ಕೊರೋನಾ ಹೆಚ್ಚಳ: ಏಪ್ರಿಲ್ 5 ರಿಂದ ಬಾಂಗ್ಲಾದೇಶದಲ್ಲಿ 7 ದಿನಗಳ ಲಾಕ್ ಡೌನ್

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ತತ್ತರಿಸಿ ಹೋಗಿರುವ ಬಾಂಗ್ಲಾದೇಶದಲ್ಲಿ ಇದೇ ಏಪ್ರಿಲ್ 5ರಿಂದ ಲಾಕ್ ಡೌನ್ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

Published: 03rd April 2021 02:03 PM  |   Last Updated: 03rd April 2021 02:39 PM   |  A+A-


Bangladesh-lockdown

ಬಾಂಗ್ಲಾದೇಶದಲ್ಲಿ ಲಾಕ್ ಡೌನ್ (ಸಂಗ್ರಹ ಚಿತ್ರ)

Posted By : Srinivasamurthy VN
Source : ANI

ಢಾಕಾ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ತತ್ತರಿಸಿ ಹೋಗಿರುವ ಬಾಂಗ್ಲಾದೇಶದಲ್ಲಿ ಇದೇ ಏಪ್ರಿಲ್ 5ರಿಂದ ಲಾಕ್ ಡೌನ್ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬಾಂಗ್ಲಾದೇಶ ಮಾಧ್ಯಮಗಳು ವರದಿ ಮಾಡಿದ್ದು, ಇದೇ ಸೋಮವಾರ ಅಂದರೆ ಏಪ್ರಿಲ್ 5 ರಿಂದಲೇ 7 ದಿನಗಳ ಲಾಕ್ ಡೌನ್ ಹೇರಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಕೇವಲ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿದೆ. 

ಲಾಕ್ ಡೌನ್ ಬಗ್ಗೆ ಬಾಂಗ್ಲಾದೇಶ ಸಾರಿಗೆ ಸಚಿವ ಒಬೇದುಲ್ ಖಾದರ್ ಅವರು ಘೋಷಣೆ ಮಾಡಿದ್ದಾರೆ ಎಂದು ಬಾಂಗ್ಲಾದೇಶ ಮಾಧ್ಯಮಗಳು ವರದಿ ಮಾಡಿವೆ. 

ಇನ್ನು ಬಾಂಗ್ಲಾದೇಶದಲ್ಲಿ ಕಳೆದ 7 ದಿನಗಳಿಂದ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಶುಕ್ರವಾರ ಬಾಂಗ್ಲಾದೇಶದಲ್ಲಿ 6,830 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಆ ಮೂಲಕ ಒಟ್ಟಾರೆ ಸೋಂಕಿತರು ಸಂಖ್ಯೆ 6,24,594ಕ್ಕೆ ಏರಿಕೆಯಾಗಿದೆ. ಇದು ಈ ವರೆಗಿನ ಗರಿಷ್ಠ  ಸಂಖ್ಯೆಯಾಗಿದ್ದು, ಹೊಸ ಸೋಂಕಿತರ ಪ್ರಮಾಣದಲ್ಲಿ ಏಕಾಏಕಿ ಶೇ.23.28ರಷ್ಟು ಏರಿಕೆಯಾಗಿದೆ. 

ಅಂತೆಯೇ ಶುಕ್ರವಾರ ಒಂದೇ ದಿನ 50 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಆ ಮೂಲಕ ಬಾಂಗ್ಲಾದೇಶದಲ್ಲಿ ಕೋವಿಡ್ ಸೋಂಕಿಗೆ ಬಲಿಯಾದವರ ಸಂಖ್ಯೆ 9,155ಕ್ಕೆ ಏರಿಕೆಯಾಗಿದೆ ಎಂದು ಬಾಂಗ್ಲಾದೇಶ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp