ನಗ್ನವಾಗಿ ಕಾಣಿಸಿಕೊಂಡ ದಕ್ಷಿಣ ಆಫ್ರಿಕಾ ನಾಯಕನ ಪತ್ನಿ; ಝೂಮ್ ಮೀಟಿಂಗ್ ದಿಢೀರ್ ಸ್ಥಗಿತ!

ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ ನಾಯಕರೊಬ್ಬರ ಪತ್ನಿ ವಿವಸ್ತ್ರವಾಗಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ದಿಢೀರ್ ಸ್ಥಗತಗೊಂಡ ಘಟನೆ ಬೆಳಕಿಗೆ ಬಂದಿದೆ.

Published: 04th April 2021 01:55 PM  |   Last Updated: 04th April 2021 02:06 PM   |  A+A-


Zoom meeting

ಝೂಮ್ ಮೀಟಿಂಗ್

Posted By : Srinivasamurthy VN
Source : Online Desk

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ ನಾಯಕರೊಬ್ಬರ ಪತ್ನಿ ವಿವಸ್ತ್ರವಾಗಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ದಿಢೀರ್ ಸ್ಥಗತಗೊಂಡ ಘಟನೆ ಬೆಳಕಿಗೆ ಬಂದಿದೆ.

ದಕ್ಷಿಣ ಆಫ್ರಿಕಾದ ಟ್ರೆಡಿಷನಲ್ ಪಕ್ಷದ ಸದಸ್ಯ ಕ್ಸೊಲೈಲ್ ಎನ್‌ಡ್ಯೂ ಅವರು ಮಾರ್ಚ್‌ 30ರಂದು ಕೊವಿಡ್‌-19ಗೆ ಸಂಬಂಧಿಸಿದ ಝೂಮ್ ವಿಡಿಯೊ ಸಂವಾದದಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ದಕ್ಷಿಣ ಆಫ್ರಿಕಾದ ಇತರ 23 ನಾಯಕರೂ ಹಾಜರಿದ್ದರು.

ಸಭೆಯಲ್ಲಿ ಕೋವಿಡ್‌ ಸಾವು ತಡೆಗೆ ಸ್ಥಳೀಯ ವೈದ್ಯರ ಜತೆ ಸೇರಿ ಏನೇನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಿಸುತ್ತಿದ್ದಾಗ ದಿಢೀರನೇ ನಾಯಕರೊಬ್ಬರ ಪತ್ನಿ ಆಕಸ್ಮಿಕವಾಗಿ ವಿವಸ್ತ್ರರಾಗಿ ಕ್ಯಾಮೆರಾ ಮುಂದೆ ಬಂದಿದ್ದಾರೆ. ಈ ದಿಢೀರ್ ಬೆಳವಣಿಗೆಯಿಂದಾಗಿ ಸಭೆಯಲ್ಲಿ ಹಾಜರಿದ್ದ ಇತರೆ ನಾಯಕರು  ತೀವ್ರ ಮುಜುಗರಕ್ಕೀಡಾದರು. ನಾಯಕ ಕ್ಸೊಲೈಲ್ ಪತ್ನಿ ವಿವಸ್ತ್ರರಾಗಿ ಕಾಣಿಸಿಕೊಂಡಾಗ ಇತರರು ನಗಾಡುತ್ತಿರುವುದು ಮತ್ತು ಸಂವಾದ ಆಯೋಜಿಸಿದ್ದ ಸಮಿತಿಯ ಅಧ್ಯಕ್ಷೆ ಫೈಥ್ ಮುಥಂಬಿ ಮಧ್ಯಪ್ರವೇಶಿಸಿ ಮಾತನಾಡಿದ್ದಾರೆ.

'ನಿಮ್ಮ ಹಿಂದೆ ಕಾಣಿಸಿಕೊಳ್ಳುತ್ತಿರುವವರು ಸರಿಯಾಗಿ ಬಟ್ಟೆ ಧರಿಸಿಲ್ಲ. ನಮಗೆ ಎಲ್ಲವೂ ಕಾಣಿಸುತ್ತಿದೆ. ದಯವಿಟ್ಟು ಗಮನಹರಿಸಿ. ನಾವು ಮೀಟಿಂಗ್‌ನಲ್ಲಿದ್ದೇವೆ ಎಂದು ಅವರಿಗೆ ತಿಳಿಸಿ’ ಮುಥಂಬಿ ಮನವಿ ಮಾಡಿದ್ದಾರೆ. ಈ ರೀತಿ ಆಗಿರುವುದು ಇದೇ ಮೊದಲಲ್ಲ. ಪ್ರತೀ ಭಾರಿ ಸಭೆ ನಡೆದಾಗಲೂ ಇಂತಹ ಘಟನೆಗಳು  ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ. ಅಷ್ಟರಲ್ಲಿ ಮುಜುಗರಕ್ಕೀಡಾದಂತೆ ಕಂಡುಬಂದ ಕ್ಸೊಲೈಲ್ ಬಳಿಕ ಕ್ಷಮೆ ಯಾಚಿಸಿದ್ದಾರೆ.

'ನಾನು ಕ್ಯಾಮರಾವನ್ನೇ ಗಮನಿಸುತ್ತಿದ್ದೆ. ಹೀಗಾಗಿ ಹಿಂದೆ ಏನಾಗುತ್ತಿದೆ ಎಂಬುದು ನನ್ನ ಅರಿವಿಗೆ ಬರಲಿಲ್ಲ. ಈ ಝೂಮ್ ತಂತ್ರಜ್ಞಾನ ನಮಗೆ ಹೊಸದು. ಇದರ ಬಗ್ಗೆ ನಮಗೆ ಸರಿಯಾದ ತರಬೇತಿ ಇಲ್ಲ. ನಮ್ಮ ಮನೆಗಳು ಆನ್‌ಲೈನ್‌ ಮೀಟಿಂಗ್‌ಗಳ ವೇಳೆ ಖಾಸಗಿತನ ಕಾಯ್ದುಕೊಳ್ಳುವುದಕ್ಕೆ ಪೂರಕವಾಗಿಲ್ಲ. ರಾತ್ರಿ  10 ಗಂಟೆಗೆ ಮುಗಿಯಬೇಕಿದ್ದ ಸಭೆ ಮತ್ತೂ ಮುಂದುವರಿದಿದ್ದಾಗ ಸ್ನಾನಕ್ಕೆ ತೆರಳಲೆಂದು ಪತ್ನಿ ಹಿಂದಿನಿಂದ ಬಂದಿದ್ದಳು. ನಾನದನ್ನು ಗಮನಿಸಲಿಲ್ಲ. ಕ್ಷಮೆ ಇರಲಿ’ ಎಂದು ಕ್ಸೊಲೈಲ್ ನ್ಡೈವು ಹೇಳಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp