ಐಶಾರಾಮಿ ಅಲ್ಲ, ಶಿಸ್ತಿನ ಜೀವನ ನಡೆಸುತ್ತಿದ್ದೇನೆ: ಬ್ರಿಟನ್ ಕೋರ್ಟ್ ಗೆ ಅನಿಲ್ ಅಂಬಾನಿ ಹೇಳಿಕೆ

ಸಾಲ ಮಾಡಿ ಐಶಾರಾಮಿ ಜೀವನ ಮಾಡುತ್ತಿದ್ದೇನೆ ಎಂಬ ಆರೋಪಗಳಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದು ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಹೇಳಿದ್ದಾರೆ.
ಅನಿಲ್ ಅಂಬಾನಿ
ಅನಿಲ್ ಅಂಬಾನಿ

ಲಂಡನ್: ಸಾಲ ಮಾಡಿ ಐಶಾರಾಮಿ ಜೀವನ ಮಾಡುತ್ತಿದ್ದೇನೆ ಎಂಬ ಆರೋಪಗಳಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದು ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಹೇಳಿದ್ದಾರೆ.

ಚೀನಿ ಬ್ಯಾಂಕುಗಳು ಸಲ್ಲಿಸಿದ ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯಲ್ಲಿ ಅನಿಲ್ ಅಂಬಾನಿ ಈ ಹೇಳಿಕೆ ನೀಡಿದ್ದು, 'ನಾನೊಬ್ಬ ಸಾಮಾನ್ಯ ಮನುಷ್ಯ ನನ್ನ ಬಳಿ ಕೇವಲ ಒಂದು ಕಾರು ಇದೆ. ಈಗಾಗಲೇ ಕೋರ್ಟ್‌ ಖರ್ಚಿಗೆ ಒಡವೆಗಳನ್ನು ಮಾರಿದ್ದಾಗಿದೆ. ಸಾಲ ಮಾಡಿ ಐಶಾರಾಮಿ ಜೀವನ ಮಾಡುತ್ತಿದ್ದೇನೆ ಎಂಬ ಆರೋಪಗಳಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದು ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ಅನಿಲ್ ಅಂಬಾನಿ ಅವರು, ನಾನು ಕೇವಲ ಒಂದು ಕಾರನ್ನು ಮಾತ್ರ ಹೊಂದಿದ್ದು, ಎಲ್ಲಾ ಆಭರಣಗಳನ್ನು ಮಾರಾಟ ಮಾಡುವ ಮೂಲಕ ಕಾನೂನು ಶುಲ್ಕವನ್ನು ಪಾವತಿಸಿದ್ದೇನೆ. ನನ್ನ ಖರ್ಚುಗಳು ಅತ್ಯಲ್ಪ ಮತ್ತು ಹೆಂಡತಿ ಮತ್ತು ಕುಟುಂಬದಿಂದ ಭರಿಸಲ್ಪಡುತ್ತಿವೆ. ನನಗೆ ಅದ್ದೂರಿ ಜೀವನಶೈಲಿ ಅಲ್ಲ ಮತ್ತು ಬೇರೆ ಆದಾಯವಿಲ್ಲ. ಆಭರಣಗಳ ಮಾರಾಟದಿಂದ ನಾನು ಕಾನೂನು ವೆಚ್ಚವನ್ನು ಪೂರೈಸಿದ್ದೇನೆ ಮತ್ತು ಹೆಚ್ಚಿನ ಖರ್ಚುಗಳನ್ನು ನಾನು ಪೂರೈಸಬೇಕಾದರೆ (ಅದು) ಇತರ ಆಸ್ತಿಗಳನ್ನು ವಿಲೇವಾರಿ ಮಾಡಲು ನ್ಯಾಯಾಲಯದ ಅನುಮೋದನೆ ಬೇಕು ಎಂದು ಹೇಳಿದ್ದಾರೆ.

ಇನ್ನು ಚೀನಾ ಮೂಲದ 3 ಬ್ಯಾಂಕುಗಳಿಂದ ತೆಗೆದುಕೊಂಡ ಸಾಲಗಳಿಗೆ ವೈಯಕ್ತಿಕ ಖಾತ್ರಿ ನೀಡಲು ಅನಿಲ್ ಅಂಬಾನಿ ಹಿಂದೇಟು ಹಾಕಿದಾಗ ಸಾಲದ ಒಪ್ಪಂದ ಮುರಿದ ಹಿನ್ನಲೆಯಲ್ಲಿ ಲಂಡನ್ ನ ಹೈಕೋರ್ಟ್ ತನ್ನ ಕಾನೂನು ವ್ಯಾಪ್ತಿಯಲ್ಲಿ ಅಂಬಾನಿ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಆರು ವಾರದೊಳಗೆ 100 ಮಿಲಿಯನ್ ಡಾಲರ್‌ಗಳನ್ನು ನೀಡಬೇಕೆಂದು ಇಂಗ್ಲೆಂಡ್ ಕೋರ್ಟ್ ಈ ಹಿಂದೆ ನಿರ್ದೇಶಿಸಿತ್ತು. ಆದರೆ ಅಂಬಾನಿ ತನ್ನ ಬಳಿ ಕೊಡಲು ಏನು ಉಳಿದಿಲ್ಲ ಎಂದು ವಾದಿಸಿದ್ದರು. 

ಏನಿದು ಪ್ರಕರಣ?
ಚೀನಾ ಮೂಲದ ಮೂರು ಬ್ಯಾಂಕುಗಳು ಅನಿಲ್ ವಿರುದ್ಧ ಲಂಡನ್ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದವು. ಅನಿಲ್ ತೆಗೆದುಕೊಂಡ ಸಾಲಕ್ಕೆ ವೈಯುಕ್ತಿಕಖಾತ್ರಿ ನೀಡುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿದ್ದವು. ಚೀನಾದ ಕೈಗಾರಿಕಾ ಮತ್ತು ವಾಣಿಜ್ಯ ಬ್ಯಾಂಕ್ ಲಿಮಿಟೆಡ್‌, ಚೀನಾ ಅಭಿವೃದ್ಧಿ ಬ್ಯಾಂಕ್, ಚೀನಾ ರಫ್ತು-ಆಮದು ಬ್ಯಾಂಕ್ 2012ರಲ್ಲಿ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ ಲಿಮಿಟೆಡ್‌ಗೆ 925.2 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 6,603 ಕೋಟಿ 80 ಲಕ್ಷದ 400) ಸಾಲವನ್ನು ನೀಡಿದ್ದವು. ಜೂನ್ 12 ರ ಮೊದಲು ಮೂರು ಚೀನೀ ಬ್ಯಾಂಕುಗಳಿಗೆ 5,281 ಕೋಟಿ ರೂ. ಸಾಲ ಮತ್ತು 7 ಕೋಟಿ ರೂ. ಕಾನೂನು ವೆಚ್ಚವನ್ನು ಪಾವತಿಸಲು ಆದೇಶಿಸಲಾಯಿತು. ಇದನ್ನು ಪಾವತಿಸಲು ವಿಫಲವಾದಾಗ, ತನ್ನ ವಿಶ್ವಾದ್ಯಂತ ಸ್ವತ್ತುಗಳನ್ನು ಅಫಿಡವಿಟ್ ಮೂಲಕ ಘೋಷಿಸಲು ಆದೇಶಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com