ಸದ್ಯ ಇರುವ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ವ್ಯಾಪಾರ ಸಾಧ್ಯವಿಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್

ಈಗಿನ ಪರಿಸ್ಥಿತಿಯಲ್ಲಿ ನೆರೆಯ ಭಾರತ ದೇಶದೊಂದಿಗೆ ಯಾವುದೇ  ರೀತಿಯ ವ್ಯಾಪಾರ ನಡೆಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ.

Published: 03rd April 2021 02:02 PM  |   Last Updated: 03rd April 2021 02:24 PM   |  A+A-


Imran khan

ಇಮ್ರಾನ್ ಖಾನ್

Posted By : Shilpa D
Source : PTI

ಇಸ್ಲಾಮಾಬಾದ್: ಈಗಿನ ಪರಿಸ್ಥಿತಿಯಲ್ಲಿ ನೆರೆಯ ಭಾರತ ದೇಶದೊಂದಿಗೆ ಯಾವುದೇ  ರೀತಿಯ ವ್ಯಾಪಾರ ನಡೆಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ.

ಭಾರತದಿಂದ ಹತ್ತಿ ಮತ್ತು ಸಕ್ಕರೆಯನ್ನು ಆಮದು ಮಾಡಿಕೊಳ್ಳಬೇಕು ಎಂಬ ಉನ್ನತಾಧಿಕಾರ ಸಮಿತಿಯೊಂದು ಮಾಡಿದ್ದ ಪ್ರಸ್ತಾವವನ್ನು ಪಾಕಿಸ್ತಾನ ಸಚಿವ ಸಂಪುಟ ತಿರಸ್ಕರಿಸಿತ್ತು.

ಶುಕ್ರವಾರ ನಡೆದ ಸಮಾಲೋಚನೆಯ ಬಳಿಕ ಪ್ರಧಾನಿ ಮಂತ್ರಿ ಕಚೇರಿಯು ಪರ್ಯಾಯವಾಗಿ ಇತರೆ ಅಗ್ಗದ ಮಾರ್ಗಗಳನ್ನು ಹುಡುಕಿಕೊಳ್ಳುವಂತೆ ವಾಣಿಜ್ಯ ಇಲಾಖೆಗೆ ಸೂಚನೆ ರವಾನಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ವ್ಯಾಪಾರ ಮುಂದುವರಿಸಲು ಸಾಧ್ಯವಿಲ್ಲ ಎಂಬ ನಿರ್ಧಾರವನ್ನು ಇಮ್ರಾನ್ ಖಾನ್  ಕೈಗೊಂಡಿದ್ದಾರೆ.

ಆರ್ಥಿಕ ಹಾಗೂ ವಾಣಿಜ್ಯ ದೃಷ್ಟಿಕೋನದಿಂದ ಆರ್ಥಿಕ ಸಮನ್ವಯ ಸಮಿತಿಯು (ಇಸಿಸಿ) ಅನೇಕ ಪ್ರಸ್ತಾಪಗಳನ್ನು ಮುಂದಿರಿಸಿತ್ತು. ಇಸಿಸಿ ಪರಿಗಣಿಸಿದ ಬಳಿಕ ಅಂತಿಮ ಅನುಮೋದನೆಗಾಗಿ ಸಂಪುಟದ ಮುಂದಿಡಲಾಗಿತ್ತು ಎಂದು ಡಾನ್ ಪತ್ರಿಕೆ ವರದಿ ಮಾಡಿತ್ತು.

ಈಗಿನ ಪರಿಸ್ಥಿತಿಯಲ್ಲಿ ದೇಶದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತದಿಂದ ಹತ್ತಿ ಹಾಗೂ ಸಕ್ಕರೆಯನ್ನು ಆಮದು ಮಾಡಿಕೊಳ್ಳಲು ಇಸಿಸಿ ಸಲಹೆ ಮಾಡಿತ್ತು.
 

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp