ಡೊನಾಲ್ಡ್ ಟ್ರಂಪ್- ಜೋ ಬಿಡೆನ್
ಡೊನಾಲ್ಡ್ ಟ್ರಂಪ್- ಜೋ ಬಿಡೆನ್

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್-ಜೋ ಬಿಡೆನ್ ಮೊದಲ ಮುಖಾಮುಖಿ ಚರ್ಚೆಯಲ್ಲಿ ವೈಯಕ್ತಿಕ ನಿಂದನೆ!

ಅಮೆರಿಕ ಅಧ್ಯಕ್ಷೀಯ ಚುನಾವಣೆಯೆಂದರೆ ಮೊದಲು ನೆನಪಿಗೆ ಬರುವುದು ಅಭ್ಯರ್ಥಿಗಳ ನಡುವಿನ ಸಾರ್ವಜನಿಕ ಮುಖಾಮುಖಿ ಚರ್ಚೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯೆಂದರೆ ಮೊದಲು ನೆನಪಿಗೆ ಬರುವುದು ಅಭ್ಯರ್ಥಿಗಳ ನಡುವಿನ ಸಾರ್ವಜನಿಕ ಮುಖಾಮುಖಿ ಚರ್ಚೆ

ನವೆಂಬರ್ ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ತಯಾರಿ ನಡೆದಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎದುರಾಳಿ ಜೋ ಬಿಡೆನ್,  ಓಹಿಯೋ ನ ಕ್ಲೀವ್ಲ್ಯಾಂಡ್ ನಲ್ಲಿ ನಡೆದ ಮೊದಲ ಮುಖಾಮುಖಿ ಚರ್ಚೆಯಲ್ಲಿ ಭಾಗಿಯಾಗಿದ್ದರು. 

ಇಡೀ ಜಗತ್ತು ಆಸಕ್ತಿ ಹಾಗೂ ಕುತೂಹಲಗಳಿಂದ ನೋಡುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಗಳ ನಡುವಿನ ಚರ್ಚೆಯ ಕಾರ್ಯಕ್ರಮ ಈ ಬಾರಿ ಅತ್ಯಂತ ಕೆಳ ಮಟ್ಟಕ್ಕೆ ಹೋಗಿತ್ತು. ಮುಖಾಮುಖಿ ಚರ್ಚೆಯಲ್ಲಿ ಗಂಭೀರವಾದ ಚರ್ಚೆ ನಡೆಯುವ ಬದಲು ಕಾರ್ಯಕ್ರಮದ ಬಹುತೇಕ ಭಾಗ ಹಾಸ್ಯಗಾರ, ಸುಳ್ಳುಗಾರ, ಒಂದ್ ನಿಮಿಷ ಬಾಯಿ ಮುಚ್ಚಿಕೊಂಡಿರ್ತೀರಾ? ಎಂಬ ಶಬ್ದಪ್ರಯೋಗಗಳೇ ಕೇಳಿಬಂದಿತ್ತು. 

ಪದೇ ಪದೇ ಜೋ ಬಿಡೆನ್ ನತ್ತ ಬೆರಳು ತೋರುತ್ತಿದ್ದ ಟ್ರಂಪ್, ನಾವು ಮಾಡಿರುವಷ್ಟು ಕೆಲಸವನ್ನು ನೀವು ಎಂದಿಗೂ ಮಾಡಲು ಸಾಧ್ಯವಿಲ್ಲ, ನಿಮ್ಮ ರಕ್ತದಲ್ಲೇ ಅದು ಇಲ್ಲ ಎಂದರು. 

ಇದಕ್ಕೆ ಪ್ರತಿಯಾಗಿ ತಿರುಗೇಟು ನೀಡಿದ ಜೋ ಬಿಡೆನ್, ಡೊನಾಲ್ಡ್ ಟ್ರಂಪ್ ಇಲ್ಲಿ ಹೇಳುತ್ತಿರುವುದೆಲ್ಲಾ ಸುಳ್ಳು, ಈ ವ್ಯಕ್ತಿಗೆ ತಾನೇನು ಮಾತನಾಡುತ್ತಿದ್ದೇನೆಂಬುದರ ಅರಿವೇ ಇಲ್ಲ ಎಂದೂ ಮೂದಲಿಸಿದರು. ಅಷ್ಟೇ ಅಲ್ಲದೇ ತಮ್ಮನ್ನು ಪದೇ ಪದೇ ಮಾತನಾಡುವುದಕ್ಕೆ ಅಡ್ಡಿಪಡಿಸುತ್ತಿದ್ದ ಟ್ರಂಪ್ ವಿರುದ್ಧ ಹರಿಹಾಯ್ದ ಬಿಡೆನ್, ಒಂದ್ ನಿಮಿಷ ಬಾಯಿ ಮುಚ್ಚಿಕೊಂಡಿರ್ತೀರಾ? ಎಂದೂ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಇತ್ತೀಚಿನ ಅಧ್ಯಕ್ಷೀಯ ಚರ್ಚೆಗಳಲ್ಲೇ ಇದು ಅತ್ಯಂತ ಕಳಪೆ ಚರ್ಚೆ ಎನ್ನಿಸಿದ್ದು, ಈ ಬಗ್ಗೆ ಅಮೆರಿಕಾದ ಗಣ್ಯರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. 

ಚರ್ಚೆ ಪ್ರಾರಂಭವಾದ ಕೇವಲ 10 ನಿಮಿಷಗಳಲ್ಲೇ ಇಬ್ಬರೂ ನಾಯಕರು ವೈಯಕ್ತಿಕ ನಿಂದನೆಗೆ ಮುಂದಾದ ಹಿನ್ನೆಲೆಯಲ್ಲಿ ಇಡೀ ಕಾರ್ಯಕ್ರಮದಲ್ಲಿ ಗಂಭೀರವಾದ ಚರ್ಚೆ ಮೂಡುವುದಕ್ಕೆ ಸಾಧ್ಯವೇ ಆಗಲಿಲ್ಲ. ಪರಿಣಾಮ ಈ ಕಾರ್ಯಕ್ರಮ ನೋಡುವುದೇ ಹಿಂಸೆಯಾಯಿತು ಎನ್ನುತ್ತಾರೆ  ಮಿಸೌರಿಯ ಮಾಜಿ ಸೆನೆಟರ್

ವಾಷಿಂಗ್ ಟನ್ ಪೋಸ್ಟ್ ನ ಅಂಕಣಕಾರ ಯುಜೀನ್ ರಾಬಿನ್ಸನ್ ಚರ್ಚೆಯ ಬಗ್ಗೆ ಮಾತನಾಡಿದ್ದು ದೇಶದ ಬಹುತೇಕ ಜನರು ಈ ಚರ್ಚೆಯನ್ನು ನೋಡಿ ಆಶ್ಚರ್ಯಪಟ್ಟಿದ್ದಾರೆ, ನಾವು ಏನನ್ನು ನೋಡಿದೆವೆಂಬುದೇ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ. 

ಈ ಚರ್ಚೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೆಮಾಕ್ರೆಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್, ಅಮೆರಿಕಾಗೆ ಸ್ಪಷ್ಟವಾದ ಆಯ್ಕೆ ದೊರೆತಿದೆ. ಡೊನಾಲ್ಡ್ ಟ್ರಂಪ್ ಗೆ ನಿಭಾಯಿಸುವ ಸಾಮರ್ಥ್ಯವಿಲ್ಲ, ಆದರೆ ತಮ್ಮನ್ನು ಸಮರ್ಥಿಸಿಕೊಳ್ಳುತ್ತಿರುವ ವ್ಯಕ್ತಿ ಎಂದು ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಏಕೆ ಎರಡನೇ ಬಾರಿಗೆ ಆಯ್ಕೆ ಮಾಡಲು ಸೂಕ್ತ ವ್ಯಕ್ತಿಯಲ್ಲ ಎಂಬುದಕ್ಕೆ ಮೊದಲ ಚರ್ಚೆಯಲ್ಲೇ ಜನರಿಗೆ ಉತ್ತರ ದೊರೆತಿದೆ ಎಂದು ಬರಾಕ್ ಒಬಾಮ ಅವರ ಪ್ರಚಾರ ಡೇವಿಡ್ ಪ್ಲಫ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com