ಅತಿ ವೇಗದ ಅಪಾಯಕಾರಿ ಡ್ರೈವಿಂಗ್: ಸ್ವಯಂ ಚಾಲನೆಗೆ ಇಟ್ಟು ಕಾರಿನಲ್ಲೇ ನಿದ್ದೆ ಮಾಡಿದ್ದ ವ್ಯಕ್ತಿಗೆ ದಂಡ!

ಕಾರನ್ನು ಸ್ವಯಂ ಚಾಲಿತ ಮೋಡ್ ನಲ್ಲಿಟ್ಟು ನಿದ್ದೆ ಮಾಡುತ್ತಿದ್ದ ವ್ಯಕ್ತಿಗೆ ದಂಡ ವಿಧಿಸಲಾಗಿದೆ.
ಅತಿ ವೇಗದ ಅಪಾಯಕಾರಿ ಡ್ರೈವಿಂಗ್: ಸ್ವಯಂ ಚಾಲನೆಗೆ ಇಟ್ಟು ಕಾರಿನಲ್ಲೇ ನಿದ್ದೆ ಮಾಡಿದ್ದ ವ್ಯಕ್ತಿಗೆ ದಂಡ!
ಅತಿ ವೇಗದ ಅಪಾಯಕಾರಿ ಡ್ರೈವಿಂಗ್: ಸ್ವಯಂ ಚಾಲನೆಗೆ ಇಟ್ಟು ಕಾರಿನಲ್ಲೇ ನಿದ್ದೆ ಮಾಡಿದ್ದ ವ್ಯಕ್ತಿಗೆ ದಂಡ!

ಕಾರನ್ನು ಸ್ವಯಂ ಚಾಲಿತ ಮೋಡ್ ನಲ್ಲಿಟ್ಟು ನಿದ್ದೆ ಮಾಡುತ್ತಿದ್ದ ವ್ಯಕ್ತಿಗೆ ದಂಡ ವಿಧಿಸಲಾಗಿದೆ. ಕೆನಡಾದ ಹೆದ್ದಾರಿಯಲ್ಲಿ ಅತಿಯಾದ ವೇಗದಲ್ಲಿ ಚಲಿಸುತ್ತಿದ್ದ ಕಾರನ್ನು ಅದರ ಚಾಲಕ ಸ್ವಯಂ ಚಾಲಿತ ಮೋಡ್ ನಲ್ಲಿಟ್ಟು ತಾನು ಆರಾಮಾಗಿ ನಿದ್ದೆ ಮಾಡುತ್ತಿದ್ದ. ಅಲ್ಬರ್ಟಾ ಪ್ರಾಂತ್ಯದ ಪೊನೋಕಾ ಗ್ರಾಮೀಣ ಕೆನಡಾದ ಹೆದ್ದಾರಿಯಲ್ಲಿ ನಡೆದಿದೆ.

ಅತಿ ವೇಗದಲ್ಲಿ ಚಾಲನೆ ಮಾಡಿದ 20 ವರ್ಷದ ವ್ಯಕ್ತಿಗೆ ಅಪಾಯಕಾರಿ ಡ್ರೈವಿಂಗ್ ಅಡಿಯಲ್ಲಿ ಪೊಲೀಸರು ದಂಡ ವಿಧಿಸಿದ್ದಾರೆ. ಈ ಪ್ರದೇಶದಲ್ಲಿ ಪ್ರತಿ ಗಂಟೆಗೆ 110 ಕಿಲೋಮೀಟರ್ ವೇಗ ಮಿತಿ ಇದೆ ಆದರೆ ಈ ಕಾರು ಪ್ರತಿ ಗಂಟೆಗೆ 140 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. 

ಟೆಸ್ಲಾ ಕಾರಿನಲ್ಲಿ ಆಟೋ ಪೈಲಟ್ ಮೋಡ್ ಇದ್ದು ಸ್ವಯಂ ಚಾಲಿತ ಚಾಲನೆಗೆ ಅನುವು ಮಾಡಿಕೊಡಲಿದೆ ಆದರೆ ಸಂಪೂರ್ಣವಾಗಿ ಕಾರನ್ನು ಮನುಷ್ಯನ ನಿಯಂತ್ರಣವೇ ಇಲ್ಲದೇ ಸ್ವಯಂ ಚಾನಲನೆ ಒಳಪಡಿಸುವುದಕ್ಕೆ ಸಾಧ್ಯವಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com