ಸೂಯೆಜ್ ಕಾಲುವೆಯಲ್ಲಿ ಉಂಟಾಗಿದ್ದ ಟ್ರಾಫಿಕ್ ಜಾಮ್ ಸಂಪೂರ್ಣ ತೆರವು, ಸಾಲಿನ ಕೊನೆಯ ಹಡಗು ಶನಿವಾರ ಪ್ರಯಾಣ!

ಸೂಯೆಜ್ ಕಾಲುವೆಯಲ್ಲಿ ಎವರ್ ಗಿವೆನ್ ಟ್ರಾಫಿಕ್ ಜಾಮ್ ನಿಂದಾಗಿ ಸಿಲುಕಿಕೊಂಡಿದ್ದ ಎಲ್ಲ ಹಡಗುಗಳೂ ಕಾಲುವೆ ಮೂಲಕ ಹಾದು ಹೋಗಿವೆ ಎಂದು ತಿಳಿದುಬಂದಿದೆ.

Published: 04th April 2021 11:16 AM  |   Last Updated: 05th April 2021 12:57 PM   |  A+A-


Suez Canal

ಸೂಯೆಜ್ ಕಾಲುವೆ (ಪಿಟಿಐ ಚಿತ್ರ)

Posted By : Srinivasamurthy VN
Source : AFP

ಕೈರೋ: ಸೂಯೆಝ್ ಕಾಲುವೆಯಲ್ಲಿ ಎವರ್ ಗಿವೆನ್ ಟ್ರಾಫಿಕ್ ಜಾಮ್ ನಿಂದಾಗಿ ಸಿಲುಕಿಕೊಂಡಿದ್ದ ಎಲ್ಲ ಹಡಗುಗಳೂ ಕಾಲುವೆ ಮೂಲಕ ಹಾದು ಹೋಗಿವೆ ಎಂದು ತಿಳಿದುಬಂದಿದೆ.

ಎವರ್ ಗ್ರೀನ್ ಸಂಸ್ಥೆಯ ಸುಮಾರು 22 000ಕ್ಕೂ ಸಾವಿರಕ್ಕೂ ಅಧಿಕ ಕಂಟೈನರ್ ಗಳನ್ನು ಹೊಂದಿದ್ದ ಎವರ್ ಗಿವೆನ್ ಹಡಗು ಸೂಯೆಜ್ ಕಾಲುವೆಯಲ್ಲಿ ಹೂಳಿನಲ್ಲಿ ಸಿಲುಕಿ ಕಾಲುವೆಗೆ ಅಡ್ಡಲಾಗಿ ನಿಂತಿತ್ತು. ಸುಮಾರು 6 ದಿನಗಳ ನಿರಂತರ ಕಾರ್ಯಾಚರಣೆ ಬಳಿಕ ಈ ಬೃಹತ್ ಹಡಗನ್ನು ಟಗ್ ಬೋಟ್ ಮತ್ತು ಡ್ರೆಡ್ಜ್  ರಗಳ ನೆರವಿನಿಂದ ಪಕ್ಕಕ್ಕೆ ಸರಿಸಿ ಮತ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಇದೀಗ ಈ ಎವರ್ ಗಿವೆನ್ ಹಡಗಿನಿಂದ ಉಂಟಾಗಿದ್ದ ಸಂಪೂರ್ಣ ಟ್ರಾಫಿಕ್ ಜಾಮ್ ಮುಕ್ತಾಯವಾಗಿದ್ದು,  ಶನಿವಾರ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದ ಕೊನೆಯ ಹಡಗು ಸೂಯೆಜ್ ಕಾಲುವೆಯಲ್ಲಿ ಹಾದುಹೋಗಿದೆ.

ಎವರ್ ಗಿವೆನ್ ಟ್ರಾಫಿಕ್ ಜಾಮ್ ಕುರಿತು ತನಿಖೆ
'ಎವರ್ ಗಿವನ್' ಹಡಗು ಅಡ್ಡಕ್ಕೆ ಸಿಲುಕಿಕೊಂಡು ಆರು ದಿನಗಳ ಕಾಲ ಕಾಲುವೆಯ ಸಾರಿಗೆಯನ್ನು ತಡೆಯಲು ಏನು ಕಾರಣ ಎಂಬ ಬಗ್ಗೆ ಸೂಯೆಝ್ ಕಾಲುವೆ ಪ್ರಾಧಿಕಾರವು ಬುಧವಾರ ತನಿಖೆಯೊಂದನ್ನು ಆರಂಭಿಸಿದೆ. ''ತನಿಖೆ ಸರಿಯಾಗಿ ನಡೆಯುತ್ತಿದೆ ಹಾಗೂ ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿದೆ.  ಬಳಿಕ, ನಾವು ಅದರ ವರದಿಯನ್ನು ಪ್ರಕಟಿಸುತ್ತೇವೆ'' ಎಂದರು. 'ಎವರ್ ಗಿವನ್' ಹಡಗು ಕಾಲುವೆಯಲ್ಲಿ ಅಡ್ಡಕ್ಕೆ ಸಿಕ್ಕಿಹಾಕಿಕೊಳ್ಳಲು ಕಾರಣವಾದ ಅಂಶಗಳ ಬಗ್ಗೆ ನಡೆದ ತನಿಖೆಯ ವರದಿಯು ಶೀಘ್ರದಲ್ಲೇ ಕೈಸೇರಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಉಸಾಮ ರಾಬಿ ಈ ಸ್ಥಳೀಯ ಸುದ್ದಿವಾಹಿನಿಯೊಂದಕ್ಕೆ ನೀಡಿದ  ಸಂದರ್ಶನದಲ್ಲಿ ಹೇಳಿದರು.

ಶನಿವಾರ ಕಾಲುವೆಯ ಎರಡೂ ಬದಿಗಳಿಂದ 85 ಹಡಗುಗಳು ದಾಟಿವೆ ಎಂದು ಅವರು ಹೇಳಿದರು. ಈ ಪೈಕಿ 61 ಹಡಗುಗಳು ಕಾಲುವೆ ತೆರವುಗೊಳ್ಳುವ ಮೊದಲು ಬಾಕಿಯಾಗಿದ್ದ ಹಡಗುಗಳಾಗಿದ್ದವು ಎಂದು ಹೇಳಿದ್ದಾರೆ. ಕಳೆದ ಸೋಮವಾರ 400 ಮೀಟರ್ ಉದ್ದದ 'ಎವರ್ ಗಿವನ್' ಹಡಗನ್ನು ಸರಿಸಿ ಕಾಲುವೆಯನ್ನು  ತೆರವುಗೊಳಿಸಲಾಗಿತ್ತು. ಆ ವೇಳೆಗೆ 422 ಹಡಗುಗಳು ಕಾಲುವೆಯಲ್ಲಿ ಬಾಕಿಯಾಗಿದ್ದವು.

ಏನಿದು ಘಟನೆ?
ಮೆಡಿಟರೇನಿಯನ್ ಸಮುದ್ರದಿಂದ ಕೆಂಪು ಸಮುದ್ರದ ಕಡೆಗೆ ಬರುತ್ತಿದ್ದ ಎವರ್‌ ಗಿವೆನ್ ಹಡಗು, ಸುಯೆಜ್ ಕಾಲುವೆಯ ದಕ್ಷಿಣದ ತುದಿಯಲ್ಲಿ ಕೆಟ್ಟು ನಿಂತಿತ್ತು. ಈ ಹಡಗು ಸುಮಾರು 400 ಮೀಟರ್‌ ಉದ್ಧವಿದ್ದು,  2 ಲಕ್ಷ ಟನ್ ತೂಕವನ್ನು ಹೊಂದಿದೆ. ಈ ಹಡಗಿನಲ್ಲಿ ಸುಮಾರು 22,000 ಕಂಟೈನರ್ ಗಳನ್ನು  ಸಾಗಿಸಲಾಗುತ್ತಿತ್ತು. ಹಡಗು ಸುಯೆಜ್ ಕಾಲುವೆಯಲ್ಲಿ ಕೆಟ್ಟು ನಿಂತಾಗ ಇದೇ ವೇಳೆ ಬಿರುಗಾಳಿ ಬೀಸಿದ ಕಾರಣ, ಹಡಗಿನ ಮುಂಭಾಗ ದಕ್ಷಿಣದ ಕಡೆಗೆ, ಹಿಂಭಾಗ ಉತ್ತರದ ಕಡೆಗೆ ತೇಲಿದೆ. ಇದನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಹಡಗು ಕಾಲುವೆಗೆ ಅಡ್ಡಲಾಗಿ ನಿಂತಿದೆ.  ಆದರೆ, ಹಡಗಿನ ಮುಂಭಾಗ ಮತ್ತು  ಹಿಂಭಾಗವು ಕಾಲುವೆಯ ಅಂಚಿನಲ್ಲಿ ಇರುವ ಮರಳಿನಲ್ಲಿ ಸಿಲುಕಿಕೊಂಡಿತ್ತು. ಮರಳಿನಿಂದ ಅದನ್ನು ಬಿಡಿಸಲು ಸಾಧ್ಯವಾಗದೆ ಕಾಲುವೆ ಸಂಪೂರ್ಣವಾಗಿ ಬಂದ್ ಆಗಿತ್ತು.
 

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp