ಅಜೆರಿ-ಅರ್ಮೆನಿಯನ್ ಸಂಘರ್ಷ: ಕನಿಷ್ಠ 23 ಮಂದಿ ಸಾವು, 100ಕ್ಕೂ ಹೆಚ್ಚು ಮಂದಿ ಗಾಯ

ಅರ್ಮೆನಿಯಾ ಮತ್ತು ಅಝೆರ್ಬೈಜನಿಯ ಎರಡು ಗುಂಪುಗಳ ನಡುವೆ ವಿವಾದಿತ ಪ್ರತ್ಯೇಕತಾವಾದಿ ಭೂಪ್ರದೇಶ ನಾಗೊರ್ನೊ-ಕರಬಖ್ ಗೆ ಸಂಬಂಧಿಸಿದಂತೆ ನಡೆದ ತೀವ್ರ ಘರ್ಷಣೆಯಲ್ಲಿ 23ಕ್ಕೂ ಅಧಿಕ ಮಂದಿ ಮೃತಪಟ್ಟು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಯೆರೆವಾನ್(ಅರ್ಮೆನಿಯಾ): ಅರ್ಮೆನಿಯಾ ಮತ್ತು ಅಝೆರ್ಬೈಜನಿಯ ಎರಡು ಗುಂಪುಗಳ ನಡುವೆ ವಿವಾದಿತ ಪ್ರತ್ಯೇಕತಾವಾದಿ ಭೂಪ್ರದೇಶ ನಾಗೊರ್ನೊ-ಕರಬಖ್ ಗೆ ಸಂಬಂಧಿಸಿದಂತೆ ನಡೆದ ತೀವ್ರ ಘರ್ಷಣೆಯಲ್ಲಿ 23ಕ್ಕೂ ಅಧಿಕ ಮಂದಿ ಮೃತಪಟ್ಟು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

16 ಮಂದಿ ಅರ್ಮೆನಿಯಾ ಪ್ರತ್ಯೇಕತಾವಾದಿ ಹೋರಾಟಗಾರರು ಮೃತಪಟ್ಟು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಬಂಡಾಯ ನಾಯಕರು ತಿಳಿಸಿರುವುದಾಗಿ ಅಲ್ ಜಝೀರ ವರದಿ ಮಾಡಿದ್ದಾರೆ.ಎರಡೂ ಕಡೆಯಿಂದ ಸಾವು-ನೋವು ಸಂಭವಿಸಿದ್ದು ಅರ್ಮೆನಿಯಾದ ಓರ್ವ ಮಹಿಳೆ ಮತ್ತು ಮಗು ಹಾಗೂ ಅಝೆರ್ಬೈಜನಿ ಕುಟುಂಬದ ಐವರು ಮೃತಪಟ್ಟಿದ್ದಾರೆ. ಅರ್ಮೆನಿಯಾ ಪ್ರತ್ಯೇಕತಾವಾದಿಗಳು ಮೊದಲಿಗೆ ಘರ್ಷಣೆ ಆರಂಭಿಸಿದ್ದು ಎಂದು ವರದಿಯಾಗಿದೆ.

ಇದಕ್ಕೂ ಮುನ್ನ, ಅಝೆರ್ಬೈಜನ್ ಮತ್ತು ಅರ್ಮೆನಿಯಾದ ಪಡೆಗಳು ವಿವಾದಿತ ನಾಗೊರ್ನೊ-ಕರಬಖ್ ಪ್ರದೇಶದ ವಿಚಾರವಾಗಿ ಘರ್ಷಣೆ ನಡೆಸಿದ್ದವು. ಈ ಗಡಿ ಪ್ರದೇಶದಲ್ಲಿ ಸಂಘರ್ಷ ನಡೆದು ಉದ್ವಿಗ್ನ ಸ್ಥಿತಿ ವಾತಾವರಣ ನಿರ್ಮಾಣವಾಗಿರುವುದರಿಂದ ನೆರೆಯ ಅಮೆರಿಕಾ ಅಧ್ಯಕ್ಷೀಯ ಪದವಿಯ ಅಭ್ಯರ್ಥಿ ಜೊ ಬಿಡನ್ ಕಳವಳ ವ್ಯಕ್ತಪಡಿಸಿದ್ದಾರೆ.

ನಗೊರ್ನೊ-ಕರಬಖ್ ಪ್ರದೇಶದಲ್ಲಿ ಘರ್ಷಣೆ ನಡೆದು ತೀವ್ರ ಸಾವು-ನೋವು ಉಂಟಾಗಿದ್ದು ತೀವ್ರ ಆತಂಕವನ್ನುಂಟುಮಾಡಿದೆ. ಅರ್ಮೆನಿಯಾ ಮತ್ತು ಅಜೆರ್ಬೈಜನ್ ಮಧ್ಯೆ ಸಂಧಾನ ಏರ್ಪಡುವ ಅಗತ್ಯವಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com