ಆಕ್ಸ್ಫರ್ಡ್-ಆಸ್ಟ್ರಾಜೆನಿಕಾ ಕೋವಿಡ್ ಲಸಿಕೆ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ 30 ಪ್ರಕರಣಗಳು ವರದಿ

ಬ್ರಿಟನ್ ನಲ್ಲಿ ಆಕ್ಸ್ಫರ್ಡ್-ಆಸ್ಟ್ರಾಜೆನಿಕಾ ಕೋವಿಡ್-19 ಲಸಿಕೆ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ 30 ಪ್ರಕರಣಗಳು ವರದಿಯಾಗಿವೆ. 

Published: 02nd April 2021 11:33 PM  |   Last Updated: 02nd April 2021 11:33 PM   |  A+A-


UK finds 30 blood clot cases after Oxford jab

ಆಕ್ಸ್ಫರ್ಡ್-ಆಸ್ಟ್ರಾಜೆನಿಕಾ ಕೋವಿಡ್ ಲಸಿಕೆ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ 30 ಪ್ರಕರಣಗಳು ವರದಿ

Posted By : Srinivas Rao BV
Source : PTI

ಲಂಡನ್: ಬ್ರಿಟನ್ ನಲ್ಲಿ ಆಕ್ಸ್ಫರ್ಡ್-ಆಸ್ಟ್ರಾಜೆನಿಕಾ ಕೋವಿಡ್-19 ಲಸಿಕೆ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ 30 ಪ್ರಕರಣಗಳು ವರದಿಯಾಗಿವೆ. 

ಬ್ರಿಟನ್ ನ ಔಷಧ ನಿಯಂತ್ರಕ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದ್ದು  ಆಕ್ಸ್ಫರ್ಡ್-ಆಸ್ಟ್ರಾಜೆನಿಕಾ ಕೋವಿಡ್-19 ಲಸಿಕೆ ಪಡೆದವರ ಪೈಕಿ 30 ಪ್ರಕರಣಗಳಲ್ಲಿ ಅತ್ಯಪರೂಪದ ರಕ್ತ ಹೆಪ್ಪುಗಟ್ಟುವಿಕೆ ವರದಿಯಾಗಿದೆ ಎಂದು ಹೇಳಿದೆ. 

ಆದರೆ ಈ ರಕ್ತ ಹೆಪ್ಪುಗಟ್ಟುವಿಕೆ ತುಂಬಾ ಕಡಿಮೆ ಮಟ್ಟದ ಅಪಾಯದ್ದಾಗಿದೆ ಎಂದೂ ಔಷಧ ನಿಯಂತ್ರಕ ಸಂಸ್ಥೆ ತಿಳಿಸಿದೆ. ಮಾ.24 ವರೆಗೆ ಬ್ರಿಟನ್ ನಲ್ಲಿ 18 ಮಿಲಿಯನ್ ಡೋಸ್ ನಷ್ಟು ಲಸಿಕೆಯನ್ನು ನೀಡಲಾಗಿದೆ. ಈ ರೀತಿಯ ರಕ್ತ ಹೆಪ್ಪುಗಟ್ಟುವಿಕೆಯ ಪರಿಣಾಮ ಜರ್ಮನಿ, ಫ್ರಾನ್ಸ್, ಕೆನಡಾಗಳಲ್ಲಿ ಲಸಿಕೆ ಪಡೆಯುವುದಕ್ಕೆ ಜನತೆ ಹಿಂಜರಿಯುವಂತೆ ಮಾಡಿದೆ. 

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp