ಬ್ರಿಟನ್: ಆಸ್ಟ್ರಾಜೆನೆಕಾ ಲಸಿಕೆ ಪಡೆದಿದ್ದ 7 ಮಂದಿ ರಕ್ತ ಹೆಪ್ಪುಗಟ್ಟಿ ಸಾವು

ಆಸ್ಟ್ರಾಜೆನೆಕಾ-ಆಕ್ಸ್ ಫರ್ಡ್ ಸಂಸ್ಥೆಗಳು ಜಂಟಿಯಾಗಿ ಸಂಶೋಧಿಸಿರುವ ಕೋವಿಡ್ ಲಸಿಕೆ ಪಡೆದವರ ಪೈಕಿ 7 ಮಂದಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್ ನ ವೈದ್ಯಕೀಯ ನಿಯಂತ್ರಕ ಸಂಸ್ಥೆ (ಎಂಹೆಚ್ ಆರ್ ಎ) ಮಾಹಿತಿ ನೀಡಿದೆ.

Published: 03rd April 2021 04:45 PM  |   Last Updated: 03rd April 2021 04:57 PM   |  A+A-


AstraZeneca-Oxford

ಆಸ್ಟ್ರಾಜೆನಿಕಾ-ಆಕ್ಸ್ಫರ್ಡ್

Posted By : Srinivasamurthy VN
Source : AFP

ಲಂಡನ್: ಆಸ್ಟ್ರಾಜೆನೆಕಾ-ಆಕ್ಸ್ ಫರ್ಡ್ ಸಂಸ್ಥೆಗಳು ಜಂಟಿಯಾಗಿ ಸಂಶೋಧಿಸಿರುವ ಕೋವಿಡ್ ಲಸಿಕೆ ಪಡೆದವರ ಪೈಕಿ 7 ಮಂದಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್ ನ ವೈದ್ಯಕೀಯ ನಿಯಂತ್ರಕ ಸಂಸ್ಥೆ (ಎಂಹೆಚ್ ಆರ್ ಎ) ಮಾಹಿತಿ ನೀಡಿದೆ.

ಮಾರ್ಚ್ 24ರವರೆಗಿನ 30 ವರದಿಗಳಲ್ಲಿ ಬ್ರಿಟನ್ ನಲ್ಲಿ ಆಸ್ಟ್ರಾಜೆನೆಕಾ ಕೋವಿಡ್-19 ಲಸಿಕೆ ಸ್ವೀಕರಿಸಿದ 30 ಜನರಿಗೆ ರಕ್ತ ಹೆಪ್ಪುಗಟ್ಟಿದ್ದು, ಈ ಪೈಕಿ 7 ಮಂದಿ ಮೃತಪಟ್ಟಿದ್ದಾರೆ. ಬ್ರಿಟನ್ ನಲ್ಲಿ 18 ಮಿಲಿಯನ್ ಆಸ್ಟ್ರಾಜೆನೆಕಾ ಕೊರೊನಾ ವೈರಸ್ ಲಸಿಕೆ ಡೋಸ್ ಗಳನ್ನು ವಿತರಣೆ ಮಾಡಲಾಗಿದ್ದು, ಈ ಪೈಕಿ ಕೇವಲ 30  ರಕ್ತ ಹೆಪ್ಪುಗಟ್ಟುವ ಪ್ರಕರಣಗಳು ವರದಿಯಾಗಿವೆ. ಇದು ಕಳೆದ ತಿಂಗಳು ವರದಿಯಾದ ಪ್ರಕರಣಗಳಿಗಿಂತ 25 ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ.

ಇನ್ನು ಬ್ರಿಟನ್ ನಲ್ಲಿ ಮಾತ್ರವಲ್ಲದೇ ಜರ್ಮನಿ, ಫ್ರಾನ್ಸ್, ನೆದರ್‌ಲ್ಯಾಂಡ್ಸ್ ಮತ್ತು ಕೆನಡಾ ದೇಶಗಳಲ್ಲೂ ರಕ್ತ ಹೆಪ್ಪುಗಟ್ಟಿದ ಪ್ರಕರಣಗಳು ವರದಿಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಈ ದೇಶಗಳು ವಯಸ್ಸಾದ ಹಿರಿಯ ನಾಗರಿಕರಿಗೆ ಈ ಲಸಿಕೆ ಬಳಕೆ ಮಾಡದಂತೆ ನಿರ್ಬಂಧ ಹೇರಿದೆ. ಬ್ರಿಟನ್ ನಲ್ಲಿ ಮಾರ್ಚ್ 24ರ  ವರೆಗೆ ಒಟ್ಟು 22 ಸೆರೆಬ್ರಲ್ ವೇನ್ ಥ್ರಂಬೋಸಿಸ್ ಮತ್ತು ಎಂಟು ಥ್ರಂಬೋಸಿಸ್ ಪ್ರಕರಣಗಳು ವರದಿಯಾಗಿವೆ ಎಂದು ಸಂಸ್ಥೆ ತಿಳಿಸಿದೆ. 
 

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp