ಸಮಗ್ರ ಸುಧಾರಣೆಗಳಿಲ್ಲದ ವಿಶ್ವಸಂಸ್ಥೆ 'ವಿಶ್ವಾಸಾರ್ಹತೆಯ ಬಿಕ್ಕಟ್ಟು' ಎದುರಿಸುತ್ತಿದೆ: ಪ್ರಧಾನಿ ಮೋದಿ

ಸಮಗ್ರ ಸುಧಾರಣೆಗಳಿಲ್ಲದೆ ವಿಶ್ವಸಂಸ್ಥೆಯು "ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು" ಎದುರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ, ಇಂದಿನ ವಾಸ್ತವಗಳನ್ನು ಪ್ರತಿಬಿಂಬಿಸುವ, ಎಲ್ಲಾ ಮಧ್ಯಸ್ಥಗಾರರಿಗೆ ಧ್ವನಿ ಯಾಗುವ ಸಮಕಾಲೀನ ಸವಾಲುಗಳನ್ನು ಪರಿಹರಿಸುವ ವ ಮತ್ತು ಮಾನವ ಕಲ್ಯಾಣಕ್ಕೆ ಒತ್ತು ನೀಡುವ ಸುಧಾರಿತ ಬಹುಪಕ್ಷೀಯ ಶಕ್ತಿಯುತ ಸಂಘಟನೆ ಜಗತ್ತಿಗೆ ಅಗತ್ಯ

Published: 22nd September 2020 03:10 PM  |   Last Updated: 22nd September 2020 03:46 PM   |  A+A-


ನರೇಂದ್ರ ಮೋದಿ

Posted By : Raghavendra Adiga
Source : The New Indian Express

ವಿಶ್ವಸಂಸ್ಥೆ: ಸಮಗ್ರ ಸುಧಾರಣೆಗಳಿಲ್ಲದೆ ವಿಶ್ವಸಂಸ್ಥೆಯು "ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು" ಎದುರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ, ಇಂದಿನ ವಾಸ್ತವಗಳನ್ನು ಪ್ರತಿಬಿಂಬಿಸುವ, ಎಲ್ಲಾ ಮಧ್ಯಸ್ಥಗಾರರಿಗೆ ಧ್ವನಿ ಯಾಗುವ ಸಮಕಾಲೀನ ಸವಾಲುಗಳನ್ನು ಪರಿಹರಿಸುವ ಮತ್ತು ಮಾನವ ಕಲ್ಯಾಣಕ್ಕೆ ಒತ್ತು ನೀಡುವ ಸುಧಾರಿತ ಬಹುಪಕ್ಷೀಯ ಶಕ್ತಿಯುತ ಸಂಘಟನೆ ಜಗತ್ತಿಗೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಸುಧಾರಿತ ಬಹುಪಕ್ಷೀಯತೆಗಾಗಿ  ಪ್ರಧಾನಿ ಮೋದಿಯವರ ಕರೆ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ, ಏಕೆಂದರೆ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚುನಾಯಿತ ಶಾಶ್ವತ ಸದಸ್ಯರಾಗಿ 2021ರ ಜನವರಿ 1 ರಿಂದ ಎರಡು ವರ್ಷಗಳ ಅವಧಿಗೆ ಸ್ಥಾನ ಪಡೆದಿದೆ.

"ನಾವು ಇಂದಿನ ಸವಾಲುಗಳನ್ನು ಹಳೆಯ ರಚನೆಗಳೊಂದಿಗೆ ಎದುರಿಸಲು ಸಾಧ್ಯವಿಲ್ಲ. . ಸಮಗ್ರ ಸುಧಾರಣೆಗಳಿಲ್ಲದೆ, ವಿಶ್ವಸಂಸ್ಥೆ ವಿಶ್ವಾಸಾರ್ಹತೆಯ ಕ್ಕಟ್ಟನ್ನು ಎದುರಿಸುತ್ತಿದೆ" ಎಂದು ಮೋದಿ ಸೋಮವಾರ ವಿಶ್ವಸಂಸ್ಥೆಯ 75 ನೇ ವಾರ್ಷಿಕೋತ್ಸವದ ನೆನಪಿನ ಸಾಮಾನ್ಯ ಸಭೆಯ ಉನ್ನತ ಮಟ್ಟದ ಸಭೆಯಲ್ಲಿನ ತಮ್ಮ ವೀಡಿಯೊ ಭಾಷಣದಲ್ಲಿ ಹೇಳಿದರು. . ವಿಶ್ವಸಂಸ್ಥೆ 75 ವರ್ಷಗಳನ್ನು ಪೂರೈಸುತ್ತಿದ್ದಂತೆ , 193 ಸದಸ್ಯರ ವಿಶ್ವಸಂಸ್ಥೆ ಸಾಮಾನ್ಯ ಸಭೆ ಭವಿಷ್ಯದ ದೃಷ್ಟಿಕೋನವುಳ್ಳ  ರಾಜಕೀಯ ಘೋಷಣೆಯನ್ನು ಅಂಗೀಕರಿಸಿತು, ಅದು ಭಯೋತ್ಪಾದನೆಯನ್ನು ಎದುರಿಸಲು ಯಾಂತ್ರಿಕ ವ್ಯವಸ್ಥೆಯನ್ನು ಬಲಪಡಿಸುವ ಸ್ಪಷ್ಟ ಕರೆ  ನೀಡಿದೆ. ಕೋವಿಡ್ 19 ಪಿಡುಗು. ಹಾಗೂ ಇಅತರೆ ಸವಾಲುಗಳನ್ನು ಎದುರಿಸಲು ಸುಧಾರಿತ ಬಹುಪಕ್ಷೀಯತೆ, ಆಂತರ್ಗತವಾದ ಅಭಿವೃದ್ಧಿ ಹಾಗೂ ಉತ್ತಮ ಸಿದ್ದತೆಯ ಅಗತ್ಯವನ್ನು ಅದು ಹೇಳಿದೆ.

ಈ ಘೋಷಣೆಯು ವಿಶ್ವಸಂಸ್ಥೆಯ ಸುಧಾರಣೆಯ ಅಗತ್ಯವನ್ನು ಸಹ ಅಂಗೀಕರಿಸಿದೆ ಎಂದು ಮೋದಿ ಹೇಳಿದರು, "ಇಂದಿನ ಅಂತರ್ಸಂಪರ್ಕಿತ ಜಗತ್ತಿಗೆ, ನಮಗೆ ಇಂದಿನ ವಾಸ್ತವಗಳನ್ನು ಪ್ರತಿಬಿಂಬಿಸುವ, ಎಲ್ಲಾ ಮಧ್ಯಸ್ಥಗಾರರಿಗೆ ಇದು ಧ್ವನಿಯಾಗಲಿದೆ.  ಸಮಕಾಲೀನ ಸವಾಲುಗಳನ್ನು ಪರಿಹರಿಸುವ ಮತ್ತು ಮಾನವ ಕಲ್ಯಾಣವನ್ನು ಕೇಂದ್ರೀಕರಿಸುವ ಸುಧಾರಿತ ಬಹುಪಕ್ಷೀಯತೆಯ ಅಗತ್ಯವಿದೆ.  ಈ ನಿಟ್ಟಿನಲ್ಲಿ ಭಾರತವು ಇತರ ಎಲ್ಲ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದೆ" ಎಂದು ಅವರು ಹೇಳಿದರು.

ಭದ್ರತಾ ಮಂಡಳಿಯನ್ನು ಸುಧಾರಿಸಲು ಭಾರತವು ದಶಕಗಳಿಂದ ಪ್ರಯತ್ನಿಸುತ್ತಿದೆ.  1945 ರಲ್ಲಿ ಸ್ಥಾಪಿಸಲಾದ ವಿಶ್ವಸಂಸ್ಥೆಯ ಸಂರಚನೆ   21 ನೇ ಶತಮಾನದ ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಪ್ರಸ್ತುತ ಸವಾಲುಗಳನ್ನು ಎದುರಿಸಲು ಸಜ್ಜುಗೊಂಡಿಲ್ಲ ಎಂದು ಹೇಳಿದರು. ಕೌನ್ಸಿಲ್ನಲ್ಲಿ ಭಾರತಕ್ಕೆ ಶಾಶ್ವತ ಸ್ಥಾನಕ್ಕಾಗಿ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯರಲ್ಲಿ ನಾಲ್ಕು ರಾಷ್ಟ್ರಗಳ ಬೆಂಬಲವಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp