ಶಿಂಜೋ ಅಬೆ ಆಪ್ತ ಯೋಶಿಹಿಡೆ ಸುಗಾ ಜಪಾನ್ ಮುಂದಿನ ಪ್ರಧಾನ ಮಂತ್ರಿ ಸಾಧ್ಯತೆ

ಆರೋಗ್ಯ ಕಾರಣಗಳಿಂದ ಜಪಾನ್ ಪ್ರಧಾನ ಮಂತ್ರಿ ಹುದ್ದೆಗೆ ಕಳೆದ ತಿಂಗಳು ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದ ಶಿಂಜೋ ಅಬೆ ಅವರ ಉತ್ತರಾಧಿಕಾರಿಯಾಗಿ ಜಪಾನ್ ನ ಸಂಪುಟದ ಮುಖ್ಯ ಕಾರ್ಯದರ್ಶಿ ಯೋಶಿಹಿಡೆ ಸುಗಾ ಅವರ ಆಯ್ಕೆ ಬಹುತೇಕ ನಿಶ್ಚಿತ ಎಂದು ಹೇಳಲಾಗುತ್ತಿದೆ.
ಶಿಂಜೋ ಅಬೆ-ಯೋಶಿಹಿಡೆ ಸುಗಾ
ಶಿಂಜೋ ಅಬೆ-ಯೋಶಿಹಿಡೆ ಸುಗಾ

ನವದೆಹಲಿ: ಆರೋಗ್ಯ ಕಾರಣಗಳಿಂದ ಜಪಾನ್ ಪ್ರಧಾನ ಮಂತ್ರಿ ಹುದ್ದೆಗೆ ಕಳೆದ ತಿಂಗಳು ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದ ಶಿಂಜೋ ಅಬೆ ಅವರ ಉತ್ತರಾಧಿಕಾರಿಯಾಗಿ ಜಪಾನ್ ನ ಸಂಪುಟದ ಮುಖ್ಯ ಕಾರ್ಯದರ್ಶಿ ಯೋಶಿಹಿಡೆ ಸುಗಾ ಅವರ ಆಯ್ಕೆ ಬಹುತೇಕ ನಿಶ್ಚಿತ ಎಂದು ಹೇಳಲಾಗುತ್ತಿದೆ.

ಶಿಂಜೋ ಅಬೆ ಅವರ ಉತ್ತರಾಧಿಕಾರಿಯನ್ನು ಚುನಾಯಿಸಲು ಸೋಮವಾರ ಜಪಾನ್ ನ ಆಡಳಿತಾರೂಢ ಲಿಬೆರಲ್ ಡೆಮಾಕ್ರಟಿಕ್ ಪಾರ್ಟಿ( ಎಲ್ ಡಿ ಪಿ) ಸಭೆ ಕರೆಯಲಾಗಿದೆ. 

ಶಿಂಜೋ ಅಬೆ ಅವರ ಪರಮಾಪ್ತರಾಗಿರುವ, ಸುಗಾ ಪ್ರಧಾನ ಮಂತ್ರಿ ಹುದ್ದೆಗೆ ಏರುವ ಸಂಭವನೀಯರ ಪೈಕಿ ಮುಂಚೋಣಿಯಲ್ಲಿದ್ದಾರೆ. ಮಾಜಿ ರಕ್ಷಣಾ ಸಚಿವ ಶಿಗೇರು ಇಶಿಬಾ, ಮಾಜಿ ವಿದೇಶಾಂಗ ಸಚಿವ ಫ್ಯೂಮಿಯೊ ಕಿಶಿಡಾ ಕಣದಲ್ಲಿರುವ ಇತರ ಇಬ್ಬರು ಪ್ರಧಾನಿ ಹುದ್ದೆ ಆಕಾಂಕ್ಷಿಗಳು.

ಎಂಟು ವರ್ಷಗಳ ಅಧಿಕಾರದ ನಂತರ ಶಿಂಜೋ ಅಭೆ ಅವರು ರಾಜೀನಾಮೆ ನಿರ್ಧಾರವನ್ನು ಕಳೆದ ತಿಂಗಳು ಪ್ರಕಟಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com