ಕೋವಿಡ್-19: ಲಸಿಕೆಗಿಂತ ಮಾಸ್ಕ್ ಹೆಚ್ಚು ಸುರಕ್ಷಿತ!

ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದ ತಡೆಯುವುದು ಸೂಕ್ತ. ಅಂತೆಯೇ ಸೋಂಕು ತಗುಲಿದ ಬಳಿಕ ನೀಡುವ ಲಸಿಕೆಗಿಂತ ರೋಗ ಬಾರದಂತೆ ತಡೆಯುವ ಮಾಸ್ಕ್ ಹೆಚ್ಚು ಸುರಕ್ಷಿತ ಎಂದು ಅಮೆರಿಕಾದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ)  ನಿರ್ದೇಶಕ ರಾಬರ್ಟ್ ರೆಡ್ಫೀಲ್ಡ್ ಹೇಳಿದ್ದಾರೆ.
ಸಿಡಿಸಿ ನಿರ್ದೇಶಕ ರಾಬರ್ಟ್ ರೆಡ್ಫೀಲ್ಡ್
ಸಿಡಿಸಿ ನಿರ್ದೇಶಕ ರಾಬರ್ಟ್ ರೆಡ್ಫೀಲ್ಡ್

ವಾಷಿಂಗ್ಟನ್: ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದ ತಡೆಯುವುದು ಸೂಕ್ತ. ಅಂತೆಯೇ ಸೋಂಕು ತಗುಲಿದ ಬಳಿಕ ನೀಡುವ ಲಸಿಕೆಗಿಂತ ರೋಗ ಬಾರದಂತೆ ತಡೆಯುವ ಮಾಸ್ಕ್ ಹೆಚ್ಚು ಸುರಕ್ಷಿತ ಎಂದು ಅಮೆರಿಕಾದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ)  ನಿರ್ದೇಶಕ ರಾಬರ್ಟ್ ರೆಡ್ಫೀಲ್ಡ್ ಹೇಳಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕೇವಲ ಎರಡು ಮಾರ್ಗಗಳಿವೆ. ಒಂದು ದೈಹಿಕ ಅಂತರ ಕಾಯ್ದುಕೊಳ್ಳುವುದು, ಇನ್ನೊಂದು ಮಾಸ್ಕ್ ಧರಿಸುವುದು. ಪ್ರಸ್ತುತ ಕೊರೊನಾ ಶಮನಕ್ಕೆ ಔಷಧಿ ಕಂಡುಹಿಡಿಯಲು ಜಗತ್ತಿನ ಹಲವು ದೇಶಗಳು ಪ್ರಯತ್ನ ನಡೆಸುತ್ತಿವೆ. ಹಲವು  ದೇಶಗಳಲ್ಲಿ ಕ್ಲಿನಿಕಲ್ ಪ್ರಯೋಗಗಳು ಸಹ ನಡೆಯುತ್ತಿವೆ. ಆದರೆ, ಲಸಿಕೆಗಳಿಗಿಂತ ಮಾಸ್ಕ್ ನಮಗೆ ಹೆಚ್ಚಿನ ಸುರಕ್ಷತೆಯನ್ನು ಕಲ್ಪಿಸುತ್ತದೆ. ಇದು ಅತ್ಯಂತ ಶಕ್ತಿಶಾಲಿ ಸಾರ್ವಜನಿಕ ಆರೋಗ್ಯ ಸಾಧನವಾಗಿದೆ ಎಂದು ರಾಬರ್ಟ್ ರೆಡ್ಫೀಲ್ಡ್ ಹೇಳಿದ್ದಾರೆ.

ಭಾರತದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ನಂತೆ ಅಮೆರಿಕಾದಲ್ಲಿ ಸಿಡಿಸಿ ಕಾರ್ಯನಿರ್ವಹಿಸುತ್ತಿದೆ. ಸೆನೆಟ್ ಉಪ ಸಮಿತಿ ವಿಚಾರಣೆಯಲ್ಲಿ ಅಮೆರಿಕಾದ ಶಾಸನ ಸಭಾ ಸದಸ್ಯರ ಪ್ರಶ್ನೆಗಳಿಗೆ ರೆಡ್ಫೀಲ್ಡ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಒಂದು ವೇಳೆ ಲಸಿಕೆ ಲಭ್ಯವಾದರೂ, ಮಾಸ್ಕ್  ಗಳನ್ನು ಕಡ್ಡಾಯವಾಗಿ ಧರಿಸಬೇಕು. ಏಕೆಂದರೆ ಮಾಸ್ಕ್ ಗಳು ಲಸಿಕೆಗಳಿಗಿಂತ ನಮ್ಮನ್ನು ಹೆಚ್ಚು ರಕ್ಷಿಸುತ್ತವೆ ಎಂದು ಅವರು ಹೇಳಿದ್ದಾರೆ.

ಮುಂದಿನ ವರ್ಷ ಅಂದರೆ ಜನವರಿಯಲ್ಲಿ ಲಭಿಸಲಿರುವ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com