ಮಹಾಮಾರಿ ಕೊರೋನಾಗೆ ನಲುಗುತ್ತಿರುವ ವಿಶ್ವ: ಅತೀ ಹೆಚ್ಚು ಸೋಂಕಿತ ಟಾಪ್ 10 ಪಟ್ಟಿಯಲ್ಲಿ ಈಗಲೂ ಅಮೆರಿಕಾ ನಂ.1...!

ಮಹಾಮಾರಿ ವಜ್ರಮುಷ್ಟಿಯಲ್ಲಿ ಇಡೀ ವಿಶ್ವ ನಲುಗಿ ಹೋಗುತ್ತಿದ್ದು, ವಿವಿಧ ರಾಷ್ಟ್ರಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ 30.6 ಕೋಟಿ ತಲುಪಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾಸ್ಕೋ: ಮಹಾಮಾರಿ ವಜ್ರಮುಷ್ಟಿಯಲ್ಲಿ ಇಡೀ ವಿಶ್ವ ನಲುಗಿ ಹೋಗುತ್ತಿದ್ದು, ವಿವಿಧ ರಾಷ್ಟ್ರಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ 30.6 ಕೋಟಿ ತಲುಪಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ವಿಶ್ವ ವಿವಿಧ ರಾಷ್ಟ್ರಗಳಲ್ಲಿ ಒಟ್ಟಾರೆ 30,674,077 ಮಂದಿ ಸೋಂಕಿಗೊಳಗಾಗಿದ್ದು, 955,440 ಮಂದಿ ಬಲಿಯಾಗಿದ್ದಾರೆ. 

30,674,077 ಮಂದಿ ಸೋಂಕಿತರ ಪೈಕಿ 22,587,826, ಇನ್ನೂ 7,442,014 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ. 

ವಿಶ್ವದಲ್ಲಿ ಅತಿಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಅಮೆರಿಕಾ ಮುಂದುವರೆದಿದ್ದು, ಆ ರಾಷ್ಟ್ರವೊಂದರಲ್ಲಿಯೇ 6,967,403    ಸೋಂಕಿತರಿದ್ದು, ಈವರೆಗೆ 203,824 ಮಂದಿ ಸಾವಿಗೀಡಾಗಿದ್ದಾರೆ.

ಎರಡನೇ ಸ್ಥಾನಕ್ಕೆ ತಲುಪಿರುವ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 54 ಲಕ್ಷಕ್ಕೆ ತಲುಪಿದ್ದು,  86,752 ಮಂದಿ ಸಾವಿಗೀಡಾಗಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ ಸೋಂಕಿತರ ಸಂಖ್ಯೆ 4,528,347ಕ್ಕೆ ಏರಿಕೆಯಾಗಿದ್ದು, 136,565 ಮಂದಿ ಬಲಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com