ಬ್ರಿಟನ್‌ನ ನೂತನ ತಜ್ಞರ ವ್ಯಾಪಾರ ಸಮಿತಿಯಲ್ಲಿ ಭಾರತೀಯ ಮೂಲದ ಸ್ವಾತಿ ಧಿಂಗ್ರಾ!

ಬ್ರಿಟನ್ ಸರ್ಕಾರ ಸ್ಥಾಪಿಸಿರುವ ಹೊಸ ತಜ್ಞರ ವ್ಯಾಪರ ಸಮಿತಿಗೆ ಭಾರತೀಯ ಮೂಲದ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಸ್ವಾತಿ ಧಿಂಗ್ರಾ ನೇಮಕಗೊಂಡಿದ್ದಾರೆ.
ಸ್ವಾತಿ ಧಿಂಗ್ರಾ
ಸ್ವಾತಿ ಧಿಂಗ್ರಾ

ಲಂಡನ್: ಬ್ರಿಟನ್ ಸರ್ಕಾರ ಸ್ಥಾಪಿಸಿರುವ ಹೊಸ ತಜ್ಞರ ವ್ಯಾಪರ ಸಮಿತಿಗೆ ಭಾರತೀಯ ಮೂಲದ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಸ್ವಾತಿ ಧಿಂಗ್ರಾ ನೇಮಕಗೊಂಡಿದ್ದಾರೆ.

ಬ್ರೆಕ್ಸಿಟ್ ನಂತರ ಎಫ್ಟಿಎ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಸಾಧಿಸುವ ಸಲುವಾಗಿ "ಅತ್ಯಾಧುನಿಕ" ವ್ಯಾಪಾರ ಮಾದರಿಗಳು ಮತ್ತು ತಂತ್ರಗಳ ಬಳಕೆಗೆ ಸಲಹಾ ಸಮಿತಿಯನ್ನು ಬ್ರಿಟನ್ ರಚಿಸಿದೆ. 

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್(ಎಲ್‌ಎಸ್‌ಇ) ಯ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಮತ್ತು ದೆಹಲಿ ವಿಶ್ವವಿದ್ಯಾಲಯದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಮಾಜಿ ಹಳೆಯ ವಿದ್ಯಾರ್ಥಿ ಡಾ.ಸ್ವಾತಿ ಧಿಂಗ್ರಾ ಅವರು ಅಂತಾರಾಷ್ಟ್ರೀಯ ವ್ಯಾಪಾರ ಇಲಾಖೆ ಸ್ಥಾಪಿಸಿರುವ ಐದು ಸದಸ್ಯರ ಸಮಿತಿಯಲ್ಲಿ ಒಬ್ಬರಾಗಿದ್ದಾರೆ.

ಧಿಂಗ್ರಾ ಅವರ ಸಂಶೋಧನವು ಜಾಗತೀಕರಣ ಮತ್ತು ಕೈಗಾರಿಕಾ ನೀತಿಯ ಮೇಲೆ ಕೇಂದ್ರೀಕರಿಸಿದೆ. ಸಂಸ್ಥೆಗಳು ಮತ್ತು ಜಾಗತೀಕರಣದ ಕುರಿತಾದ ಕೆಲಸಗಳಿಗಾಗಿ ಅವರಿಗೆ ಯುರೋಪಿಯನ್ ಟ್ರೇಡ್ ಸ್ಟಡಿ ಗ್ರೂಪ್‌ನಿಂದ ಎಫ್‌ಐಡಬ್ಲ್ಯು ಯಂಗ್ ಎಕನಾಮಿಸ್ಟ್ ಪ್ರಶಸ್ತಿ ಮತ್ತು ಚೇರ್ ಜಾಕ್ವೆಮಿನ್ ಪ್ರಶಸ್ತಿಯನ್ನೂ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com