆ.

ನಂಗರ್‌ಹಾರ್‌ನ ಖೋಗ್ಯಾನಿ ಜಿಲ್ಲೆಯ ಗಂದುಮಕ್ ಪ್ರದೇಶದಲ್ಲಿ ಆಫ್ಘನ್‍ ಸೇನೆ ಮತ್ತು ಪೊಲೀಸರ ತಪಾಸಣಾ ಶಿಬಿರಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ಮಾಡಿದ್ದಾರೆ. ದಾಳಿಯ ಪರಿಣಾಮ ಮೂರು ಭದ್ರತಾ ತಪಾಸಣಾ ಶಿಬಿರಗಳು ತೀವ್ರ ಹಾನಿಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ಆಫ್ಘಾನಿಸ್ತಾನದ ಮತ್ತು ತಾಲಿಬಾನ್ ಕೈದಿಗಳನ್ನು ಪರಸ್ಪರ ಬಿಡುಗಡೆ ಮಾಡಿದ ನಂತರ ಶನಿವಾರ ಕತಾರ್ ನಲ್ಲಿ ಆರಂಭವಾಗಲಿರುವ ಬಹು ನಿರೀಕ್ಷಿತ ಅಂತರ-ಆಫ್ಘನ್‍ ಶಾಂತಿ ಮಾತುಕತೆ ವೇಳೆಯೇ ಈ ದಾಳಿ ನಡೆದಿದೆ. ಆಫ್ಘಾನಿಸ್ತಾನದಲ್ಲಿ ಸುಮಾರು ಎರಡು ದಶಕಗಳ ಯುದ್ಧ ಮತ್ತು ದಂಗೆಯ ನಂತರ, ಶಾಶ್ವತವಾಗಿ ಶಾಂತಿ ಕಾಪಾಡುವ ದೃಷ್ಟಿಕೋನದೊಂದಿಗೆ ಕದನ ವಿರಾಮ ಕುರಿತು ಮಾತುಕತೆಗಳನ್ನು ಕೇಂದ್ರೀಕರಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com