ಶ್ವೇತಭವನಕ್ಕೆ ಲಕೋಟೆಯ ಮೂಲಕ ಮಾರಣಾಂತಿಕ ವಿಷ ರವಾನೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರುವ ಶ್ವೇತಭವನಕ್ಕೆ ಲಕೋಟೆಯ ಮೂಲಕ ಮಾರಣಾಂತಿಕ ವಿಷ ರವಾನೆ ಮಾಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಶ್ವೇತಭವನ
ಶ್ವೇತಭವನ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರುವ ಶ್ವೇತಭವನಕ್ಕೆ ಲಕೋಟೆಯ ಮೂಲಕ ಮಾರಣಾಂತಿಕ ವಿಷ ರವಾನೆ ಮಾಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ಹೌದು.. ಅಮೆರಿಕ ಆಡಳಿತ ಯಂತ್ರದ ಜೀವನಾಡಿ, ಶ್ವೇತಭವನಕ್ಕೆ ಮಾರಣಾಂತಿಕ ವಿಷವನ್ನು ಲಕೋಟೆಯ ಮೂಲಕ ಕಳುಹಿಸಲಾಗಿದ್ದು ಅದನ್ನು ಅಧಿಕಾರಿಗಳು ಪತ್ತೆಹಚ್ಚಿ ಅನಾಹುತ ತಪ್ಪಿಸಿದ್ದಾರೆ.

ಲಕೋಟೆಯ ಮೂಲಕ ಕಳುಹಿಸಲಾದ ವಸ್ತು ರಿಸಿನ್, ಎಂಬ ಮಾರಣಾಂತಿಕ ವಿಷ ಎಂದು ಗುರುತಿಸಲಾಗಿದೆ ಎಂದು ಕಾನೂನು ಜಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. ಹೊದಿಕೆಯ ಮೇಲೆ ನಡೆಸಿದ ಪರೀಕ್ಷೆಗಳು ಮಾರಕ ವಿಷದ ವಸ್ತುವನ್ನು ಗುರುತಿಸಿವೆ.

ಅಧ್ಯಕ್ಷ ಟ್ರಂಪ್ ಹೆಸರಲ್ಲಿ ಬಂದ ಈ ಪತ್ರದ ಕುರಿತು ಅನುಮಾನ ಬಂದ ಕೂಡಲೇ ಪತ್ರವನ್ನು ವಶಪಡಿಸಿಕೊಂಡ ಯುಎಸ್ ಸಿಕ್ರೇಟ್ ಸರ್ವೀಸ್ ಅಧಿಕಾರಿಗಳು, ಪರಿಶೀಲನೆ ನಡೆಸಿದಾಗ ರಿಸಿನ್ ವಿಷದ ಅಂಶಗಳು ಪತ್ತೆಯಾಗಿವೆ. ಸದ್ಯ ಪತ್ರದ ಮೂಲವನ್ನು ಅರಿಯಲು ಪ್ರಯತ್ನಿಸುತ್ತಿರುವ ಯುಎಸ್ ಸಿಕ್ರೇಟ್  ಸರ್ವೀಸ್, ಇದಕ್ಕಾಗಿ ಅಂಚೆ ಇಲಾಖೆಯ ನೆರವು ಕೋರಿದೆ ಎಂದು ಮೂಲಗಳು ತಿಳಿಸಿವೆ. ಅಧ್ಯಕ್ಷೀಯ ಚುನಾವಣೆಗೂ ಮೊದಲೇ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು, ಶ್ವೇತಭವನಕ್ಕೆ ರಿಸಿನ್ ವಿಷದ ಅಂಶವಿರುವ ಪತ್ರವನ್ನು ರವಾನಿಸಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

72 ಗಂಟೆಗಳಲ್ಲೇ ಸಾವು ತರುವ ಮಾರಣಾಂತಿಕ ವಿಷ ರಿಸಿನ್
ಇನ್ನು ಈ ವಿಷ ಪದಾರ್ಥದಿಂದ ಓರ್ವ ವ್ಯಕ್ತಿ ಕೇವಲ 36 ರಿಂದ 72 ಗಂಟೆಗಳ ಅವಧಿಯಲ್ಲಿ ಸಾವಿಗೀಡಾಗಬಹುದು. ಹೀಗಾಗಿ ಈ ರಿಸಿನ್ ವಿಷವನ್ನು, ಜೈವಿಕ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ಕುರಿತು ಅನುಮಾನಗಳು ವ್ಯಕ್ತವಾಗುತ್ತಿದೆ. ಈ ಹಿಂದೆ ಅಮೆರಿಕದಲ್ಲಿ ಇದೇ ರಿಸಿನ್ ವಿಷ ಬಳಸಿ ಪತ್ರಗಳನ್ನು  ರವಾನಿಸಿರುವ ಹಲವು ಘಟನೆಗಳು ವರದಿಯಾಗಿವೆ. 2018ರಲ್ಲಿ ವಿಲಿಯಂ ಕ್ಲೈಡ್ ಅಲೆನ್ III ಎಂಬಾತ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಎಫ್‌ಬಿಐ ನಿರ್ದೇಶಕ ಸ್ಟೋಫರ್ ವ್ರೇ ಸೇರಿದಂತೆ ಇತರ ಫೆಡರಲ್ ಅಧಿಕಾರಿಗಳ ಹೆಸರಲ್ಲಿ ರಿಕಿನ್ ಲೇಪಿತ ಪತ್ರಗಳನ್ನು ರವಾನಿಸಿರುವುದಾಗಿ ಬೆದರಿಕೆ ಹಾಕಿದ್ದ.  ಇದಕ್ಕೂ ಮೊದಲು ಅಂದರೆ 2014ರಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಹೆಸರಲ್ಲಿ ರಿಸಿನ್ ವಿಷಲೇಪಿತ ಪತ್ರಗಳನ್ನು ರವಾನಿಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com