ಜಾಗತಿಕ ಕೋವಿಡ್ ಸಾವಿನ ಸಂಖ್ಯೆ 10 ಲಕ್ಷ ತಲುಪಿರುವುದು 'ಸಂಕಟ ಮೈಲಿಗಲ್ಲು'- ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಗುಟೇರಸ್

ಕೊರೋನಾ ವೈರಸ್(ಕೊವಿಡ್ -19) ಸೋಂಕಿನಿಂದ ವಿಶ್ವದಾದ್ಯಂತ ಸಾವಿನ ಸಂಖ್ಯೆ 10 ಲಕ್ಷ ತಲುಪಿರುವುದು ‘ಸಂಕಟದ ಮೈಲಿಗಲ್ಲು’ ಎಂದು ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್ ನೋವಿನಿಂದ ಹೇಳಿದ್ದಾರೆ.
ಅಂಟೊನಿಯೊ ಗುಟೆರೆಸ್
ಅಂಟೊನಿಯೊ ಗುಟೆರೆಸ್

ವಿಶ್ವಸಂಸ್ಥೆ: ಕೊರೋನಾ ವೈರಸ್(ಕೊವಿಡ್ -19) ಸೋಂಕಿನಿಂದ ವಿಶ್ವದಾದ್ಯಂತ ಸಾವಿನ ಸಂಖ್ಯೆ 10 ಲಕ್ಷ ತಲುಪಿರುವುದು ‘ಸಂಕಟದ ಮೈಲಿಗಲ್ಲು’ ಎಂದು ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್ ನೋವಿನಿಂದ ಹೇಳಿದ್ದಾರೆ. 

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ನವೀಕೃತ ವರದಿಯಂತೆ ವಿಶ್ವಾದ್ಯಂತ ಕೊವಿಡ್ ಸಾವುಗಳ ಸಂಖ್ಯೆ 10 ಲಕ್ಷ ದಾಟಿದ್ದು, 3 ಕೋಟಿ 30 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇದುವರೆಗೆ ದೃಢಪಟ್ಟಿವೆ. ಸೋಂಕಿನಿಂದ ಈವರೆಗೆ 2 ಕೋಟಿ 30 ಲಕ್ಷಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ.

‘ನಮ್ಮ ಪ್ರಪಂಚ ಸಂಕಟದ ಮೈಲಿಗಲ್ಲು ತಲುಪಿದೆ. ಕೊವಿಡ್ ಸಾಂಕ್ರಾಮಿಕ ರೋಗಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಇದು ತುಂಬಾ ನೋವಿನ ಸಂಗತಿಯಾಗಿದೆ. ಈ ಕಾಯಿಲೆಯ ತೀವ್ರತೆಯಿಂದ ಹೆಚ್ಚು ನೋವು ತರುತ್ತಿದೆ. ಪ್ರತಿಯೊಬ್ಬರೂ ದೃತಿಗೆಡದೆ, ಜೀವನದ ದೃಷ್ಟಿಯನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದು ಗುಟೆರೆಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕೊರೋನಾ ವೈರಸ್ ವಿಶ್ವದ ಆರ್ಥಿಕತೆ, ಸಾಮಾಜಿಕ, ರಾಜಕೀಯ ಪರಿಸ್ಥಿತಿ, ಸಾಮಾನ್ಯ ಜನಜೀವನ ಮೇಲೆ ಇನ್ನಿಲ್ಲದಂತ ಪರಿಣಾಮವನ್ನುಂಟು ಮಾಡಿದ್ದು, ಭಾರತ, ಬ್ರೆಜಿಲ್ ಮತ್ತು ಅಮೆರಿಕಾ ದೇಶಗಳು ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಅನುಭವಿಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com